ಕಾತೂರು ಬಳಿ ಶವ ಸಿಕ್ಕ ಕೇಸ್: ಟ್ರಾಕ್ಟರ್ ಮೇಲಿಂದ ಬಿದ್ದು ಸಾವು ಕಂಡನಾ ನಾಗನೂರಿನ ಶಂಭಣ್ಣ..?

ಕಾತೂರು ಬಳಿ ಶವ ಸಿಕ್ಕ ಕೇಸ್: ಟ್ರಾಕ್ಟರ್ ಮೇಲಿಂದ ಬಿದ್ದು ಸಾವು ಕಂಡನಾ ನಾಗನೂರಿನ ಶಂಭಣ್ಣ..?

 ಮುಂಡಗೋಡ ತಾಲೂಕಿನ ನಾಗನೂರಿನಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದೆ. ಕಾತೂರಿನಿಂದ ನಾಗನೂರಿಗೆ ತೆರಳುವ ಮಾರ್ಗದಲ್ಲಿ ಕಾತೂರಿನಿಂದ ಹೆಚ್ಚೂ ಕಡಿಮೆ 200 ಮೀಟರ್ ಅಂತರದಲ್ಲಿ ರಕ್ತಸಿಕ್ತವಾಗಿದ್ದ ಶವ ಸಿಕ್ಕಿದ್ದು ಬಹುತೇಕ ಆ ಭಾಗದಲ್ಲಿ ಭಯದ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದ್ರೀಗ ಅದೊಂದು ಆಕಸ್ಮಿಕ ಅಪಘಾತ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮರ್ಡರ್ ಅನಕೊಂಡಿದ್ರು..! ಶವ ಸಿಕ್ಕ ಸ್ಥಿತಿ ನೋಡಿದ್ರೆ, ಇದೊಂದು ಕೊಲೆನಾ ಅನ್ನೊ ಅನುಮಾನಕ್ಕೆ ತಂದು ನಿಲ್ಲಿಸತ್ತು. ಆದ್ರೆ ಮತ್ತೊಂದು ಮಗ್ಗಲಿನಲ್ಲಿ ನೋಡಿದ್ರೆ ಇದೊಂದು ಆಕಸ್ಮಿಕ ಅಪಘಾತದ ಸಾವು ಅನ್ನೊದು ಕಂಡು ಬ‌ಂದಿತ್ತು. ಯಾಕಂದ್ರೆ ಆ ಮನುಷ್ಯನ ಹೆಣ ಉರುಳಿಸುವಂತಹ ದುಶ್ಮನಿಗಳು ಅವನಿಗೆ ಯಾರೂ ಇಲ್ಲವಂತೆ, ಅಷ್ಟಕ್ಕೂ ಆತ ತುಂಬಾ ಸೂಕ್ಷ್ಮ ಹಾಗೂ ಸಂಭಾವಿತ ವ್ಯಕ್ತಿ. ಹೀಗಿದ್ದಾಗ ಯಾರಪ್ಪಾ ಅವನ ದುಷ್ಮನ್ ಆಗೋಕೆ ಸಾಧ್ಯ ಅಂತಿದಾರೆ ಅತನ ಸಂಬಂದಿಕರು. ಹಾಗಿದ್ರೆ ಆಗಿದ್ದೇನು..? ನಿನ್ನೆ ನಾಗನೂರಿನಿಂದ ಶಿರಸಿಗೆ ಟ್ರಾಕ್ಟರ್ ಮೂಲಕ ಇಟ್ಟಿಗೆ ತುಂಬಿಕೊಂಡು ಹೋಗಿದ್ದ ಜನರಲ್ಲಿ ಈತನೂ ಒಬ್ಬ. ಆದ್ರೆ, ಹಾಗೆ ಹೋಗಿದ್ದ...

ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?

ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?

ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಹಿಂದೆ ಮುಂಡಗೋಡ ತಾಲೂಕಿನ ಲಿಂಕ್ ಇದೆಯಾ..? ಹೌದು ಅಂತಿದೆ ಮೂಲಗಳು. ನಿನ್ನೆ ರಾತ್ರಿ ಹುಲಗೂರಿನ ತನ್ನ ಮನೆಯ ಜಗುಲಿಯಲ್ಲಿ ಕುಳಿತಿದ್ದ ಮಹಿಳೆ ಸಲ್ಮಾಬಾನು ಮೇಲೆ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್ ಮೇಲೆ ಬಂದು ಒಂದು ಸುತ್ತು ಗುಂಡಿನ ದಾಳಿ ನಡೆಸಿದ್ರು. ಅದೃಷ್ಟವಶಾತ್ ಮಹಿಳೆಗೆ ಗುಂಡು ತಗುಲಿಲ್ಲ. ಅದ್ರೆ, ಸಿಡಿದ ಗುಂಡಿನ ರಭಸಕ್ಕೆ ಗೋಡೆ ಸೀಳಿ ಒಳ ನುಗ್ಗಿವೆ ಗುಂಡುಗಳು. ಪಕ್ಕಾ ಸುಳಿವು..? ಆದ್ರೆ, ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಬಚಾವಾಗಿದ್ದ ಸಲ್ಮಾಬಾನು ಈಗ ಪೊಲೀಸರ ಎದುರು ಒಂದಿಷ್ಟು ಇಂಟರ್ನಲ್ ಮಾಹಿತಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ. ತನ್ನ ಪತಿಯೇ ನನ್ನ ಮೇಲೆ ಅಟ್ಯಾಕ್ ಮಾಡಿರಬಹುದು ಅನ್ನೋ ಶಂಕೆ ವ್ಯಕ್ತ ಪಡಿಸಿದ್ದಾಳೆ ಅನ್ನೊ ಬಾತ್ಮಿ ಬಂದಿದೆ. ಹೀಗಾಗಿ, ಸದ್ಯ ಶಿಗ್ಗಾವಿ ಪೋಲೀಸ್ರು ಆಕೆಯ ಪತಿಗಾಗಿ ನಿನ್ನೆ ರಾತ್ರಿಯಿಂದಲೇ ತಲಾಶ್ ಶುರುವಿಟ್ಟಿದ್ದಾರೆ.  ಹೌದು, ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಅದೃಷ್ಟದಾಟದಲ್ಲಿ...

ಶಿಗ್ಗಾವಿಯ ಹುಲಗೂರಿನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಬೈಕ್ ಮೇಲೆ ಬಂದಿದ್ದವರು ಹಾರಿಸಿದ್ರು ಗುಂಡು..!

ಶಿಗ್ಗಾವಿಯ ಹುಲಗೂರಿನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಬೈಕ್ ಮೇಲೆ ಬಂದಿದ್ದವರು ಹಾರಿಸಿದ್ರು ಗುಂಡು..!

 ಶಿಗ್ಗಾವಿ ತಾಲೂಕಿನಲ್ಲಿ ಮತ್ತೊಂದು ಪೈರಿಂಗ್ ನಡೆದಿದೆ. ಹುಲಗೂರಿನಲ್ಲಿ ಮನೆಯ ಹೊರಗಡೆ ಜಗುಲಿಯ ಮೇಲೆ ಕುಳಿತ ಮಹಿಳೆ ಮೇಲೆ ಬೈಕ್ ಮೇಲೆ ಬಂದಿದ್ದ ಅಪರಿಚಿತರಿಂದ ಕತ್ತಲಿನಲ್ಲೇ ಗುಂಡಿನ ದಾಳಿ ನಡೆದಿದೆ‌. ಅದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಮಹಿಳೆ ಬಚಾವ್ ಆಗಿದ್ದಾಳೆ. ಹುಲಗೂರಿನಲ್ಲಿ ತಡರಾತ್ರಿ ಮನೆಯ ಎದುರು ಕುಳಿತಿದ್ದ ಸಲ್ಮಾ ಎಂಬುವವಳ ಮೇಲೆ ಬೈಕ್ ನಲ್ಲಿ ಬಂದ ಮುಸುಕುಧಾರಿಗಳಿಂದ ಕತ್ತಲಿನಲ್ಲೇ ಒಂದು ಸುತ್ತು ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಯುತ್ತಲೇ ಮಹಿಳೆ ಮನೆಯ ಒಳಗೆ ಓಡಿದ್ದಾಳೆ. ಹೀಗಾಗಿ, ಹಾರಿ ಬಂದ ಗುಂಡುಗಳು ಗೋಡೆಗೆ ತಾಗಿವೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಶಿಗ್ಗಾವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶಪುರದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಸೇರಿ, ಇಬ್ಬರ ಮೇಲೆ ಕೇಸ್ ದಾಖಲು..!

ಗಣೇಶಪುರದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಸೇರಿ, ಇಬ್ಬರ ಮೇಲೆ ಕೇಸ್ ದಾಖಲು..!

ಮುಂಡಗೋಡ: ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಹಾಗೂ ಹಣ ಪಡೆಯುತ್ತಿದ್ದ ಮುಂಡಗೋಡಿನ ಮತ್ತೊಬ್ಬ ವ್ಯಕ್ತಿ ಸೇರಿ ಇಬ್ಬರ ಮೇಲೆ ಕೇಸು ದಾಖಲಿಸಿದ್ದಾರೆ. ಗಣೇಶಪುರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಗಂಗಾಧರ ನರಸಿಂಗಪ್ಪ ದರಪ್ಪನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ‌. ಅಲ್ಲದೇ ಆರೋಪಿ ನೀಡಿದ ಮಾಹಿತಿಯಂತೆ ಮಟ್ಕಾದ ಹಣ ಪಡೆಯುತ್ತಿದ್ದ ಮುಂಡಗೋಡ ಶಿರಸಿ ರಸ್ತೆಯ ಪ್ರವೀಣ್ ಪಾಟೀಲ್ ಎಂಬುವವನ ಮೇಲೂ ಕೇಸ್ ದಾಖಲಾಗಿದೆ. ಇದ್ರೊಂದಿಗೆ 825 ರೂ. ನಗದು ಹಣ ಸೇರಿದಂತೆ ಮಟ್ಕಾ ಬರೆಯಲು ಬಳಸುತ್ತಿದ್ದ ಸಲಕರಣೆಗಳನ್ನ ವಶಕ್ಕೆ ಪಡೆಯಲಾಗಿದೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.  

ಮಳಗಿಯಲ್ಲಿ ಕಳ್ಳರ ಕೈಚಳಕ, ಮನೆ ಬೀಗ ಮುರಿದು ಚಿನ್ನ, ಹಣ ದೋಚಿದ ಕಳ್ಳರು..! ದೂರು ದಾಖಲು

ಮಳಗಿಯಲ್ಲಿ ಕಳ್ಳರ ಕೈಚಳಕ, ಮನೆ ಬೀಗ ಮುರಿದು ಚಿನ್ನ, ಹಣ ದೋಚಿದ ಕಳ್ಳರು..! ದೂರು ದಾಖಲು

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿರೋ ಘಟನೆ ನಡೆದಿದೆ. ಹೀಗಾಗಿ ಕುಟುಂಬಸ್ಥರು ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ15 ರ ಮಧ್ಯಾಹ್ನ 02-00 ಗಂಟೆಯಿಂದ ದಿನಾಂಕ ಮೇ 23 ರಂದು ಸಾಯಾಂಕಾಲ 07-00 ಗಂಟೆಯ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಖಚಿತವಾಗಿ ಯಾವ ಹೊತ್ತಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲ‌. ಯಾಕಂದ್ರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ. ಏನೇನು ಕಳ್ಳತನ..? ಮಳಗಿಯ ಇಂದಿರಾನಗರದಲ್ಲಿರೋ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗ ಮೀಟಿ ತೆಗೆದು ಮನೆಯ ಒಳಹೊಕ್ಕಿದ್ದಾರೆ ಕಳಗಳರು. ಮನೆಯ ಮಲಗುವ ಕೋಣೆಯ ಟ್ರಜರಿಯಲ್ಲಿದ್ದ ಒಟ್ಟೂ 17 ಗ್ರಾಂ ತೂಕದ 68,000/-ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಹಾಗೂ 3 ಸಾವಿರ ರೂ. ಬೆಲೆಯ ನೊಕಿಯಾ ಮೊಬೈಲ್ ಮತ್ತು ನಗದು 77,000/-ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಮೃತ್ಯುಂಜಯಸ್ವಾಮಿ ಎಂಬುವವರು ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ....

