ಹಾವೇರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಇಬ್ಬರು RFO ಗಳ ಮನೆ, ಸೇರಿದಂತೆ 9 ಕಡೆ ಲೋಕಾ ದಾಳಿಯಾಗಿದೆ. RFO ಪರಮೇಶ್ವರ ಪೇರಲನವರ, RFO ಮಾಲತೇಶ ನ್ಯಾಮತಿ ಗೆ ಸೇರಿದ ಮನೆ ಹಾಗೂ ಫಾರ್ಮ್ ಹೌಸ್ ಸೇರಿ 9 ಕಡೆ ದಾಳಿ ನಡೆಸಲಾಗಿದೆ.
ಹಾವೇರಿ ನಗರ ಹಾಗೂ ಕುರಬಗೊಂಡ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. RFO ಪರಮೇಶ್ವರ ಪೇರಲನವರಗೆ ಸೇರಿದ ಎರಡು ಮನೆ ಸೇರಿದಂತೆ 6 ಕಡೆ ದಾಳಿ ನಡೆದಿದೆ. ಇನ್ನು ಮತ್ತೋರ್ವ RFO ಮಾಲತೇಶ್ ನ್ಯಾಮತಿಯವರ ಮನೆ ಸೇರಿ ಮೂರು ಕಡೆ ದಾಳಿ ನಡೆದಿದೆ.
ಹಾವೇರಿಯ ಶಿವಾಜಿನಗರ, ವರದಾನೇಶ್ವರಿ ನಗರ, ಕುರುಬಗೊಂಡ ಗ್ರಾಮದ ಮನೆ, ಫಾಮ್೯ ಹೌಸ್ ಗಳ ಮೇಲೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಏನೇನು ಸಿಕ್ಕಿದೆ ಅನ್ನೋ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ.