ನಿಜಕ್ಕೂ ನನ್ನ ಕಣ್ಣಂಚಲ್ಲಿ ಹನಿಗಳು ಜಿನುಗುತ್ತಿದೆ. ಸನವಳ್ಳಿಯ ಬಾಲಕರ ಕರುಣಾಜನಕ ಕತೆ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರ ಆಗಿದ್ದೇ ತಡ, ಹತ್ತಾರು ಪೋನ್ ಕಾಲ್ ಗಳು, ನೂರಾರು ಮೆಸೇಜ್ ಗಳು, ಅಣ್ಣಾ ಆ ಬಾಲಕರಿಗೆ ನಾವೂ ನಮ್ಮ ಕೈಲಾದಷ್ಟು ಸಹಾಯ ಮಾಡ್ತಿವಿ ದಯವಿಟ್ಟು ಅವ್ರ ಅಕೌಂಟ್ ನಂಬರ್ ಕಳಿಸಿ ಅಂತಾ ಬೆಂಗಳೂರು ಸೇರಿ ರಾಜ್ಯದ ಹಲವೆಡೆಯಿಂದ ಹೃದಯವಂತರು ಕೇಳಿಕೊಳ್ತಿದಾರೆ. ಆ ಬಡ ಬಾಲಕರ ಜೊತೆ ನಾವಿದ್ದೇವೆ ಏನು ಕಳಿಸಬೇಕು ಹೇಳಿ ಕಳಿಸಿ ಕೊಡ್ತಿವಿ ಅಂತಾ ಹೃದಯ ತುಂಬಿದ ಭಾವುಕ ನುಡಿಗಳನ್ನ ಆಡಿದ್ದಾರೆ ಹಲವ್ರು. ಹೀಗಾಗಿ ಸದ್ಯ ಆ ಬಾಲಕರಿಗೆ ಸಹಾಯ ಮಾಡುವ ಮನಸ್ಸುಳ್ಳ ಹೃದಯವಂತರಿಗೆ ನನ್ನದೊಂದು ಬಿಗ್ ಸಲಾಂ..!
**********************
ಸಹಾಯ ಮಾಡಲು ಬಯಸುವವರು ಈ ನಂಬರ್ ಗೆ ಪೋನ್ ಪೇ ಮಾಡಬಹುದು..
ಪೋನ್ ಪೇ ನಂ. 9741198875 ಗೆ ಹಣ ಕಳಿಸಬಹುದು.
ಅಥವಾ
ಅಕೌಂಟ್ ನಂಬರ್:
Account no:32371005770
IFSC: SBIN0040613
Bank:SBI mundgod
Name:Sampthkumar s kyamanakeri
ವಿ.ಸೂಚನೆ: ಹಣ ಕಳಿಸಿದ ನಂತರ ದಯವಿಟ್ಟು ಪೋನ್ ಪೇ ಮಾಡಿದ್ದರೆ ಅದರದ್ದೊಂದು ಸ್ಕ್ರೀನ್ ಶಾಟ್ ತೆಗೆದು 9980702245 ಈ ನಂಬರ್ ಗೆ ವಾಟ್ಸಾಪ್ ಮಾಡಿ
************************
ಗ್ರೇಟ್ ತಹಶೀಲ್ದಾರ್..!
ಸುದ್ದಿ ಪ್ರಸಾರ ಆಗ್ತಿದ್ದಂತೆ ನಮ್ಮ ಮುಂಡಗೋಡಿನ ಖಡಕ್ ಹಾಗೂ ದಕ್ಷ ತಹಶೀಲ್ದಾರ್ ಶಂಕರ್ ಗೌಡಿ, ತಮ್ಮ ಸಿಬ್ಬಂದಿಗೆ ತಕ್ಷಣವೇ ಬಾಲಕರ ಆಕ್ರಂಧನಕ್ಕೆ ಕಿವಿಗೊಡುವಂತೆ ಸೂಚಿಸಿದ್ದಾರೆ. ಹೀಗಾಗಿ, ತಹಶೀಲ್ದಾರ್ ಕಚೇರಿಯ ರಾಘವೇಂದ್ರ ಅನ್ನೋರು ನಂಗೆ ಕಾಲ್ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಆ ಬಾಲಕರ ಆಸ್ಪತ್ರೆಯ ಜವಾಬ್ದಾರಿಗಾಗಿ ಖುದ್ದು ತಹಶೀಲ್ದಾರ್ ಸಾಹೇಬ್ರೇ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಫ್.ಹೆಚ್.ಇಂಗಳೆಯವರಿಗೆ ಪೋನಾಯಿಸಿ ಚಿಕಿತ್ಸೆಯ ಜವಾಬ್ದಾರಿ ವಹಿಸಿದ್ದಾರೆ. ಮಕ್ಕಳ ಊಟೋಪಚಾರಕ್ಕಾಗಿ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಯೇ ನೋಡಿಕೊಂಡಿದ್ದಾರೆ. ಇದು ನಿಜಕ್ಕೂ ಮಾನವೀಯತೆ ಅನ್ನೋದು ನಮ್ಮ ಅಧಿಕಾರಿಗಳ ನಡುವೆ ಇನ್ನೂ ಬದುಕಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಹ್ಯಾಟ್ಸ್ ಅಪ್ ಶಂಕರ್ ಗೌಡಿಯವರೇ..!
ಬಿಇಓ ಮೇಡಮ್ಮು, ಮತ್ತವರ ಪಡೆ..!
