ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ನಿಜ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ರಾಜಕೀಯವಾಗಿ ಅದೇನೋ ನಂಗೆ ಗೊತ್ತಿಲ್ಲ. ಆದ್ರೆ ಮಾನವೀಯ ಮೌಲ್ಯಗಳ ವಿಷಯಕ್ಕೆ ಬಂದ್ರೆ ಬಹುಶಃ ಕ್ಷೇತ್ರದಲ್ಲಿ ಮನೆ ಮನೆಗೂ ಶಿವರಾಂ ಹೆಬ್ಬಾರ್ ರವರ ಆಸರೆಯ ಅರಿವು ಇದೆ. ಮನೆ ಮನೆಯಲ್ಲೂ ಸಾಂತ್ವನದ ಕಿರಿಬೆರಳಿನ ಆಸರೆಗಳಿವೆ. ಇವತ್ತೂ ಕೂಡ ಅದೇ ಶಿವರಾಂ ಹೆಬ್ಬಾರ್ ನೊಂದಿದ್ದ ಒಂದಿಡೀ ಕುಟುಂಬಕ್ಕೆ ಕಿರಿಬೆರಳಿನ ಆಸರೆ ನೀಡಿದ್ದಾರೆ‌. ಬಡಬಾಲಕರ ಭವಿಷ್ಯತ್ತಿಗೆ ಬೆಳಕಾಗಿದ್ದಾರೆ. ಅಸಲು, ನಿನ್ನೆ ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ಬಡ ಬಾಲಕರ ಕುರಿತು ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ನಿನ್ನೆಯಿಂದಲೂ..!
ಅವ್ರು ಅಕ್ಷರಶಃ ಅನಾಥ ಸ್ಥಿತಿಯಲ್ಲಿರೋ ಬಾಲಕರು, ತಾಯಿ ಕಳೆದ ವರ್ಷವಷ್ಟೇ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಅಪ್ಪ ಅನ್ನಿಸಿಕೊಂಡ ವ್ಯಕ್ತಿ ಮಕ್ಕಳ ಬಗ್ಗೆ ಕಣ್ಣೆತ್ತಿಯೂ ನೋಡಲ್ಲ. ಹೀಗಾಗಿ, ಇದೇ ವೇಳೆ ನಾಯಿಗಳ ದಾಳಿಗೆ ತುತ್ತಾದ ಏಳು ವರ್ಷದ ಕಂದಮ್ಮನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೂ ದುಡ್ಡಿಲ್ಲ. ಬಾಲಕನ ಅಣ್ಣ 17 ವರ್ಷದ ನಾಗರಾಜ ತನ್ನ ತಮ್ಮನ ಚಿಕಿತ್ಸೆಗಾಗಿ ಅಲೆಯುತ್ತಿದ್ದ. ಇದೇ ವೇಳೆ ಪೊಲೀಸಪ್ಪನ ನೆರವು ಸಿಕ್ಕಿತ್ತು. ಹೀಗಾಗಿ, ಸದ್ಯ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಂಡಗೋಡಿನ ತಹಶೀಲ್ದಾರ್ ಶಂಕರ್ ಗೌಡಿ ಮತ್ತವರ ಪಡೆ, ಮುಂಡಗೋಡಿನ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ಟೀಂ ಈ ಬಾಲಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ರು. ಅಲ್ಲದೇ ಸಾಕಷ್ಟು ಹೃದಯವಂತರು ಬಾಲಕರ ಸ್ಥಿತಿಗೆ ನೆರವಾಗಿದ್ದರು‌.

ಸದ್ಯ..!
ಇನ್ನು, ಈ ಸುದ್ದಿ ತಿಳಿದ ತಕ್ಷಣವೇ ಸಚಿವ ಶಿವರಾಂ ಹೆಬ್ಬಾರ್, ಮೂರೂ ಬಾಲಕರ ಇಡೀ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದಾರೆ. ಅಷ್ಟೇ ಅಲ್ಲದೇ ಆರ್ಥಿಕ ಸಹಾಯವನ್ನೂ ಮಾಡುವ ಘೋಷಣೆ ಮಾಡಿದ್ದಾರೆ‌. ಹೀಗಾಗಿ, ಸದ್ಯ ನೊಂದಿದ್ದ ಮೂರೂ ಬಾಲಕರ ಬಾಳಲ್ಲಿ ಬೆಳಕಿನ ಕಿರಣ ಮೂಡಿದಂತಾಗಿದೆ. ಭವಿಷ್ಯದ ಬಗ್ಗೆ ಒಂದಿಷ್ಟು ಭರವಸೆ ಸಿಕ್ಕಂತಾಗಿದೆ. ತನ್ನ ಕ್ಷೇತ್ರದ ಕಟ್ಟಕಡೆಯ ಮನೆಯ ಆಕ್ರಂಧನವನ್ನೂ ಕೇಳಿಸಿಕೊಳ್ಳುವ ಗುಣವಿದೆಯಲ್ಲ ಅದು ಬಹುಶಃ ಶಿವರಾಂ ಹೆಬ್ಬಾರ್ ಸಾಹೇಬ್ರಿಗಷ್ಟೇ ಸಾಧ್ಯ ಅನಿಸತ್ತೆ. ಹ್ಯಾಟ್ಸ್ ಅಪ್ ಸಾಹೇಬ್ರೆ..!

error: Content is protected !!