ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೆ ತುತ್ತಾದ ಬಾಲಕನನ್ನು ಪಿಐ ಸಿದ್ದಪ್ಪ ಸಿಮಾನಿ ಭೇಟಿ ಮಾಡಿ ದೈರ್ಯ ತುಂಬಿದ್ರು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಹಣ್ಣು ಹಂಪಲು ನೀಡಿ ಸಂತೈಸಿದರು. ಅಂದಹಾಗೆ, ಕಳೆದ ವರ್ಷವಷ್ಟೇ ತಾಯಿ ಕಳೆದುಕೊಂಡು ಅನಾಥರಾಗಿರೋ ಮೂವರು ಬಾಲಕರಿಗೆ, ತಂದೆಯ ನಿರ್ಲಕ್ಷವೂ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರ ಜೊತೆ ನಿನ್ನೆ ಸನವಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ಈ ಕಾರಣಕ್ಕಾಗಿ, ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ ಕೂಡ ಪರದಾಡುತ್ತಿದ್ದ ಬಾಲಕರಿಗೆ ಪೊಲೀಸ್ ಇಲಾಖೆಯಿಂದ ನೆರವು ನೀಡಲಾಗಿದೆ. ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿ ಇಡೀ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬಡ ಬಾಲಕರ ನೆರವಿಗೆ ಬಂದಿದ್ದಾರೆ.
Top Stories
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ
ಹುನಗುಂದದಲ್ಲಿ ಬೋರವೆಲ್ ನಿಂದ ವಿದ್ಯುತ್ ಪ್ರವಹಿಸಿ ಯುವಕನ ದಾರುಣ ಸಾವು..! ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗದ್ದೆಯಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕನೋರ್ವ ವಿದ್ಯುತ್ ಸ್ಪರ್ಶಿಸಿ ದಾರುಣ ಸಾವು ಕಂಡಿದ್ದಾನೆ. ಜೊತೆಗೆ ತನ್ನ ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಈ ಮೂಲಕ ತಾಲೂಕಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನೇತ್ರದಾನ ಮಾಡಿದ ಯುವಕನಾಗಿ ಪ್ರೇರಕ ಶಕ್ತಿಯಾಗಿದ್ದಾನೆ. ಜಿನೇಂದ್ರ ಪಾರ್ಶ್ವನಾಥ್ ಬಸ್ತವಾಡ್ (18) ಎಂಬುವ ಯುವಕನೇ ದಾರುಣ ಸಾವು ಕಂಡಿದ್ದು, ಇಂದು ಬುಧವಾರ ತನ್ನ ಗದ್ದೆಯಲ್ಲಿ ಬೋರವೆಲ್ ಶುರು ಮಾಡಲು ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಹಿಡಿದು ವಿದ್ಯುತ್ ಪ್ರವಹಿಸಿದೆ. ಹೀಗಾಗಿ, ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನಿಗೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸಾವಿನಲ್ಲೂ ಸಾರ್ಥಕತೆ..! ಇನ್ನು, ಯುವಕ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ನಂತರ ಆತನ ನೇತ್ರದಾನ ಮಾಡಲು ಶಿರಸಿಯ ಲಯನ್ಸ್ ನಯನ ನೇತ್ರ ಭಂಡಾರಕ್ಕೆ ಸಂಪರ್ಕಿಸಿದ್ದಾರೆ....
ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!