ಯಲ್ಲಾಪುರ SBI ಬ್ಯಾಂಕ್ ಗೆ ಕನ್ನ ಹಾಕಿದ್ದ ಚಾಲಾಕಿ ಕಳ್ಳ ಅರೆಸ್ಟ್, ಪೊಲೀಸ್ರು ಕೇಸ್ ಬೇಧಿಸಿದ್ದೇ ರೋಚಕ..!

ಯಲ್ಲಾಪುರ SBI ಬ್ಯಾಂಕ್ ಗೆ ಕನ್ನ ಹಾಕಿದ್ದ ಚಾಲಾಕಿ ಕಳ್ಳ ಅರೆಸ್ಟ್, ಪೊಲೀಸ್ರು ಕೇಸ್ ಬೇಧಿಸಿದ್ದೇ ರೋಚಕ..!

ಯಲ್ಲಾಪುರ ಪೊಲೀಸರಿಗೆ ಅಕ್ಷರಶಃ ಸವಾಲಾಗಿದ್ದ SBI ಬ್ಯಾಂಕ್ ಕಳ್ಳತನ ಪ್ರಕರಣ ಕೊನೆಗೂ ಬಟಾಬಯಲಾಗಿದೆ. ಯಲ್ಲಾಪುರದ ಹೃದಯಭಾಗದಲ್ಲಿದ್ದ ಬ್ಯಾಂಕ್ ನಲ್ಲಿ ಅನಾಮತ್ತಾಗಿ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಅಂದಹಾಗೆ, ಯಲ್ಲಾಪುರದ ಸಂಭ್ರಮ ಕ್ರಾಸ್ ಹತ್ತಿರದ ಬಹುತೇಕ ಪಟ್ಟಣದ ಹೃದಯಭಾಗದಲ್ಲಿದ್ದ SBI ಬ್ಯಾಂಕ್ ದರೋಡೆ ಯತ್ನ ಕೇಸ್, ಇಡೀ ಯಲ್ಲಾಪುರದ ಮಂದಿಗೆ ಒಂದರ್ಥದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಯಾಕಂದ್ರೆ, ಈ ಬ್ಯಾಂಕ್ ನಲ್ಲಿ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನೂ ಅಳವಡಿಸಲಾಗಿತ್ತು. ಸಿಸಿಟಿವಿ ಇತ್ತು, ಸೈರನ್ ಇತ್ತು, ಒಂದು ಇರುವೆ ಕೂಡ ಒಳ ನುಗ್ಗಿದ್ರೂ ಅದು ಅಷ್ಟು ಸುಲಭದಲ್ಲಿ ಬಚಾವ್ ಆಗುವ ಯಾವ ಸಣ್ಣದೊಂದೂ ಚಾನ್ಸೂ ಇಲ್ಲ ಅನ್ನುವಷ್ಟು ಖಚಿತತೆ ಇತ್ತು. ಇದರ ಮೇಲೆ ಇನ್ನು ಕಳ್ಳಕಾಕರು ಬರೋಕೆ ಹೇಗೆ ಸಾಧ್ಯ..? ಅದ್ರಲ್ಲೂ ಬಹುತೇಕ ಪಟ್ಟಣದ ಹೃದಯ ಭಾಗವಾಗಿದ್ದ ಕಾರಣ ಅದೇಂತದ್ದೇ ಕತ್ತಲ ರಾತ್ರಿ ಇದ್ರೂ ಯಾರ ಕಣ್ಣೂ ತಪ್ಪಿಸೋಕೆ ಸಾಧ್ಯವೇ ಇಲ್ಲ ಅನ್ನುವಷ್ಟು ಗ್ಯಾರಂಟಿ ಇತ್ತು....

ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಮುಂಡಗೋಡ: ಅಪ್ರಾಪ್ತ ಬಾಲಕಿಯೋರ್ವಳಿಗೆ ಪುಸಲಾಯಿಸಿ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ. ಈ ಕುರಿತು ಬಾಲಕಿಯ ತಾಯಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪಿ ಮಂಜುನಾಥ ಫಕೀರಪ್ಪ ಹಂಚಿನಮನಿ ಎಂಬುವವನ ವಿರುದ್ಧ ದೂರು ದಾಖಲಿಸಿದ್ದಾರೆ. ಗಣೇಶ ಚತುರ್ಥಿಯ ಮರು ದಿನ..! ಅಂದಹಾಗೆ, ಕಳೆದ ವರ್ಷ ಗಣೇಶ ಚತುರ್ಥಿಯ ಮರುದಿನ ಮದ್ಯಾಹ್ನದ ಹೊತ್ತಲ್ಲಿ ಆರೋಪಿ ಮಂಜುನಾಥ, ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಏನೂ ಅರಿಯದ ಬಾಲಕಿಯನ್ನು ಬಳಸಿಕೊಂಡಿದ್ದಾನೆ ಅಂತಾ ದೂರಿನಲ್ಲಿ ಆರೋಪಿಸಲಾಗಿದೆ. ಆನಂತರದಲ್ಲಿ ತೋಟದ ಮನೆಯಲ್ಲಿ ನಿರಂತರವಾಗಿ ಬಾಲಕಿಯನ್ನು ಬೇಕಾದಾವಾಗಲೇಲ್ಲ ಬಳಸಿಕೊಂಡು ಗರ್ಭವತಿಯನ್ನಾಗಿ ಮಾಡಿದ್ದಾನೆ ಅಂತಾ ಬಾಲಕಿಯ ತಾಯಿ ದೂರಿದ್ದಾರೆ. ಜೀವ ಬೆದರಿಕೆ..! ಇನ್ನು, ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಮಂಜುನಾಥ, ಈ ವಿಷಯವನ್ನು ಯಾರಿಗಾದ್ರೂ ಬಾಯಿ ಬಿಟ್ರೆ ನಿನ್ನ ಕತೆ ಫಿನಿಷ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ, ಬಾಲಕಿ ಇದುವರೆಗೂ ಯಾರ ಎದುರೂ ಬಾಯಿ ಬಿಟ್ಟಿಲ್ಲ. ಆದ್ರೆ, ತನ್ನ ಮಗಳು ಗರ್ಭವತಿ ಅಂತಾ ತಿಳಿದ ಕೂಡಲೇ...

ಗುಟ್ಕಾ ಕೊಡಿಸಲಿಲ್ಲ ಅಂತಾ ಕೊ‌ಂದೇ ಬಿಟ್ಟ ಗೆಳೆಯ, ಹುಬ್ಬಳ್ಳಿಯಲ್ಲಿ 5 ರೂ. ಗುಟ್ಕಾಗಾಗಿ ಮರ್ಡರ್..!

ಗುಟ್ಕಾ ಕೊಡಿಸಲಿಲ್ಲ ಅಂತಾ ಕೊ‌ಂದೇ ಬಿಟ್ಟ ಗೆಳೆಯ, ಹುಬ್ಬಳ್ಳಿಯಲ್ಲಿ 5 ರೂ. ಗುಟ್ಕಾಗಾಗಿ ಮರ್ಡರ್..!

