ಶಿಗ್ಗಾವಿ ಬಳಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ

ಶಿಗ್ಗಾವಿ ಬಳಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ

ಶಿಗ್ಗಾವಿ : ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟು ಐದು ಜನರು ತೀವ್ರ ಗಾಯಗೊಂಡ ಘಟನೆ ಶಿಗ್ಗಾವಿ- ಹನುಮರಹಳ್ಳಿ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ ಮರಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಮೃತರು ಸವಣೂರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ನೀಲಪ್ಪ ಮೂಲಿಮನಿ (23), ಸುದೀಪ್ ಕೋಟಿ (19) ಮೃತ ದುರ್ದೈವಿಗಳಾಗಿದ್ದಾರೆ, ಐದು ಜನ ತೀವ್ರ ಗಾಯಗೊಂಡಿದ್ದು ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇವನಹಳ್ಳಿ ಇಂದ ನಂದಗಡಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ಸ್ವಿಫ್ಟ್ ಡಿಸೈರ್ ಕಾರು ನಜ್ಜುಗುಜ್ಜಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಂಬಂಧಿಗಳು ಹಾಗೂ ಶಿಗ್ಗಾವಿ ಪೊಲೀಸ್ ರು ಬೇಟಿ ನೀಡಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.

ಕಣಜೀರಿಗೆ ಹುಳು ಕಡಿತದಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ 15 ಲಕ್ಷ ಪರಿಹಾರ.! ಚೆಕ್ ವಿತರಿಸಿದ ಶಾಸಕ ಶಿವರಾಮ ಹೆಬ್ಬಾರ್

ಕಣಜೀರಿಗೆ ಹುಳು ಕಡಿತದಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ 15 ಲಕ್ಷ ಪರಿಹಾರ.! ಚೆಕ್ ವಿತರಿಸಿದ ಶಾಸಕ ಶಿವರಾಮ ಹೆಬ್ಬಾರ್

ಮುಂಡಗೋಡ: ನಿಜಕ್ಕೂ ಇದು ವಿಶೇಷದಲ್ಲಿ ಅತಿ ವಿಶೇಷ ಪ್ರಕರಣ, ಶಾಸಕ ಶಿವರಾಮ್ ಹೆಬ್ಬಾರ್ ರವರ ಪ್ರಯತ್ನದ ಫಲವಾಗಿ ಜಾರಿಯಾದ ಮಹತ್ವದ ತೀರ್ಮಾನ. ಕಣಜೀರಿಗೆ ಹುಳು ಕಡಿತಕ್ಕೆ ಒಳಗಾಗಿ ಮೃತಪಟ್ಟ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ದನಗರ ಗೌಳಿ ಸಮುದಾಯದ ಯುವಕ ಜನ್ನು ದೂಳು ಕೊಕರೆ ಕುಟುಂಬಕ್ಕೆ ಬರೋಬ್ಬರಿ 15 ಲಕ್ಷ ರೂ. ಪರಿಹಾರ ಬಂದು ದೊರಕಿದೆ‌. ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಇಂದು, ಶಾಸಕ ಶಿವರಾಮ ಹೆಬ್ಬಾರ್, ಮೃತ ಯುವಕ ಜನ್ನು ದೂಳು ಕೊಕರೆ ಅವರ ಕುಟುಂಬಸ್ಥರಿಗೆ 15 ಲಕ್ಷ ರೂಪಾಯಿಯ ಪರಿಹಾರ ಧನದ ಚೆಕ್ ಹಸ್ತಾಂತರಿಸಿದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ಸಂತ್ರಸ್ಥರು : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ಸಂತ್ರಸ್ಥರು : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಬುಧವಾರದಂದು ಮಳೆ ಕ್ಷೀಣಗೊಂಡಿದೆ. ಹೊನ್ನಾವರ ತಾಲ್ಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಎಲ್ಲಾ ಸಂತ್ರಸ್ಥರು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ 2 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಜೂನ್ 1 ರಿಂದ ಇದುವರೆಗೆ ಮಳೆಯಿಂದಾಗಿ 1 ಸಾವಾಗಿದೆ. 8 ಮನೆಗಳು ಸಂಪೂರ್ಣ ಹಾನಿಯಾಗಿವೆ, 18 ಮನೆಗಳು ತೀವ್ರ ಹಾನಿ, 119 ಮನೆಗಳಿಗೆ ಭಾಗಶಃ ಹಾನಿ ಹಾಗೂ 2 ಜಾನುವಾರು ಸಾವು ಸಂಭವಿಸಿದೆ. 830 ಮನೆಗಳು ನೀರಿನಿಂದ ಜಲಾವೃತ್ತವಾಗಿದ್ದು, 809 ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಿ, ವೈದ್ಯಕೀಯ ನೆರವು ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ. ಇನ್ನು, ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿಯಾಗದಂತೆ ಎಲ್ಲಾ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಾನುವಾರು ಪ್ರಾಣ ಹಾನಿ...