ನಿಜ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ರಾಜಕೀಯವಾಗಿ ಅದೇನೋ ನಂಗೆ ಗೊತ್ತಿಲ್ಲ. ಆದ್ರೆ ಮಾನವೀಯ ಮೌಲ್ಯಗಳ ವಿಷಯಕ್ಕೆ ಬಂದ್ರೆ ಬಹುಶಃ ಕ್ಷೇತ್ರದಲ್ಲಿ ಮನೆ ಮನೆಗೂ ಶಿವರಾಂ ಹೆಬ್ಬಾರ್ ರವರ ಆಸರೆಯ ಅರಿವು ಇದೆ. ಮನೆ ಮನೆಯಲ್ಲೂ ಸಾಂತ್ವನದ ಕಿರಿಬೆರಳಿನ ಆಸರೆಗಳಿವೆ. ಇವತ್ತೂ ಕೂಡ ಅದೇ ಶಿವರಾಂ ಹೆಬ್ಬಾರ್ ನೊಂದಿದ್ದ ಒಂದಿಡೀ ಕುಟುಂಬಕ್ಕೆ ಕಿರಿಬೆರಳಿನ ಆಸರೆ ನೀಡಿದ್ದಾರೆ. ಬಡಬಾಲಕರ ಭವಿಷ್ಯತ್ತಿಗೆ ಬೆಳಕಾಗಿದ್ದಾರೆ. ಅಸಲು, ನಿನ್ನೆ ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ಬಡ ಬಾಲಕರ ಕುರಿತು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಿನ್ನೆಯಿಂದಲೂ..! ಅವ್ರು ಅಕ್ಷರಶಃ ಅನಾಥ ಸ್ಥಿತಿಯಲ್ಲಿರೋ ಬಾಲಕರು, ತಾಯಿ ಕಳೆದ ವರ್ಷವಷ್ಟೇ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಅಪ್ಪ ಅನ್ನಿಸಿಕೊಂಡ ವ್ಯಕ್ತಿ ಮಕ್ಕಳ ಬಗ್ಗೆ ಕಣ್ಣೆತ್ತಿಯೂ ನೋಡಲ್ಲ. ಹೀಗಾಗಿ, ಇದೇ ವೇಳೆ ನಾಯಿಗಳ ದಾಳಿಗೆ ತುತ್ತಾದ ಏಳು ವರ್ಷದ ಕಂದಮ್ಮನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೂ ದುಡ್ಡಿಲ್ಲ. ಬಾಲಕನ ಅಣ್ಣ 17 ವರ್ಷದ ನಾಗರಾಜ ತನ್ನ ತಮ್ಮನ ಚಿಕಿತ್ಸೆಗಾಗಿ ಅಲೆಯುತ್ತಿದ್ದ. ಇದೇ ವೇಳೆ ಪೊಲೀಸಪ್ಪನ...
ಸನವಳ್ಳಿಯ ಬಡ ಬಾಲಕರ ಕಷ್ಟಕ್ಕೆ ಹೃದಯವಂತರ ಸ್ಪಂಧನೆ, ಮಾನವೀಯತೆ ತೋರಿದ್ರು ಅಧಿಕಾರಿಗಳು..!
ನಿಜಕ್ಕೂ ನನ್ನ ಕಣ್ಣಂಚಲ್ಲಿ ಹನಿಗಳು ಜಿನುಗುತ್ತಿದೆ. ಸನವಳ್ಳಿಯ ಬಾಲಕರ ಕರುಣಾಜನಕ ಕತೆ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರ ಆಗಿದ್ದೇ ತಡ, ಹತ್ತಾರು ಪೋನ್ ಕಾಲ್ ಗಳು, ನೂರಾರು ಮೆಸೇಜ್ ಗಳು, ಅಣ್ಣಾ ಆ ಬಾಲಕರಿಗೆ ನಾವೂ ನಮ್ಮ ಕೈಲಾದಷ್ಟು ಸಹಾಯ ಮಾಡ್ತಿವಿ ದಯವಿಟ್ಟು ಅವ್ರ ಅಕೌಂಟ್ ನಂಬರ್ ಕಳಿಸಿ ಅಂತಾ ಬೆಂಗಳೂರು