ಕಾತೂರು ಬಳಿ ಶವ ಸಿಕ್ಕ ಕೇಸ್: ಟ್ರಾಕ್ಟರ್ ಮೇಲಿಂದ ಬಿದ್ದು ಸಾವು ಕಂಡನಾ ನಾಗನೂರಿನ ಶಂಭಣ್ಣ..?


ಮುಂಡಗೋಡ ತಾಲೂಕಿನ ನಾಗನೂರಿನಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದೆ. ಕಾತೂರಿನಿಂದ ನಾಗನೂರಿಗೆ ತೆರಳುವ ಮಾರ್ಗದಲ್ಲಿ ಕಾತೂರಿನಿಂದ ಹೆಚ್ಚೂ ಕಡಿಮೆ 200 ಮೀಟರ್ ಅಂತರದಲ್ಲಿ ರಕ್ತಸಿಕ್ತವಾಗಿದ್ದ ಶವ ಸಿಕ್ಕಿದ್ದು ಬಹುತೇಕ ಆ ಭಾಗದಲ್ಲಿ ಭಯದ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದ್ರೀಗ ಅದೊಂದು ಆಕಸ್ಮಿಕ ಅಪಘಾತ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಮರ್ಡರ್ ಅನಕೊಂಡಿದ್ರು..!
ಶವ ಸಿಕ್ಕ ಸ್ಥಿತಿ ನೋಡಿದ್ರೆ, ಇದೊಂದು ಕೊಲೆನಾ ಅನ್ನೊ ಅನುಮಾನಕ್ಕೆ ತಂದು ನಿಲ್ಲಿಸತ್ತು. ಆದ್ರೆ ಮತ್ತೊಂದು ಮಗ್ಗಲಿನಲ್ಲಿ ನೋಡಿದ್ರೆ ಇದೊಂದು ಆಕಸ್ಮಿಕ ಅಪಘಾತದ ಸಾವು ಅನ್ನೊದು ಕಂಡು ಬ‌ಂದಿತ್ತು. ಯಾಕಂದ್ರೆ ಆ ಮನುಷ್ಯನ ಹೆಣ ಉರುಳಿಸುವಂತಹ ದುಶ್ಮನಿಗಳು ಅವನಿಗೆ ಯಾರೂ ಇಲ್ಲವಂತೆ, ಅಷ್ಟಕ್ಕೂ ಆತ ತುಂಬಾ ಸೂಕ್ಷ್ಮ ಹಾಗೂ ಸಂಭಾವಿತ ವ್ಯಕ್ತಿ. ಹೀಗಿದ್ದಾಗ ಯಾರಪ್ಪಾ ಅವನ ದುಷ್ಮನ್ ಆಗೋಕೆ ಸಾಧ್ಯ ಅಂತಿದಾರೆ ಅತನ ಸಂಬಂದಿಕರು.

ಹಾಗಿದ್ರೆ ಆಗಿದ್ದೇನು..?
ನಿನ್ನೆ ನಾಗನೂರಿನಿಂದ ಶಿರಸಿಗೆ ಟ್ರಾಕ್ಟರ್ ಮೂಲಕ ಇಟ್ಟಿಗೆ ತುಂಬಿಕೊಂಡು ಹೋಗಿದ್ದ ಜನರಲ್ಲಿ ಈತನೂ ಒಬ್ಬ. ಆದ್ರೆ, ಹಾಗೆ ಹೋಗಿದ್ದ ಜನರನ್ನ ಟ್ರಾಕ್ಟರ್ ಮಾಲೀಕ ನೀವು ಟ್ರಾಕ್ಟರ್ ನಲ್ಲಿ ಬನ್ನಿ ನಾನು ಬಸ್ಸಿಗೆ ಹೋಗ್ತಿನಿ ಅಂತಾ ಹೇಳಿ ವಾಪಸ್ ಬಂದಿದ್ದ. ಹೀಗಾಗಿ, ಟ್ರಾಕ್ಟರ್ ಚಾಲಕ ಹಾಗೂ ಮೃತ ವ್ಯಕ್ತಿ ಶಂಭು ಹನ್ಮಂತಪ್ಪ ಹಿರೇಹಳ್ಳಿ ಇಬ್ಬರೂ ಸೇರಿ ಟ್ರಾಕ್ಟರ್ ಮೂಲಕ ವಾಪಸ್ ಬಂದಿದ್ದರು ಎನ್ನಲಾಗಿದೆ. ಶಿರಸಿಯಿಂದ ಹಾಗೆ ಬರುವಾಗ ಬಿಸಲಕೊಪ್ಪದಲ್ಲಿರೊ ತನ್ನ ಮಗಳ‌ ಮನೆಗೆ ಹೋಗಿ ತಿ‌ಂಡಿ ತಿಂದು ಬಂದಿದ್ದರಂತೆ‌. ಆ ನಂತರದಲ್ಲಿ ಅದೇನಾಯ್ತೋ ಗೊತ್ತಿಲ್ಲ. ನಿನ್ನೆ ರಾತ್ರಿನೇ ಮನೆಗೆ ಬಂದು ಸೇರಬೇಕಾಗಿದ್ದ ಶಂಭು ಬೆಳ್ಳಂ ಬೆಳಿಗ್ಗೆ ಹೆಣವಾಗಿ ಸಿಕ್ಕಿದ್ದಾನೆ.

ಟ್ರಾಕ್ಟರ್ ನಿಂದ ಬಿದ್ನಾ ಶಂಭಣ್ಣ..?
ಅಷ್ಟಕ್ಕೂ ರಾತ್ರಿ ಬಿಸಲಕೊಪ್ಪದಿಂದ ವಾಪಸ್ ಬರುವಾಗ ಆಕಸ್ಮಿಕವಾಗಿ ಟ್ರಾಕ್ಟರ್ ನಿಂದ ಬಿದ್ದು ಮೃತಪಟ್ಟನಾ ಶಂಭು ಹಿರೇಹಳ್ಳಿ..? ಇಂತಹದ್ದೊಂದು ಅನುಮಾನ ವ್ಯಕ್ತ ಪಡಿಸ್ತಿದಾರೆ ಕುಟುಂಬಸ್ಥರು. ಟ್ರಾಕ್ಟರ್ ಅಡಿ ಬಿದ್ದು ಸಾವು ಕಂಡಿರಬಹುದು ಅನ್ನೋ ಶಂಕೆ ವ್ಯಕ್ತ ಪಡಿಸ್ತಿದಾರೆ. ಆದ್ರೆ, ಅಸಲಿ ಕಾರಣ ಏನು ಅನ್ನೋದು ಪೊಲೀಸರ ತನಿಖೆ ನಂತರವಷ್ಟೇ ಬಯಲಾಗಬೇಕಿದೆ. ಸದ್ಯ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!