ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೆ ತುತ್ತಾದ ಬಾಲಕನನ್ನು ಪಿಐ ಸಿದ್ದಪ್ಪ ಸಿಮಾನಿ ಭೇಟಿ ಮಾಡಿ ದೈರ್ಯ ತುಂಬಿದ್ರು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಹಣ್ಣು ಹಂಪಲು ನೀಡಿ ಸಂತೈಸಿದರು.
ಅಂದಹಾಗೆ, ಕಳೆದ ವರ್ಷವಷ್ಟೇ ತಾಯಿ ಕಳೆದುಕೊಂಡು ಅನಾಥರಾಗಿರೋ ಮೂವರು ಬಾಲಕರಿಗೆ, ತಂದೆಯ ನಿರ್ಲಕ್ಷವೂ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರ ಜೊತೆ ನಿನ್ನೆ ಸನವಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ಈ ಕಾರಣಕ್ಕಾಗಿ,
ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ ಕೂಡ ಪರದಾಡುತ್ತಿದ್ದ ಬಾಲಕರಿಗೆ ಪೊಲೀಸ್ ಇಲಾಖೆಯಿಂದ ನೆರವು ನೀಡಲಾಗಿದೆ. ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿ ಇಡೀ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬಡ ಬಾಲಕರ ನೆರವಿಗೆ ಬಂದಿದ್ದಾರೆ.