ಸೇರಿ ರಾಜ್ಯದ ಹಲವೆಡೆಯಿಂದ ಹೃದಯವಂತರು ಕೇಳಿಕೊಳ್ತಿದಾರೆ. ಆ ಬಡ ಬಾಲಕರ ಜೊತೆ ನಾವಿದ್ದೇವೆ ಏನು ಕಳಿಸಬೇಕು ಹೇಳಿ ಕಳಿಸಿ ಕೊಡ್ತಿವಿ ಅಂತಾ ಹೃದಯ ತುಂಬಿದ ಭಾವುಕ ನುಡಿಗಳನ್ನ ಆಡಿದ್ದಾರೆ ಹಲವ್ರು. ಹೀಗಾಗಿ ಸದ್ಯ ಆ ಬಾಲಕರಿಗೆ ಸಹಾಯ ಮಾಡುವ ಮನಸ್ಸುಳ್ಳ ಹೃದಯವಂತರಿಗೆ ನನ್ನದೊಂದು ಬಿಗ್ ಸಲಾಂ..! ********************** ಸಹಾಯ ಮಾಡಲು ಬಯಸುವವರು ಈ ನಂಬರ್ ಗೆ ಪೋನ್ ಪೇ ಮಾಡಬಹುದು.. ಪೋನ್ ಪೇ ನಂ. 9741198875 ಗೆ ಹಣ ಕಳಿಸಬಹುದು. ಅಥವಾ ಅಕೌಂಟ್ ನಂಬರ್: Account no:32371005770 IFSC: SBIN0040613 Bank:SBI mundgod Name:Sampthkumar s kyamanakeri...
ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!
ನಿಜಕ್ಕೂ ಇದೊಂದು ಹೃದಯ ಹಿಂಡುವ ಕರುಣಾಜನಕ ಕತೆ. ಮುಂಡಗೋಡ ತಾಲೂಕಿನ ಸನವಳ್ಳಿಯ ಅದೊಬ್ಬ ಬಾಲಕನ ಮನಮಿಡಿಯುವ ಕತೆ. ಆತನ ಹೆಸ್ರು ಗುತ್ತೆಪ್ಪ.. ಈಗಿನ್ನೂ 7 ವರ್ಷದ ಬಾಲಕ. ಆತನಿಗೆ ಹಡೆದವ್ವ ಇಲ್ಲ. ತಾಯಿ ತೀರಿಕೊಂಡು ವರ್ಷ ಕಳೆದಿದೆ. ಹಡೆದ ತಂದೆಗೆ ಅದೇನಾಗಿದೆಯೋ ಗೊತ್ತಿಲ್ಲ. ಮಕ್ಕಳ ಬಗ್ಗೆ ಕ್ಯಾರೇ ಇಲ್ಲ. ಮೇಲಾಗಿ ಆ ಬಾಲಕನಿಗೆ ಮಾತೇ ಬರಲ್ಲ. ಇವನೊಬ್ಬನೇ ಅಲ್ಲ ಈತನಿಗೆ ಇನ್ನಿಬ್ಬರು ಅಣ್ಣಂದಿರು ಇದ್ದಾರೆ. ಓರ್ವ ಅಣ್ಣನ ಹೆಸ್ರು ನಾಗರಾಜ ಆತನಿಗೆ 17 ವರ್ಷ ವಯಸ್ಸು, ಮತ್ತೋರ್ವ ಅಣ್ಣ ಚಂದ್ರು ಆತನ ವಯಸ್ಸು 14 ಹೀಗಿರೋ ಇವ್ರೇಲ್ಲರ ಕತೆಯೂ ಅಷ್ಟೇ, ಇವ್ರೇಲ್ಲ ಈಗ ಅಕ್ಷರಶಃ ಅನಾಥರು. ಹೀಗಿರೋವಾಗಲೇ ಆ ಬಾಲಕನಿಗೆ ನಾಯಿಗಳ ಹಿಂಡು ದಾಳಿ ಮಾಡಿದೆ. ದುರಂತ ಅಂದ್ರೆ ಇದೇ ಅಲ್ವಾ..? ಹೀಗಿದ್ದಾಗಲೇ ಆ ಮೂಕ ಬಾಲಕ 7 ವರ್ಷ ವಯಸ್ಸಿನ ಗುತ್ತೆಪ್ಪನಿಗೆ ನಿನ್ನೆ ಬೀದಿನಾಯಿಗಳ ಹಿಂಡು ಮನಸೋ ಇಚ್ಚೆ ಕಚ್ಚಿ ಗಾಯಗೊಳಿಸಿವೆ. ಆಟವಾಡುತ್ತಿದ್ದಾಗ ದಾಳಿ ಮಾಡಿರೋ ನಾಯಿಗಳು ಬಡಬಾಲಕನಿಗೆ ಇನ್ನಿಲ್ಲದಂತೆ...
