ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, 24 ವರ್ಷದ ಹುಡುಗನ ಬರ್ಬರ ಹತ್ಯೆ..! ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸ್ರು..!


ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ.
ಹಳೆ‌ ವೈಷಮ್ಯಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ ದುಷ್ಕರ್ಮಿಗಳು. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್‌ನಲ್ಲಿ ಘಟನೆ ನಡೆದಿದೆ

ಆಕಾಶ ವಾಲ್ಮೀಕಿ(24) ಕೊಲೆಯಾದ ಯುವಕನಾಗಿದ್ದು, ಮೂವರಿಂದ ಯುವಕನ ಕೊಲೆಯಾಗಿದೆ ಅನ್ನೊ ಮಾಹಿತಿ ಇದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ಪಾರಿಶೀಲನೆ ನಡೆಸಿದ್ದಾರೆ.

ಕೊಲೆ ಆರೋಪಿಗಳ ಕಾಲಿಗೆ ಗುಂಡು..!
ಅಂದಹಾಗೆ, ಆಕಾಶ್ ವಾಲ್ಮೀಕಿ ಕೊಲೆ ಆರೋಪಿಗಳನ್ನು ಬೆನ್ನತ್ತಿದ ಹುಬ್ಬಳ್ಳಿ ಪೊಲೀಸ್ರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಹೀಗಾಗಿ, ಸದ್ಯ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

error: Content is protected !!