ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಮುಂಡಗೋಡ: ಅಪ್ರಾಪ್ತ ಬಾಲಕಿಯೋರ್ವಳಿಗೆ ಪುಸಲಾಯಿಸಿ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ. ಈ ಕುರಿತು ಬಾಲಕಿಯ ತಾಯಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪಿ ಮಂಜುನಾಥ ಫಕೀರಪ್ಪ ಹಂಚಿನಮನಿ ಎಂಬುವವನ ವಿರುದ್ಧ ದೂರು ದಾಖಲಿಸಿದ್ದಾರೆ.

ಗಣೇಶ ಚತುರ್ಥಿಯ ಮರು ದಿನ..!
ಅಂದಹಾಗೆ, ಕಳೆದ ವರ್ಷ ಗಣೇಶ ಚತುರ್ಥಿಯ ಮರುದಿನ ಮದ್ಯಾಹ್ನದ ಹೊತ್ತಲ್ಲಿ ಆರೋಪಿ ಮಂಜುನಾಥ, ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಏನೂ ಅರಿಯದ ಬಾಲಕಿಯನ್ನು ಬಳಸಿಕೊಂಡಿದ್ದಾನೆ ಅಂತಾ ದೂರಿನಲ್ಲಿ ಆರೋಪಿಸಲಾಗಿದೆ. ಆನಂತರದಲ್ಲಿ ತೋಟದ ಮನೆಯಲ್ಲಿ ನಿರಂತರವಾಗಿ ಬಾಲಕಿಯನ್ನು ಬೇಕಾದಾವಾಗಲೇಲ್ಲ ಬಳಸಿಕೊಂಡು ಗರ್ಭವತಿಯನ್ನಾಗಿ ಮಾಡಿದ್ದಾನೆ ಅಂತಾ ಬಾಲಕಿಯ ತಾಯಿ ದೂರಿದ್ದಾರೆ.

ಜೀವ ಬೆದರಿಕೆ..!
ಇನ್ನು, ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಮಂಜುನಾಥ, ಈ ವಿಷಯವನ್ನು ಯಾರಿಗಾದ್ರೂ ಬಾಯಿ ಬಿಟ್ರೆ ನಿನ್ನ ಕತೆ ಫಿನಿಷ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ, ಬಾಲಕಿ ಇದುವರೆಗೂ ಯಾರ ಎದುರೂ ಬಾಯಿ ಬಿಟ್ಟಿಲ್ಲ. ಆದ್ರೆ, ತನ್ನ ಮಗಳು ಗರ್ಭವತಿ ಅಂತಾ ತಿಳಿದ ಕೂಡಲೇ ಹೆತ್ತವರು ಏನಿದೇಲ್ಲ, ಹೇಗಾಯ್ತು..? ಅಂತಾ ಬಾಲಕಿಯ‌ನ್ನು ಕೇಳಿದಾಗ ಬಾಲಕಿ ನಡೆದ ಎಲ್ಲಾ ವಿಷಯ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ಹೀಗಾಗಿ, ತಕ್ಷಣವೇ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಾಯಿ ಆರೋಪಿ ಮಂಜುನಾಥನ ವಿರುದ್ಧ ದೂರು ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!