ಹುನಗುಂದದಲ್ಲಿ ಬೋರವೆಲ್ ನಿಂದ ವಿದ್ಯುತ್ ಪ್ರವಹಿಸಿ ಯುವಕನ ದಾರುಣ ಸಾವು..! ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗದ್ದೆಯಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕನೋರ್ವ ವಿದ್ಯುತ್ ಸ್ಪರ್ಶಿಸಿ ದಾರುಣ ಸಾವು ಕಂಡಿದ್ದಾನೆ. ಜೊತೆಗೆ ತನ್ನ ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಈ ಮೂಲಕ ತಾಲೂಕಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನೇತ್ರದಾನ ಮಾಡಿದ ಯುವಕನಾಗಿ ಪ್ರೇರಕ ಶಕ್ತಿಯಾಗಿದ್ದಾನೆ.

ಜಿನೇಂದ್ರ ಪಾರ್ಶ್ವನಾಥ್ ಬಸ್ತವಾಡ್ (18) ಎಂಬುವ ಯುವಕನೇ ದಾರುಣ ಸಾವು ಕಂಡಿದ್ದು, ಇಂದು ಬುಧವಾರ ತನ್ನ ಗದ್ದೆಯಲ್ಲಿ ಬೋರವೆಲ್ ಶುರು ಮಾಡಲು ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಹಿಡಿದು ವಿದ್ಯುತ್ ಪ್ರವಹಿಸಿದೆ. ಹೀಗಾಗಿ, ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನಿಗೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ‌ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸಾವಿನಲ್ಲೂ ಸಾರ್ಥಕತೆ..!
ಇನ್ನು, ಯುವಕ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ನಂತರ ಆತನ ನೇತ್ರದಾನ ಮಾಡಲು ಶಿರಸಿಯ ಲಯನ್ಸ್ ನಯನ ನೇತ್ರ ಭಂಡಾರಕ್ಕೆ ಸಂಪರ್ಕಿಸಿದ್ದಾರೆ. ಹೀಗಾಗಿ, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನೇತ್ರ ತಂಡದವರು ಯುವಕನ ನೇತ್ರಗಳನ್ನು ಸುತಕ್ಷಿತವಾಗಿ ಪಡೆದುಕೊಂಡು ಹೋಗಿದ್ದಾರೆ. ಹೀಗಾಗಿ, ಮೃತ ಬಾಲಕನಿಂದ ಮತ್ತೆರಡು ಅಂಧರಿಗೆ ಬೆಳಕು ತುಂಬಿದಂತಾಗಿದೆ. ಹೀಗಾಗಿ, ಮೃತ ಯುವಕ ಹಾಗೂ ಯುವಕನ ಕುಟುಂಬದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇನ್ನು, ಆಸ್ಪತ್ರೆಗೆ ಭೇಟಿ ನೀಡಿದ ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!