ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!

ಮುಂಡಗೋಡಿನ ಭ.ಶಂಭವನಾಥ ತೀರ್ಥಂಕರರ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಿನಮಂದರದಲ್ಲಿ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ಜೈನ ಶ್ರಾವಕರು ಹಮ್ಮಿಕೊಂಡಿದ್ದರು.

ಪದ್ಮಾವತಿ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸುಮಂಗಲೆಯರು ಜಿನಭಕ್ತಿಗೀತೆಗಳೊಂದಿಗೆ ಅಮ್ಮನವರಿಗೆ ವಿಶೇಷ ಅರ್ಚನೆ ಮಾಡಿದ್ರು. ಈ ವೇಳೆ ಪಟ್ಟಣದ ಹಲವು ಜೈನ ಮುಖಂಡರು, ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ರು.

error: Content is protected !!