ಅಸಲು, ಇಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನಾವೇ ಖುದ್ದು ಸಂಪರ್ಕಿಸಿದ್ವಿ. ಆ ಹೊತ್ತಿಗಷ್ಟೇ ಪಾಪ ಬಿಇಓ ಮೇಡಂ ಗೆ ಹಾಗೂ ಮತ್ತವರ ಸನವಳ್ಳಿ ಶಾಲೆಯ ಮುಖ್ಯೋಪಾದ್ಯಾಯೆಗೆ ಘಟನೆ ಅರಿವಿಗೆ ಬಂದಿದೆ. ಹೀಗಾಗಿ, ಬಾಲಕರ ಮನೆಗೆ ಹೋಗಿ ಬಂದ ಸನವಳ್ಳಿ ಶಾಲೆಯ ಮುಖ್ಯೋಪಾದ್ಯಾಯನಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸಿಡಿಪಿಓ ಮೇಡಂ..!
ಸುದ್ದಿ ಯಾವಾಗ ಪ್ರಸಾರ ಆಯ್ತೋ ಅವಾಗಲೇ ಮುಂಡಗೋಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೀಪಾ ಬಂಗೇರ್ ಮೇಡಮ್ಮು, ಕರೆಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಬಾಲಕನಿಗೆ ಏನೇಲ್ಲ ವ್ಯವಸ್ಥೆ ಮಾಡಬೇಕೊ ಅದರ ಬಗ್ಗೆ ಇಲಾಖೆ ವತಿಯಿಂದ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಬಡ ಬಾಲಕರ ಭವಿಷ್ಯಕ್ಕೆ ಒಂದಿಷ್ಟು ಭರವಸೆ ಸಿಕ್ಕಂತಾಗಿದೆ.
ಪೊಲೀಸರ ಮಾನವೀಯತೆ..!
ನಿಜ, ಇವತ್ತು ಆ ಪುಟ್ಟ ಕಂದಮ್ಮಗಳ ಆರ್ತನಾದ ಮೊದಲಿಗೆ ಕೇಳಿಸಿದ್ದೇ ಪೊಲೀಸರಿಗೆ.. ಸಹದೇವಪ್ಪ ಅನ್ನೋ ಪೊಲೀಸ್ ಪೇದೆಯೊಬ್ಬರು ನಾಯಿ ದಾಳಿಗೆ ತುತ್ತಾಗಿದ್ದ ಬಾಲಕಿನಿಗೆ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ತೋರಿದ್ದರು. ಆ ನಂತರದಲ್ಲಿ ನಿರಂತರವಾಗಿ ಘಟನೆಯ ಫಾಲೋ ಅಪ್ ಮಾಡಿರೋ ಹೃದಯವಂತ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು ಸೇರಿ ಇಡೀ ಇಲಾಖೆಯ ಎಲ್ಲಾ ಸಿಬ್ಬಂದಿಗಳೂ ಬಾಲಕರಿಗೆ ಹೇಗಾದ್ರೂ ಸರಿ ನೆರವಾಗೋಣ ಅಂತ ಶ್ರಮಿಸಿದ್ದಾರೆ. ಹೀಗಾಗಿ, ಪೊಲೀಸರಲ್ಲಿನ ಮಾನವೀಯತೆಯ ಅನಾವರಣ ಮಾಡಿದ್ದಾರೆ.
ಸನವಳ್ಳಿ ಗ್ರಾಪಂ ಅಧ್ಯಕ್ಷರ ಭೇಟಿ..!
ನಾಯಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಬೆಡ್ಡಿನ ಮೇಲೆ ಮಲಗಿರೋ ಬಾಲಕನಿಗೆ ಗ್ರಾಪಂ ಅಧ್ಯಕ್ಷೆ ರೇಣುಕಾ ಕೋಣನಕೇರಿ ಭೇಟಿ ಮಾಡಿದ್ರು. ಹಣ್ಣು ಬ್ರೆಡ್ ಕೊಟ್ಟು ಬಾಲಕನ ಆರೋಗ್ಯ ವಿಚಾರಿಸಿದ್ರು. ಬಾಲಕರ ಭವಿಷ್ಯಕ್ಕಾಗಿ ಏನಾದ್ರೂ ವ್ಯವಸ್ಥೆ ಮಾಡಬೇಕು ಅನ್ನೋ ಅಭಿಪ್ರಾಯ ಹೊರ ಹಾಕಿದ್ರು.
ಅಂದಹಾಗೆ, ಸನವಳ್ಳಿಯ ಹಲವರು ಬಾಲಕರ ಸಹಾಯಕ್ಕಾಗಿ ಸಾಥ್ ನೀಡಿದ್ದಾರೆ. ಅದ್ರಲ್ಲಿ ನಾಗರಾಜ್ ಗುಬ್ಬಕ್ಕನವರ್, ಸಂಪತಕುಮಾರ್ ಸೇರಿ ಹಲವರು ಬಾಲಕರ ಭವಿಷ್ಯತ್ತಿಗಾಗಿ ಹಂಬಲಿಸಿದ್ದಾರೆ. ಅವ್ರೇಲ್ಲರಿಗೂ ನಮ್ಮದೊಂದು ದನ್ಯತೆಯ ನುಡಿ ಇದೆ. ಬನ್ನಿ ಎಲ್ಲರೂ ಸೇರಿ ಬಾಲಕರಿಗೆ ನೆರವಾಗೋಣ.