ಹುಬ್ಬಳ್ಳಿ: ಆನಂದ ನಗರದಲ್ಲಿ ಗುಟ್ಕಾ ಕೊಡಿಸಲಿಲ್ಲ ಅಂತಾ ರೌಡಿಶೀಟರ್ ಒಬ್ಬ ಅಮಾಯಕ ವ್ಯಕ್ತಿಗೇ ಚಾಕು ಇರಿದು ಕೊಲೆ ಮಾಡಿದ್ದಾನೆ.
ಆನಂದ ನಗರದ ಮೆಹಬೂಬ್ ಕಳಸ ಹಾಗೂ ಕೊಲೆ ಮಾಡಿ ಪರಾರಿಯಾಗಿರುವ ಗೌಸ್ ಎಂಬಾತ ಪರಸ್ಪರ ಪರಿಚಯಸ್ಥರು, ನಿನ್ನೆ ಕೂಡಾ ಇಬ್ಬರು ಮಂಜುನಾಥ ನಗರದ ಬಳಿ ಇರುವ ಕೊಡೆ ಬಾರ್ ನಲ್ಲಿ ಎಣ್ಣೆ ಹೊಡೆದಿದ್ದಾರೆ.
ಬಾರ್ ನಿಂದ ಹೊರಬಂದ ನಂತರ ಗೌಸ್, ಮೆಹಬೂಬ್ ಗೇ ವಿಮಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾನೆ, ಆದ್ರೆ ಮೆಹಬೂಬ್ ವಿಮಲ್ ಕೊಡಿಸಲು ಹಿಂದೇಟು ಹಾಕಿದಾಗ, ಕುಡಿದ ಮತ್ತಿನಲ್ಲಿದ್ದ ಗೌಸ್ ಮೆಹಬೂಬ್ ಗೇ ಚಾಕುವಿನಿಂದ ಇರಿದಿದ್ದಾನೆ.
ಚಾಕು ಇರಿಯುತ್ತಿದ್ದ ಹಾಗೇ ಗಂಭೀರವಾಗಿ ಗಾಯಗೊಂಡ ಮೆಹಬೂಬ್ ಕೆಲಹೊತ್ತು ದೂರ ನಡೆದುಕೊಂಡು ಹೋಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಕೂಡಲೇ ಆತನನ್ನು ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ,ಆದ್ರೆ ಅದಾಗಲೇ ಮೆಹಬೂಬ್ ನ ಉಸಿರು ನಿಂತು ಹೋಗಿದೆ.
ಹೀಗಾಗಿ, ಸ್ನೇಹಿತನ ಕೊಲೆಯ ನಂತರ ಗೌಸ್ ಈಗ ಪರಾರಿಯಾಗಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸ್ತಿದಾರೆ.