ಮುಂಡಗೋಡ ಪಟ್ಟಣದ ಮೂರು ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸ್ತಿದ್ದ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗ್ತಿದೆಯಾ..? ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರಗಳನ್ನು  ಸದ್ಯ ಮುಚ್ಚಲಾಗ್ತಿದೆ ಅನ್ನೋ ಸುದ್ದಿ ತಿಳಿದು ಅಲ್ಲಿನ ಪೋಷಕರು ಆತಂಕಗೊಂಡಿದ್ದಾರೆ. ಹೀಗಾಗಿ, ಪೋಷಕರು ಶಿಶು ಪಾಲನ ಕೇಂದ್ರ ಮುಚ್ಚದಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ.

ಜಿಲ್ಲೆ ಸೇರಿದಂತ ರಾಜ್ಯದ ಕೆಲವೆಡೆ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗುತ್ತಿದ್ದು, ಅದೇ ಭಯ ಇದೀಗ ಮುಂಡಗೋಡಿನ ಸುಭಾಷನಗರ, ಲಂಬಾಣಿ ತಾಂಡಾ ನಂ.3 ಹಾಗೂ ಗಣೇಶನಗರದ ಮಕ್ಕಳ ಪಾಲಕರಲ್ಲಿ ಶುರುವಾಗಿದೆ. ಕಾರಣ ಈ ಮೂರೂ ಶಿಶು ಪಾಲನ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಜೊತೆಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಇದನ್ನು ಮುಚ್ಚಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಅನ್ನೋದು ಪೋಷಕರ ಅಳಲು.

ಅಂದಹಾಗೆ, ಇಲ್ಲಿ ಇವಾಗ ನೂರಾರು ಪುಟ್ಟ ಪುಟ್ಟ ಮಕ್ಕಳು ಶಿಶು ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ ಅಂತಾ ಆತಂಕದಲ್ಲಿರೋ ಇಲ್ಲಿನ ಪಾಲಕರು ಮುಂಡಗೋಡ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ನೀಡಲು ಮುಂದಾಗಿದ್ದಾರೆ.

ಹೀಗಾಗಿ, ಸರ್ಕಾರ ಬಡ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರ ಮುಚ್ಚದಂತೆ ಕ್ರಮ ವಹಿಸಬೇಕಾಗಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಬೇಕಾಗಿದೆ.

error: Content is protected !!