ಇಂದೂರಿನಲ್ಲಿ ನೂತನ KDCC ಬ್ಯಾಂಕ್ ಶಾಖೆ ಉದ್ಘಾಟನೆ..!

ಇಂದೂರಿನಲ್ಲಿ ನೂತನ KDCC ಬ್ಯಾಂಕ್ ಶಾಖೆ ಉದ್ಘಾಟನೆ..!

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನ ನೂತನ ಶಾಖೆಯನ್ನು ಶಾಸಕ ಶಿವರಾಮ್ ಹೆಬ್ಬಾರ್ ಉದ್ಘಾಟಿಸಿದ್ರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ್ ನಾಯಕ, ನಿರ್ದೇಶಕ ಎಲ್.ಟಿ.ಪಾಟೀಲ್, ಪ್ರಮೋದ ದವಳೆ, ಪ್ರಕಾಶ ಗುನಗಿ, ಬಾಬು ಸುಂಕೇರಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರವಿಗೌಡ ಪಾಟೀಲ್, ಪ್ರಮುಖರಾದ ಎಚ್.ಎಮ್.ನಾಯ್ಕ, ಕೃಷ್ಣ ಹಿರೇಹಳ್ಳಿ, ದೇವು ಪಾಟೀಲ್, ಸಿದ್ದಪ್ಪ ಹಡಪದ, ಕೆ.ಸಿ.ಗಲಭಿ, ನಾಗಭೂಷಣ ಹಾವಣಗಿ, ಗ್ರಾಪಂ ಅಧ್ಯಕ್ಷ ಶಶಿಧರ್ ಪರ್ವಾಪುರ, ಹುನಗುಂದ ಗ್ರಾಪಂ ಅಧ್ಯಕ್ಷ ಷರೀಫ್ ಸಿಂಗ್ ಶಿಗ್ಗಟ್ಟಿ, ನಂದಿಕಟ್ಟಾ ಗ್ರಾಪಂ ಅಧ್ಯಕ್ಷ ಸಂತೋಷ ಭೊಸಲೆ ಸೇರಿದಂತೆ ಸ್ಥಳೀಯ ಮುಖಂಡರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚವಡಳ್ಳಿ ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಪ್ರದೀಪ್ ಚವ್ಹಾಣ ಅವಿರೋಧ ಆಯ್ಕೆ..!

ಚವಡಳ್ಳಿ ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಪ್ರದೀಪ್ ಚವ್ಹಾಣ ಅವಿರೋಧ ಆಯ್ಕೆ..!

ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿಗೆ ನೂತನ ಉಪಾಧ್ಯಕ್ಷರಾಗಿ ಪ್ರದೀಪ್ ಚೌವ್ಹಾಣ ಅವಿರೋಧ ಆಯ್ಕೆಯಾಗಿದ್ದಾರೆ. 13 ಸದಸ್ಯ ಬಲದ ಚವಡಳ್ಳಿ ಪಂಚಾಯತಿಯಲ್ಲಿ, ಈ ಹಿಂದಿನ ಉಪಾಧ್ಯಕ್ಷ ಸುನಿಲ್ ರಾಠೋಡ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಲೋಕಪ್ಪ ಕೋಣನಕೇರಿ ಹಾಗೂ ಪ್ರದೀಪ್ ಚವ್ಹಾಣ್ ನಾಮಪತ್ರ ಸಲ್ಲಿಸಿದ್ದರು‌. ಆದ್ರೆ ಕೊನೆ ಕ್ಷಣದಲ್ಲಿ ಲೋಕಪ್ಪ ಕೋಣನಕೇರಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಪ್ರದೀಪ್ ಚವ್ಹಾಣ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆದಂತಾಗಿದೆ. ಇನ್ನು ಚುನಾವಣಾಧಿಕಾರಿಯಾಗಿ ಎಂ.ಎಸ್. ಕುಲಕರ್ಣಿ ಕಾರ್ಯನಿರ್ವಹಿಸಿದ್ರು.