ನೌಕರರ ವರ್ಗಾವಣೆಯಲ್ಲಿ ಪತಿ, ಪತ್ನಿಯರಿಗಷ್ಟೇ ಅಲ್ಲ ಪೊಲೀಸರಿಗೂ ವಿನಾಯಿತಿ ನೀಡಿ, 16A ತಿದ್ದುಪಡಿ ವಿರುದ್ಧ ಪೊಲೀಸ್ ಪೇದೆಗಳ ಮೂಕರೋಧನ..!
ಇದು ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ ಅಂತಲೇ ಹೇಳಲಾಗ್ತಿದೆ. ಅದ್ರಲ್ಲೂ ನಮ್ಮ ರಕ್ಷಣೆಗಾಗಿ ಹಗಲಿರುಳು ರಜೆಯಿಲ್ಲದೇ ದುಡಿಯೋ ಪೊಲೀಸರಿಗೆ ಸರ್ಕಾರದ ಅದೊಂದು ಕಾನೂನು ಇಡಿ ಇಡಿಯಾಗಿ ನೋವು ಮತ್ತು ಆತಂಕಕ್ಕೆ ದೂಡಿದೆ ಅಂತಾ ಖುದ್ದು ಪೊಲೀಸ್ ಇಲಾಖೆಯ ಅಸಂಖ್ಯ ಪೇದೆಗಳು ಅಲವತ್ತುಕೊಂಡಿದ್ದಾರೆ. ರಾಜ್ಯ ಸರ್ಕಾರ ಸದ್ಯ 16 A ಕಾಲಂ ನ್ನು ತಿದ್ದುಪಡಿ ಮಾಡಿರೋದು ಸಾಕಷ್ಟು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ. ಏನದು ತಿದ್ದುಪಡಿ..? ಈ ಹಿಂದೆ 16A ಕಾಲಂ ಅಡಿಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಬಲಿಷ್ಟ ಕಾನೂನು ಇತ್ತು. ಅದರ ಪ್ರಕಾರ ಅದ್ಯಾವುದೇ ಜಿಲ್ಲೆಯಲ್ಲಿ 7 ವರ್ಷ ಕಾರ್ಯನಿರ್ವಹಿಸಿದ್ರೆ ಆ ನಂತರದಲ್ಲಿ ತಮ್ಮ ಸ್ವಂತ ಜಿಲ್ಲೆ ಅಥವಾ ತಮಗಿಷ್ಟವಾದ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದಿತ್ತು. ಆದ್ರೆ, ಸದ್ಯ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರೋ ಕಾನೂನಿನ ಪ್ರಕಾರ ಇನ್ಮೇಲೆ ಪೊಲೀಸರು ಅದೇಲ್ಲಿ ನಿಯುಕ್ತಿ ಹೊಂದಿ ನೌಕರಿ ಪ್ರಾರಂಭಿಸಿದ್ದರೋ ಅದೇ ಜಿಲ್ಲೆಯಲ್ಲಿ ನಿವೃತ್ತಿ ಹೊಂದಬೇಕಿದೆ. ಹೀಗಾಗಿ, ದೂರದ ಜಿಲ್ಲೆಗಳಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸ್ತಿರೋ...
