ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ನಿಜಕ್ಕೂ ಇದೊಂದು ಹೃದಯ ಹಿಂಡುವ ಕರುಣಾಜನಕ ಕತೆ. ಮುಂಡಗೋಡ ತಾಲೂಕಿನ ಸನವಳ್ಳಿಯ ಅದೊಬ್ಬ ಬಾಲಕನ ಮನಮಿಡಿಯುವ ಕತೆ. ಆತನ ಹೆಸ್ರು ಗುತ್ತೆಪ್ಪ.. ಈಗಿನ್ನೂ 7 ವರ್ಷದ ಬಾಲಕ. ಆತನಿಗೆ ಹಡೆದವ್ವ ಇಲ್ಲ. ತಾಯಿ ತೀರಿಕೊಂಡು ವರ್ಷ ಕಳೆದಿದೆ. ಹಡೆದ ತಂದೆಗೆ ಅದೇನಾಗಿದೆಯೋ ಗೊತ್ತಿಲ್ಲ. ಮಕ್ಕಳ ಬಗ್ಗೆ ಕ್ಯಾರೇ ಇಲ್ಲ. ಮೇಲಾಗಿ ಆ ಬಾಲಕನಿಗೆ ಮಾತೇ ಬರಲ್ಲ. ಇವನೊಬ್ಬನೇ ಅಲ್ಲ ಈತನಿಗೆ ಇನ್ನಿಬ್ಬರು ಅಣ್ಣಂದಿರು ಇದ್ದಾರೆ. ಓರ್ವ ಅಣ್ಣನ ಹೆಸ್ರು ನಾಗರಾಜ ಆತನಿಗೆ 17 ವರ್ಷ ವಯಸ್ಸು, ಮತ್ತೋರ್ವ ಅಣ್ಣ ಚಂದ್ರು ಆತನ ವಯಸ್ಸು 14 ಹೀಗಿರೋ ಇವ್ರೇಲ್ಲರ ಕತೆಯೂ ಅಷ್ಟೇ, ಇವ್ರೇಲ್ಲ ಈಗ ಅಕ್ಷರಶಃ ಅನಾಥರು. ಹೀಗಿರೋವಾಗಲೇ ಆ ಬಾಲಕನಿಗೆ ನಾಯಿಗಳ ಹಿಂಡು ದಾಳಿ ಮಾಡಿದೆ.

ದುರಂತ ಅಂದ್ರೆ ಇದೇ ಅಲ್ವಾ..?
ಹೀಗಿದ್ದಾಗಲೇ ಆ ಮೂಕ ಬಾಲಕ 7 ವರ್ಷ ವಯಸ್ಸಿನ ಗುತ್ತೆಪ್ಪನಿಗೆ ನಿನ್ನೆ ಬೀದಿನಾಯಿಗಳ ಹಿಂಡು ಮನಸೋ ಇಚ್ಚೆ ಕಚ್ಚಿ ಗಾಯಗೊಳಿಸಿವೆ. ಆಟವಾಡುತ್ತಿದ್ದಾಗ ದಾಳಿ ಮಾಡಿರೋ ನಾಯಿಗಳು ಬಡಬಾಲಕನಿಗೆ ಇನ್ನಿಲ್ಲದಂತೆ ಕಚ್ಚಿ ಹಾಕಿವೆ. ಹೀಗಾಗಿ, ನಿನ್ನೆಯಿಂದಲೂ ತನ್ನ ತಮ್ಮನ ಚಿಕಿತ್ಸೆಗಾಗಿ ಆತನ ಪುಟ್ಟ ಅಣ್ಣ ಇನ್ನಿಲ್ಲದ ಪರದಾಟ ಶುರುವಿಟ್ಟಿದ್ದಾನೆ. ಹೊಟ್ಟೆ ತುಂಬ ಊಟ ಇಲ್ಲ. ಕೈಯಲ್ಲಿ ದುಡ್ಡಿಲ್ಲ, ತಮ್ಮನಿಗೆ ಚಿಕಿತ್ಸೆ ಹೋಗಲಿ, ಹೊಟ್ಟೆ ತುಂಬ ತಿಂಡಿಯೂ ಇಲ್ಲ. ಹೀಗಾಗಿ, ತನ್ನ ತಮ್ಮನ ಜೊತೆ ಮುಂಡಗೋಡಿನ ಬಂಕಾಪುರ ರಸ್ತೆಯ ಪೊಲೀಸ್ ಠಾಣೆಯ ಎದುರು ನಿರ್ಲಿಪ್ತರಾಗಿ ನಿಂತಿದ್ದರು ಈ ಬಾಲಕರು. ಆ ಹೊತ್ತಿನಲ್ಲಿ ಇವ್ರನ್ನ ಕಂಡ ಅದೊಬ್ಬ ಪೊಲೀಸಪ್ಪ ನಿಜಕ್ಕೂ ಮಾನವೀಯತೆ ತೋರಿದ್ದಾರೆ. ಮುಂಡಗೋಡ ಠಾಣೆಯ ಪೊಲೀಸ್ ಪೇದೆ ಸಹದೇವಪ್ಪ ಕೋಣನಕೇರಿ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗ್ತಿದೆ.