ಮೈನಳ್ಳಿಯಲ್ಲಿ ಜನಶಕ್ತಿ ದನಗರ ಸಹಕಾರಿ ಸಂಘ ಉದ್ಘಾಟಿಸಿದ ಶಾಸಕ ಹೆಬ್ಬಾರ್..!

ಮೈನಳ್ಳಿಯಲ್ಲಿ ಜನಶಕ್ತಿ ದನಗರ ಸಹಕಾರಿ ಸಂಘ ಉದ್ಘಾಟಿಸಿದ ಶಾಸಕ ಹೆಬ್ಬಾರ್..!

ಮುಂಡಗೋಡ: ತಾಲೂಕಿನ ಮೈನಳ್ಳಿಯಲ್ಲಿ ಜನಶಕ್ತಿ ಧನಗರ ಸಹಕಾರಿ ಸಂಘವನ್ನು ಶಾಸಕ ಶಿವರಾಮ್ ಹೆಬ್ಬಾರ್ ಉದ್ಘಾಟಿಸಿ, ನೂತನ ಸಹಕಾರಿ ಸಂಘಕ್ಕೆ ಶುಭ ಹಾರೈಸಿದರು. ದೀಪ ಬೆಳಗಿಸುವುದರ ಮೂಲಕವಾಗಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರು ನೂತನ ಸಹಕಾರಿ ಸಂಘದ ಹುಟ್ಟಿನಿಂದ ಬಡವರ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕೆ ಅನೂಕುಲವಾಗಲಿದೆ ಇಂತಹ ಸಹಕಾರಿ ಸಂಘವು ಜನರ ಹಣಕ್ಕೆ ಭದ್ರತೆಯನ್ನು ನೀಡುವುದರ ಜೊತೆಯಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಜವಾಬ್ದಾರಿಯಿಂದ ನಡೆದುಕೊಂಡು ಸಾರ್ವಜನಿಕರ ಹಣವನ್ನು ಕಾಯುವ ಕಾವಲುಗಾರರಾಗಿ ಕಾರ್ಯನಿರ್ವಾಹಿಸಬೇಕು ಹಾಗೂ ಧನಗರ ಗೌಳಿ ಸಮುದಾಯದ ಈ ಸಹಕಾರಿ ಸಂಘದ ಬಲವರ್ಧನೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್‌.ಪಾಟೀಲ್, ಕೆ.ಪಿ.ಸಿ.ಸಿ ಸದಸ್ಯರಾದ ವಿವೇಕ್ ಹೆಬ್ಬಾರ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಪ್ರಮುಖರಾದ ಎಚ್.ಎಮ್.ನಾಯ್ಕ, ಕೃಷ್ಣ ಹಿರೇಹಳ್ಳಿ, ದೇವು ಪಾಟೀಲ್, ಸಿದ್ದಪ್ಪ ಹಡಪದ, ಕೆ.ಸಿ.ಗಲಭಿ, ನಾಗಭೂಷಣ ಹಾವಣಗಿ, ಸಹಕಾರಿ ಸಂಘದ ಅಧ್ಯಕ್ಷ ಕೊಂಡು ಯಾಮಕರ್ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಅವಾಂತರಗಳು ಚಾಲ್ತಿಯಲ್ಲಿವೆ. ಅದ್ರಲ್ಲೂ, ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಹೀಗಾಗಿ, ಕರಾವಳಿ ಭಾಗದ ಎರಡು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಮಳೆಯ ಕಾರಣಕ್ಕಾಗಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಹೊನ್ನಾವರ, ಕುಮಟಾ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 9 ರಂದು ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..

ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ,  8 ಕಾಳಜಿ ಕೇಂದ್ರಗಳಲ್ಲಿ 313 ಜನರಿಗೆ ಆಶ್ರಯ : ಡಿಸಿ ಲಕ್ಷ್ಮೀಪ್ರಿಯಾ ಕೆ.

ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 8 ಕಾಳಜಿ ಕೇಂದ್ರಗಳಲ್ಲಿ 313 ಜನರಿಗೆ ಆಶ್ರಯ : ಡಿಸಿ ಲಕ್ಷ್ಮೀಪ್ರಿಯಾ ಕೆ.

 ಕಾರವಾರ; ಜಿಲ್ಲೆಯಲ್ಲಿ ಸೋಮವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಹೊನ್ನಾವರ ತಾಲ್ಲೂಕಿನಲ್ಲಿ ತೆರೆಯಲಾದ 8 ಕಾಳಜಿ ಕೇಂದ್ರಗಳಲ್ಲಿ 313 ಮಂದಿ ಆಶ್ರಯ ಪಡೆದಿದ್ದಾರೆ, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಅಂತಾ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ. ಕದ್ರಾ ಜಲಾಶಯದಲ್ಲಿ ನೀರಿನ ಮಟ್ಟವು ಜಿಲ್ಲಾಡಳಿತ ನಿಗಧಿಪಡಿಸಿದ ಮಟ್ಟಕ್ಕಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದಿಂದ 10600 ಕೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2 ಮನೆಗಳಿಗೆ ತೀವ್ರ ಹಾನಿ ಹಾಗೂ 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ....

ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..!

ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..!

ಹಿರೇಕೆರೂರಿನ, ಮಾಜಿ ಸಚಿವ ಬಿಸಿ ಪಾಟೀಲ್‌ ಅಳಿಯ ಪ್ರತಾಪಕುಮಾರ ಕೆಜಿ (41) ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರ್ ನಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಾಪಕುಮಾರನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು * ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ. * ದಾವಣಗೆರೆ ತಾಲೂಕಿನ ಕತ್ತಲಗೇರಿ ಗ್ರಾಮದ ನಿವಾಸಿ. * ಕಳೆದ 12 ವರ್ಷಗಳ ಹಿಂದೆ ಬಿ.ಸಿ.ಪಾಟೀಲ್ ಮಗಳ ಜೊತೆಗೆ ಮದುವೆ. * ಬಿ.ಸಿ.ಪಾಟೀಲ್ ಹಿರಿಯ ಪುತ್ರಿ ಸೌಮ್ಯಳನ್ನ ಮದುವೆಯಾಗಿದ್ದ ಪ್ರತಾಪಕುಮಾರ ಕೆ.ಜಿ. * ವಿಶೇಷಚೇತನಾಳಗಿದ್ದ ಸೌಮ್ಯಳನ್ನ ಮದುವೆ ಆಗಿದ್ದ ಪ್ರತಾಮಕುಮಾರ ಕೆ.ಜಿ. * ಬಿ.ಸಿ.ಪಾಟೀಲ್ ಮನೆಯ ಅಳಿಯನಾಗಿ, ಕೃಷಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ. * ಬಿ.ಸಿ.ಪಾಟೀಲ್ ಅವರ ರಾಜಕೀಯ ಕೆಲಸಗಳನ್ನ ನಿರ್ವಹಣೆ ಮಾಡ್ತಾ ಇದ್ದ. * ಮದುವೆ ಆದ ನಂತ್ರ ಹಿರೇಕೆರೂರನಲ್ಲಿ ವಾಸವಿದ್ದ ಪ್ರತಾಮಕುಮಾರ...

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಜಿಲ್ಲಾಧಿಕಾರಿ ಆದೇಶ..!

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಜಿಲ್ಲಾಧಿಕಾರಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಅವಾಂತರಗಳು ಚಾಲ್ತಿಯಲ್ಲಿವೆ. ಅದ್ರಲ್ಲೂ, ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಹೀಗಾಗಿ, ಕರಾವಳಿ ಭಾಗದ ಐದು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಮಳೆಯ ಕಾರಣಕ್ಕಾಗಿ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ಮತ್ತು ಕಾರವಾರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..  

error: Content is protected !!