ಬಡ ಮಕ್ಕಳ ಗೋಳಿಗೆ ಸ್ಪಂಧಿಸಿದ್ರು ಸಿಡಿಪಿಓ ದೀಪಕ್ಕ, ಕಾರ್ಮಿಕರ ಮಕ್ಕಳಿಗೆ ದೊರೆಯಿತು ಆಸರೆ..!
ಮುಂಡಗೋಡ ತಾಲೂಕಿನ ಹುನಗುಂದ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ಬಡ ಕಾರ್ಮಿಕರ ಮಕ್ಕಳಿಗೆ ಅಂತೂ ಇಂತೂ ಆಸರೆ ಸಿಕ್ಕಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಸಿಡಿಪಿಓ ದೀಪಾ ಬಂಗೇರ್ ಮೇಡಮ್ಮು ಹುನಗುಂದಕ್ಕೆ ಧಾವಿಸಿ ಬಂದಿದ್ದಾರೆ. ಬಡಮಕ್ಕಳ ಗೋಳು ಕಣ್ಣಾರೆ ಕಂಡಿದ್ದಾರೆ. ಮಮ್ಮಲ ಮರುಗಿದ್ದಾರೆ. ಇಲಾಖೆಯಿಂದ ಅದೇನೇನು ಸೌಲಭ್ಯ ಇದೆಯೋ ಅದನ್ನೇಲ್ಲ ಯಥಾವತ್ತಾಗಿ ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ, ಪುಟ್ಟ ಕಂದಮ್ಮಗಳ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಹೀಗಾಗಿ, ದೀಪಕ್ಕನ ಕರ್ತವ್ಯಪರತೆಗೆ ಧನ್ಯವಾದ ಹೇಳಲೇಬೇಕಿದೆ. ಪ್ರತೀ ವರ್ಷದ ಗೋಳು..! ಅಸಲು, ಸಿಡಿಪಿಓ ದೀಪಕ್ಕರ ಎದುರಿಗೇ ಕಂದಮ್ಮಗಳ ಪೋಷಕರು ಹೇಳಿದಂತೆ, ಇಲ್ಲಿನ ಅಂಗನವಾಡಿ ಕಾರ್ಯಕರ್ತರು ಇವರನ್ನ ಯಾರೂ ಕ್ಯಾರೇ ಮಾಡಿರಲಿಲ್ಲ. ಹಾಗೆ ನೋಡಿದ್ರೆ ಇದು ಇವತ್ತಿನ ಮಾತಲ್ಲ. ಪ್ರತೀ ವರ್ಷವೂ ಕಬ್ಬು ಕಟಾವಿಗೆ ಬರುವ ಕೂಲಿ ಕಾರ್ಮಿಕರು ತಮ್ಮೀಡಿ ಕುಟುಂಬವನ್ನೇ ಇಲ್ಲಿ ಹೊತ್ತು ತಂದಿರುತ್ತಾರೆ. ಈ ವೇಳೆ ಆ ಕುಟುಂಬಗಳಲ್ಲಿ ಪುಟ್ಟ ಪುಟ್ಟ ಮಕ್ಕಳೂ ಇರತ್ತೆ. ಪ್ರಾಥಮಿಕ ಶಾಲೆಯಲ್ಲಿ ಕಲಿಯಬೇಕಿದ್ದ...
ಈ ಮಕ್ಕಳು ಬಡವರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪಾ..? ಮಕ್ಕಳ ಕಲ್ಯಾಣದ ಹೊಣೆ ಹೊತ್ತ ಅಧಿಕಾರಿಗಳೇ ಗಮನಿಸಿ, ಒಣಗುತ್ತಿವೆ ಕಂದಮ್ಮಗಳು..!