ಛೇ.. ಇದೇಂತಾ ಸಂಕಟ..!
ಅಸಲು, ಬಾಲಕನಿಗೆ ನಾಯಿ ಕಚ್ಚಿದ್ದು ನಿನ್ನೆ, ಅಂದ್ರೆ ಸೋಮವಾರದ ದಿನ. ಘಟನೆ ನಿನ್ನೆನೇ ನಡೆದ್ರೂ ಯಾರೊಬ್ರೂ ಆ ಬಾಲಕನಿಗೆ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸುವ ದೊಡ್ಡ ಮನಸು ಮಾಡಿರಲೇ ಇಲ್ಲ. ಆದ್ರೆ, ಆತನ ಅಣ್ಣ, ಹೇಗಾದ್ರೂ ಸರಿ ತಮ್ಮನಿಗೆ ಆಸ್ಪತ್ರೆಗೆ ತೋರಿಸಲೇಬೇಕು ಅಂತಾ ಬಂದಿದ್ದಾನೆ. ಆದ್ರೆ, ಜೇಬಲ್ಲಿ ಮಾತ್ರ ಬಿಡಿಗಾಸೂ ಇಲ್ಲ. ಅದೇ ಹೊತ್ತಲ್ಲಿ ಪೊಲೀಸ್ ಪೇದೆ ಸಹದೇವಪ್ಪ ನೆರವಿಗೆ ಬಂದು ಬಾಲಕನಿಗೆ ಸಹಕಾರಿಯಾಗಿದ್ದು ನಿಜಕ್ಕೂ ಆಸರೆಯಾಗಿದೆ.

ಸ್ನೇಹಿತರೇ ಸಹಾಯ ಮಾಡಿ..!
ಸ್ನೇಹಿತರೇ, ನಾವೇಲ್ಲ ನಿತ್ಯವೂ ಯಾವ್ಯಾವುದಕ್ಕೋ ಅಂತ ಎಷ್ಟೇಲ್ಲ ಖರ್ಚು ಮಾಡ್ತಿವಿ. ಅದ್ರ ಜೊತೆ ನಮ್ಮ ನಡುವೆಯೇ ಇರುವ ಇಂತಹ ಬಡವರ ಬಗ್ಗೆ ಒಂದಿಷ್ಟು ಕಾಳಜಿ ತೋರಿಸೋದು ನಮ್ಮೇಲ್ಲರ ಕರ್ತವ್ಯ ಅಲ್ಲವೇ..? ಸಾಧ್ಯವಾದಷ್ಟು ನಾವೇಲ್ಲರೂ ಸೇರಿ ಆ ಮಕ್ಕಳಿಗೆ ಸಹಾಯ ಮಾಡೋಣ. ಜೊತೆಗೆ ತಾಲೂಕಾಡಳಿತ ಇಂತಹ ಮಕ್ಕಳ ನೆರವಿಗೆ ಬರಲೇಬೇಕಿದೆ. ಮಾನ್ಯ ತಹಶೀಲ್ದಾರ್ ಸಾಹೇಬ್ರು ಸಂಬಂಧ ಪಟ್ಟ ಇಲಾಖೆಯ ಮೂಲಕ ಇಂತಹ ಮಕ್ಕಳ ನೆರವಿಗೆ ಬರಲಿ ಅನ್ನೋದು ನಮ್ಮೇಲ್ಲರ ಆಶಯ.. ಅಷ್ಟೆ.

error: Content is protected !!