ಹಾವೇರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಇಬ್ಬರು RFO ಗಳ ಮನೆ, ಸೇರಿದಂತೆ 9 ಕಡೆ ಲೋಕಾ ದಾಳಿಯಾಗಿದೆ. RFO ಪರಮೇಶ್ವರ ಪೇರಲನವರ, RFO ಮಾಲತೇಶ ನ್ಯಾಮತಿ ಗೆ ಸೇರಿದ ಮನೆ ಹಾಗೂ ಫಾರ್ಮ್ ಹೌಸ್ ಸೇರಿ 9 ಕಡೆ ದಾಳಿ ನಡೆಸಲಾಗಿದೆ. ಹಾವೇರಿ ನಗರ ಹಾಗೂ ಕುರಬಗೊಂಡ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. RFO ಪರಮೇಶ್ವರ ಪೇರಲನವರಗೆ ಸೇರಿದ ಎರಡು ಮನೆ ಸೇರಿದಂತೆ 6 ಕಡೆ ದಾಳಿ ನಡೆದಿದೆ. ಇನ್ನು ಮತ್ತೋರ್ವ RFO ಮಾಲತೇಶ್ ನ್ಯಾಮತಿಯವರ ಮನೆ ಸೇರಿ ಮೂರು ಕಡೆ ದಾಳಿ ನಡೆದಿದೆ. ಹಾವೇರಿಯ ಶಿವಾಜಿನಗರ, ವರದಾನೇಶ್ವರಿ ನಗರ, ಕುರುಬಗೊಂಡ ಗ್ರಾಮದ ಮನೆ, ಫಾಮ್೯ ಹೌಸ್ ಗಳ ಮೇಲೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಏನೇನು ಸಿಕ್ಕಿದೆ ಅನ್ನೋ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ.
Top Stories
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಕ್, RFO ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ..!
ಕಾರವಾರದ ಯುವಕ ಆತ್ಮಹತ್ಯೆ ಕೇಸ್, ಪಿಐ, ಪಿಎಸ್ಐ ಸೇರಿ ಮೂವರು ಪೊಲೀಸರು ಸಸ್ಪೆಂಡ್..!
ಪೊಲೀಸರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಕೇಸ್ ಗೆ ಮೂವರು ಪೊಲೀಸರ ಅಮಾನತ್ತಾಗಿದೆ. ಕಾರವಾರದಲ್ಲಿ ಮಾರುತಿ ನಾಯ್ಕ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ, ಪಿಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಿ ಎಸ್ಪಿ ವಿಷ್ಣುವರ್ಧನ್ ಆದೇಶಿಸಿದ್ದಾರೆ. CPI ಕುಸುಮಾಧರ ಕೆ, PSI ಶಾಂತಿನಾಥ ಹಾಗೂ ಕಾನಸ್ಟೆಬಲ್ ದೇವರಾಜ್ ಸಸ್ಪೆಂಡ್ ಆಗಿದ್ದಾರೆ. ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಸೈಡ್ ನೋಟ್ ಬರೆದು ವಿಡಿಯೋ ರೆಕಾರ್ಡ್ (video record)ಮಾಡಿದ್ದ. ತನ್ನ ಆತ್ಮಹತ್ಯೆಗೆ ಪೊಲೀಸರು, ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಮತ್ತಿತರರ ಹೆಸರು ಬರೆದಿಟ್ಟಿದ್ದ. ಹೀಗಾಗಿ, ಪ್ರಕರಣದ ಗಂಭೀರತೆ ಬಯಲಾದ ಹಿನ್ನೆಲೆ ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನ ಮಾರುತಿ ನಾಯ್ಕ್ ರೆಕಾರ್ಡ್ ಮಾಡಿದ್ದ. ಬಳಿಕ ಎಲಿಷ ಎಲಕಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದರು. ಎಲಿಷಾ ಕುಟುಂಬಕ್ಕೆ ಪೊಲೀಸರು ಬೆಂಬಲವಾಗಿ...
ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!
ಮುಂಡಗೋಡಿನ ಭ.ಶಂಭವನಾಥ ತೀರ್ಥಂಕರರ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಿನಮಂದರದಲ್ಲಿ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ಜೈನ ಶ್ರಾವಕರು ಹಮ್ಮಿಕೊಂಡಿದ್ದರು. ಪದ್ಮಾವತಿ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸುಮಂಗಲೆಯರು ಜಿನಭಕ್ತಿಗೀತೆಗಳೊಂದಿಗೆ ಅಮ್ಮನವರಿಗೆ ವಿಶೇಷ ಅರ್ಚನೆ ಮಾಡಿದ್ರು. ಈ ವೇಳೆ ಪಟ್ಟಣದ ಹಲವು ಜೈನ ಮುಖಂಡರು, ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ರು.
ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!
ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ. ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ ಬಹುತೇಕ ಕಾಲು ಬಿದ್ದು ತಪ್ಪಾಯ್ತು ಅಂತಾ ಹೇಳಿ ಇಡಿ ಇಡಿಯಾಗಿ ಕೇಸನ್ನೇ ತಿಪ್ಪೆ ಸಾರಿಸುವ ಯತ್ನ ಮಾಡಿಸ್ತಿದಾನೆ.. ಆದ್ರೆ, ಏನೂ ಅರಿಯದ ದಲಿತ ಹುಡುಗನೊಬ್ಬ ಆ ನಾಲಾಯಕನ ದುಡ್ಡಿನ ತೀಟೆಗೆ ಬಲಿಯಾಗುವ ಹಂತದಲ್ಲಿದ್ದಾನೆ. ದೊಡ್ಡವನ ದಡ್ಡತನ..! ದುರಂತ ಅಂದ್ರೆ, ಹೊಸತಾಗಿ ಬಂದಾಗ ಅದೇಂತದ್ದೋ ಪುರಾಣ ಪುಣ್ಯ ಕತೆ, ಶಿಸ್ತು ಅಂತೇಲ್ಲ ಹೇಳಿಕೊಂಡು ಬುರುಡೆ ಬಿಟ್ಟಿದ್ದ ದೊಡ್ಡವನು ನಮ್ಮನ್ನೇಲ್ಲ ದಡ್ಡರನ್ನಾಗಿಸಿದ್ದಾನೆ. ಕೈಯಿಂದ ಬಾಚಿಕೊಂಡರೆ ಉಳಿಯಬಹುದು...
ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!
ಮುಂಡಗೋಡ ಪಟ್ಟಣದ ಮೂರು ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸ್ತಿದ್ದ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗ್ತಿದೆಯಾ..? ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರಗಳನ್ನು ಸದ್ಯ ಮುಚ್ಚಲಾಗ್ತಿದೆ ಅನ್ನೋ ಸುದ್ದಿ ತಿಳಿದು ಅಲ್ಲಿನ ಪೋಷಕರು ಆತಂಕಗೊಂಡಿದ್ದಾರೆ. ಹೀಗಾಗಿ, ಪೋಷಕರು ಶಿಶು ಪಾಲನ ಕೇಂದ್ರ ಮುಚ್ಚದಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ. ಜಿಲ್ಲೆ ಸೇರಿದಂತ ರಾಜ್ಯದ ಕೆಲವೆಡೆ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗುತ್ತಿದ್ದು, ಅದೇ ಭಯ ಇದೀಗ ಮುಂಡಗೋಡಿನ ಸುಭಾಷನಗರ, ಲಂಬಾಣಿ ತಾಂಡಾ ನಂ.3 ಹಾಗೂ ಗಣೇಶನಗರದ ಮಕ್ಕಳ ಪಾಲಕರಲ್ಲಿ ಶುರುವಾಗಿದೆ. ಕಾರಣ ಈ ಮೂರೂ ಶಿಶು ಪಾಲನ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಜೊತೆಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಇದನ್ನು ಮುಚ್ಚಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಅನ್ನೋದು ಪೋಷಕರ ಅಳಲು. ಅಂದಹಾಗೆ, ಇಲ್ಲಿ ಇವಾಗ ನೂರಾರು ಪುಟ್ಟ ಪುಟ್ಟ ಮಕ್ಕಳು ಶಿಶು ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ ಅಂತಾ ಆತಂಕದಲ್ಲಿರೋ ಇಲ್ಲಿನ...
ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?
ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ. ಎರಡಲ್ಲ, ಬರೋಬ್ಬರಿ ಐದು..? ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ ಎರಡು ಶ್ರೀಗಂಧದ ಮರವಲ್ಲ ಬದಲಾಗಿ ಬರೋಬ್ಬರಿ 5 ಮರಗಳು ಕಳ್ಳತನವಾಗಿರೋ ಮಾತುಗಳು ಕೇಳಿಬಂದಿವೆ. ಜೊತೆಗೆ ಮತ್ತೊಂದು ಮರ ಅರ್ದಕ್ಕರ್ದ ಕಟ್ ಆಗಿ ಅರೆಜೀವವಾಗಿದೆ. ದುರಂತ ಅಂದ್ರೆ ಇಲ್ಲಿನ ಅಧಿಕಾರಿಗಳು ಘಟನೆ ನಡೆದ ದಿನ ಕಳ್ಳತನವಾಗಿದ್ದ ಐದು ಮರಗಳ ಪೈಕಿ ಕೇವಲ ಎರಡು ಮರಗಳಿಗಷ್ಟೇ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನುಳಿದ ಮೂರು ಮರಗಳ ಬಗ್ಗೆ ಹೊರಜಗತ್ತಿಗೆ ಮಾಹಿತಿ ನೀಡದೇ ಮುಚ್ಚಿಹಾಕಲು ಮಾಡಬಾರದ ಎಲ್ಲಾ ಕುತಂತ್ರಗಳನ್ನೂ ಮಾಡಿ...
ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?
ಮುಂಡಗೋಡ: ತಾಲೂಕಾಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲೇ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಬೆಲೆಬಾಳುವ ಎರಡು ಶ್ರೀಗಂಧದ ಮರಗಳನ್ನು ಅನಾಮತ್ತಾಗಿ ಎಗರಿಸಿಕೊಂಡು ಹೋಗಿದ್ದಾರೆ ಕಳ್ಳರು. ಕೋಟೆ ಕೊಳ್ಳೆ ಹೊಡೆದ ಮೇಲೆ ಅದೇಂತದ್ದೋ ಬಾಗಿಲು ಹಾಕಿದ್ರು ಅಂತಾರಲ್ಲ ಹಾಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮುಗಿದ ಮೇಲೆ ಓಡೋಡಿ ಬಂದಿದ್ದಾರೆ. ಮತ್ತದೇ ತನಿಖೆಗಿಳಿದಿದ್ದಾರೆ. ಅದು ಜನವಸತಿ ಏರಿಯಾ..! ಅಸಲು, ಇವಾಗ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿರೋ ಜಾಗ ಇದೆಯಲ್ಲ, ಅದು ಬಹುತೇಕ ಜನವಸತಿಯ ಜಾಗವೇ, ಹೀಗಿದ್ದಾಗಲೂ ಯಾರಿಗೂ ಒಂಚೂರು ಗೊತ್ತಾಗದ ಹಾಗೆ ಮರ ಕಡಿದು ಎಗರಿಸಿಕೊಂಡು ಹೋಗೋದು ಅಂದ್ರೆ ಹೇಗೆ..? ಅಷ್ಟಕ್ಕೂ, ಇಲ್ಲಿ ಪ್ರೊಫೇಶನಲ್ ಕಳ್ಳರದ್ದೇ ಗ್ಯಾಂಗ್ ಕೃತ್ಯ ಮಾಡಿದೆಯಾ..? ಅಥವಾ ಗೊತ್ತಿದ್ದವರೇ ಕಡಿದು ಸಾಗಿಸಿದ್ರಾ..? ಅಧಿಕಾರಿಗಳು ತಿಳಿಸಬೇಕಿದೆ. ಹಿಂದೆಯೂ ನಡೆದಿತ್ತು..! ಹಾಗೆ ನೋಡಿದ್ರೆ, ತಾಲೂಕಿನಲ್ಲಿ ಹಿಂದೆಯೂ ಇಂತಹ ಶ್ರೀಗಂಧದ ಮರಗಳ್ಳತನ ಪ್ರಕರಣಗಳು ಸಾಕಷ್ಟು ನಡೆದಿವೆ. ಮನೆ ಪಕ್ಕದಲ್ಲೇ ಇದ್ದ ಮರಗಳನ್ನು ಕಣ್ಣು ಮುಚ್ಚಿ ತೆಗೆಯೋದ್ರಲ್ಲಿ ಎತ್ತಂಗಡಿ ಮಾಡಿದ್ದ ಅದೇಷ್ಟೋ ಘಟನೆಗಳೂ ನಡೆದಿವೆ....
ರಾಹುಲ್ ಗಾಂಧಿಗೆ ಬಿಜೆಪಿಯಿಂದ ಅವಮಾನ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ನಿಂದ ಮುಂಡಗೋಡಿನಲ್ಲಿ ಪ್ರತಿಭಟನೆ, ಆಕ್ರೋಶ..!
ಮುಂಡಗೋಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ಐಟಿ ವಿಭಾಗದಿಂದ ಅವಮಾನ ಆಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮುಂಡಗೋಡಿನಲ್ಲಿಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಬಿಜೆಪಿ ವಿರುದ್ಧ ಗುಡುಗಿದ್ರು.10 ತಲೆಗಳಿರುವ ರಾಹುಲ್ ಗಾಂಧಿ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದೆ. ಈ ಪೋಸ್ಟ್ ಅನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ, ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿಯವರನ್ನು ಅವಹೇಳನ ಮಾಡಿದ್ದಕ್ಕಾಗಿ ಅವ್ರು ಆಕ್ರೋಶ ವ್ಯಕ್ತ ಪಡಿಸಿದ್ರು. “ಇಂಡಿಯಾ” ಒಕ್ಕೂಟ ರಚನೆಯಾದಾಗಿನಿಂದ ಬಿಜೆಪಿಯವರು ಭಯಭೀತರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ರಾವಣ ಎಂದು ಕರೆಯುವುದು ಅವರ ಹತಾಶೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಏನೆಂಬುದು ದೇಶದ ಜನರಿಗೆ ಗೊತ್ತಿದೆ, ಜನರ ನೋವು ಅವರಿಗೆ ಅರ್ಥವಾಗಿದೆ. ಅವರು ಮಣಿಪುರದ ಜನರೊಂದಿಗೆ, ತರಕಾರಿ ಮಾರಾಟಗಾರರು...
ದಲಿತ ವ್ಯಕ್ತಿಯ ಹತ್ಯೆ ಹಿನ್ನೆಲೆ, ನ್ಯಾಸರ್ಗಿಗೆ ಡಿಸಿ ಗಂಗೂಬಾಯಿ ಮಾನಕರ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ, ಪರಿಹಾರದ ಚೆಕ್ ಹಸ್ತಾಂತರ..!
ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ನಡೆದ ದಲಿತ ವ್ಯಕ್ತಿಯ ಹತ್ಯೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಕರಣ ಸಂಬಂಧ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮೃತನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಅಲ್ದೆ, ಪರಿಹಾರದ ಚೆಕ್ ವಿತರಿಸಿದ್ರು. ಅಮಾನುಷ ಘಟನೆ..! ಕಳೆದ ಸೆ. 17 ರಂದು ನಡೆದಿದ್ದ ಜಗಳದಲ್ಲಿ ನ್ಯಾಸರ್ಗಿಯ ದಲಿತ ವ್ಯಕ್ತಿ ಮಂಜುನಾಥ್ ಬೋವಿ ವಡ್ಡರ ಮೇಲೆ ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ಕುರುಬರ್ ಮಾರಣಾಂತಿಕ ಹಲ್ಲೆ ಮಾಡಿದ್ದ, ಹೀಗಾಗಿ, ತೀವ್ರ ಗಾಯಗೊಂಡಿದ್ದ ಮಂಜುನಾಥನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ 13 ದಿನಗಳ ನಂತ್ರ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮಂಜುನಾಥ ಸಾವನ್ನಪ್ಪಿದ್ದ. ಎಸ್ಪಿ, ಡಿಸಿ ಭೇಟಿ..! ಯಾವಾಗ, ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ದಲಿತ ವ್ಯಕ್ತಿ ಸಾವನ್ನಪ್ಪಿದ ವಿಷಯ ತಿಳಿದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನ್ಯಾಸರ್ಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದ್ರಂತೆ ಇವತ್ತು ಡಿಸಿ ಗಂಗೂಬಾಯಿ...
ಟಿಬೇಟಿಯನ್ ಕ್ಯಾಂಪಿನಲ್ಲಿ ನಡೆದಿದ್ದ ದರೋಡೆ ಕೇಸಿನಲ್ಲಿ ಕೋರ್ಟ್ ತೀರ್ಪು, ನಾಲ್ವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ..!
ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ 1 ರ ಟಿಬೇಟಿಗರ ಮನೆಯೊಂದರಲ್ಲಿ 2019 ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮುಂಡಗೋಡಿನ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೋಳಂಕಿ ಮತ್ತು ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ ಎಂಬುವವರಿಗೆ ಶಿಕ್ಷೆಯಾಗಿದೆ. 2019 ರ ಜನವರಿಯಲ್ಲಿ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರಲ್ಲಿ ಜಾಂಜ್ಚುಪ್ ರಾಚನ್ ತೇಂಜಿಂಗ್ ಎಂಬುವವರ ಮನೆಗೆ ರಾತ್ರಿ ನುಗ್ಗಿದ ನಾಲ್ವರು ಮನೆಯ ಯಜಮಾನ ಹಾಗೂ ಮಹಿಳೆಯ ಕೈ, ಬಾಯಿಗಳನ್ನು ಕಟ್ಟಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಜಾಂಜ್ಚುಪ್ ರಾಚನ್ ತೇಂಜಿಂಗ್ ಅವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ 6 ಲಕ್ಷ ರೂ.ನಗದು, ಎರಡು ಐಫೋನ್, ಒಪ್ಪೊ ಕಂಪನಿಯ ಮೊಬೈಲ್, ಟ್ಯಾಬ್, ಸಿಸಿ ಟಿವಿಯ ಪ್ರೊಜೆಕ್ಟರ್,...