ಹುಬ್ಬಳ್ಳಿ: ಆನಂದ ನಗರದಲ್ಲಿ ಗುಟ್ಕಾ ಕೊಡಿಸಲಿಲ್ಲ ಅಂತಾ ರೌಡಿಶೀಟರ್ ಒಬ್ಬ ಅಮಾಯಕ ವ್ಯಕ್ತಿಗೇ ಚಾಕು ಇರಿದು ಕೊಲೆ ಮಾಡಿದ್ದಾನೆ. ಆನಂದ ನಗರದ ಮೆಹಬೂಬ್ ಕಳಸ ಹಾಗೂ ಕೊಲೆ ಮಾಡಿ ಪರಾರಿಯಾಗಿರುವ ಗೌಸ್ ಎಂಬಾತ ಪರಸ್ಪರ ಪರಿಚಯಸ್ಥರು, ನಿನ್ನೆ ಕೂಡಾ ಇಬ್ಬರು ಮಂಜುನಾಥ ನಗರದ ಬಳಿ ಇರುವ ಕೊಡೆ ಬಾರ್ ನಲ್ಲಿ ಎಣ್ಣೆ ಹೊಡೆದಿದ್ದಾರೆ. ಬಾರ್ ನಿಂದ ಹೊರಬಂದ ನಂತರ ಗೌಸ್, ಮೆಹಬೂಬ್ ಗೇ ವಿಮಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾನೆ, ಆದ್ರೆ ಮೆಹಬೂಬ್ ವಿಮಲ್ ಕೊಡಿಸಲು ಹಿಂದೇಟು ಹಾಕಿದಾಗ, ಕುಡಿದ ಮತ್ತಿನಲ್ಲಿದ್ದ ಗೌಸ್ ಮೆಹಬೂಬ್ ಗೇ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿಯುತ್ತಿದ್ದ ಹಾಗೇ ಗಂಭೀರವಾಗಿ ಗಾಯಗೊಂಡ ಮೆಹಬೂಬ್ ಕೆಲಹೊತ್ತು ದೂರ ನಡೆದುಕೊಂಡು ಹೋಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಕೂಡಲೇ ಆತನನ್ನು ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ,ಆದ್ರೆ ಅದಾಗಲೇ ಮೆಹಬೂಬ್ ನ ಉಸಿರು ನಿಂತು ಹೋಗಿದೆ. ಹೀಗಾಗಿ, ಸ್ನೇಹಿತನ ಕೊಲೆಯ ನಂತರ ಗೌಸ್ ಈಗ ಪರಾರಿಯಾಗಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸರು ಆತನಿಗಾಗಿ...

ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ಬಾಣಂತಿದೇವಿ ದೇವಸ್ಥಾನದ ಹತ್ತಿರ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಲೂಕಿನ ನಂದಿಪುರ ಗ್ರಾಮದ 26 ವರ್ಷ ವಯಸ್ಸಿನ ಪವಿತ್ರ ಶಿವಾನಂದ ಹರಕುಣಿ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಸಾಲಗಾಂವ ಬಾಣಂತಿದೇವಿ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಲಾಯಿತು. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರ್, ಚಾಲಕ ಪ್ರಕಾಶ್ ಬಾಗೇವಾಡಿ ಸೇರಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಸದ್ಯ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ MLC ಟಿಕೆಟ್ ಅಧಿಕೃತ ಘೋಷಣೆ: ಲಕ್ಷ್ಮಣ ಸವದಿಗೆ ಜಾಕ್ ಪಾಟ್..!

ಬಿಜೆಪಿ MLC ಟಿಕೆಟ್ ಅಧಿಕೃತ ಘೋಷಣೆ: ಲಕ್ಷ್ಮಣ ಸವದಿಗೆ ಜಾಕ್ ಪಾಟ್..!

ಬೆಂಗಳೂರು: ಬಿಜೆಪಿಯ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಜ್ ಆಗಿದೆ‌. ಲಕ್ಷ್ಮಣ ಸವದಿ, ಚೆಲುವಾದಿ ನಾರಾಯಣ ಸ್ವಾಮಿ, ಕೇಶವ್ ಪ್ರಸಾದ್ ಹಾಗೂ ಹೇಮಲತಾ ನಾಯಕ್ ಗೆ ಈ ಬಾರಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಅಚ್ಚರಿಯ ಘೋಷಣೆ ಮಾಡಿದೆ. ಲಿಂಗಾಯತ ಕೋಟಾದಡಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ., ದಲಿತ ಕೋಟಾದಡಿ ಚಲುವಾದಿ ನಾರಾಯಣಸ್ವಾಮಿ, ಮಹಿಳಾ ಹಾಗೂ ನಾಯಕ್ ಕೋಟಾದಡಿ ಹೇಮಲತಾ ನಾಯಕ್ ಗೆ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿ ಕೇಶವ್ ಪ್ರಸಾದ್ ಗೆ ಟಿಕೆಟ್ ನೀಡಲಾಗಿದೆ.

error: Content is protected !!