ಮುಂಡಗೋಡ: ಸರ್ಕಾರ ಬಡ ಮಕ್ಕಳಿಗೆ ಅಂತಾ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲೂ ಹಳ್ಳಿಗಾಡಿನ ಕಂದಮ್ಮಗಳಿಗೆ ಯಾವುದೇ ಅಪೌಷ್ಟಿಕತೆ ಬರದೆ ಇರಲಿ ಅಂತಾ ಅಂಗನವಾಡಿಗಳ ಮೂಲಕ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಅಲ್ಲದೇ ವಲಸೆ ಬರುವ ಕುಟುಂಬಗಳ ಮಕ್ಕಳಿಗಾಗೇ ಆಯಾ ವ್ಯಾಪ್ತಿಯ ಅಂಗನವಾಡಿಗಳ ಮೂಲಕ ವಿಶೇಷ ಕಾಳಜಿಗಳನ್ನೂ ವ್ಯವಸ್ಥೆ ಮಾಡಿದೆ. ಒಣಗುತ್ತಿವೆ ಕಂದಮ್ಮಗಳು..! ಆದ್ರೆ ಮುಂಡಗೋಡ ತಾಲೂಕಿನ ಅಧಿಕಾರಿಗಳಿಗೆ ಮಾತ್ರ ಇದೇಲ್ಲ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ತಾಲೂಕಿನಲ್ಲಿ ಸದ್ಯ ಕಬ್ಬು ಕಟಾವು ಮಾಡಲು ದೂರದ ಜಿಲ್ಲೆಗಳಿಂದ ಬಂದ ಆ ಬಡಕುಟುಂಬಗಳ ಕಂದಮ್ಮಗಳು ಮಳೆ, ಬಿಸಿಲು, ಚಳಿಯಲ್ಲೇ ನಡುಗುತ್ತಿವೆ. ಅಪೌಷ್ಟಿಕತೆಯ ಸುಳಿಗೆ ಸಿಕ್ಕು ನರಳುವ ಹಂತಕ್ಕೆ ಬಂದಿವೆ. ಪ್ರತಿ ವರ್ಷ ಮುಂಡಗೋಡ ತಾಲೂಕಿಗೆ ವಿಜಯಪುರ ಜಿಲ್ಲೆಯಿಂದ ಹಾಗೂ ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಕೂಲಿಕಾರ್ಮಿಕರ ತಂಡಗಳು ಬರ್ತಿವೆ. ಅದು ಅವರ ಹೊಟ್ಟೆಪಾಡಿಗೆ ಅನಿವಾರ್ಯ. ಏನಿಲ್ಲವೆಂದರೂ ಮೂರ್ನಾಲ್ಕು ತಿಂಗಳು ತಾಲೂಕಿನಲ್ಲೇ ಇದ್ದು ಕಬ್ಬು ಕಟಾವು ಮಾಡುವ ಈ ಕಾರ್ಮಿಕರ ಜೊತೆ ಪುಟ್ಟ ಪುಟ್ಟ ಕಂದಮ್ಮಗಳೂ ಬಂದಿವೆ....
ಇಂದೂರಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ..!
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಇಂದೂರು ಗ್ರಾಮದ ಹೊರವಲಯದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಹ್ಮದ್ ಸಾಬ್ ಲಾಲ್ ಸಾಬ್ ಮುಲ್ಲಾನವರ್ (47) ಎಂಬುವವನೇ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿಬೇಟಿಯನ್ ಕಾಲೋನಿ ಬಳಿ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!
ಮುಂಡಗೋಡ ಸಮೀಪದ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಬಳಿ ಬೈಕ್ ಅಪಘಾತವಾಗಿದೆ. ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಂಡಗೋಡ ಪಟ್ಟಣದ ಸಂಜು ನರಸಪ್ಪ ಕಳಲಕೊಂಡ(32) ಮೃತ ಬೈಕ್ ಸವಾರ. ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ನಿಯಂತ್ರಣ ತಪ್ಪಿದ ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಕೂಡ ನುಜ್ಜುಗುಜ್ಜಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.