ಮಳಗಿಯಲ್ಲಿ ಕಳ್ಳರ ಕೈಚಳಕ, ಮನೆ ಬೀಗ ಮುರಿದು ಚಿನ್ನ, ಹಣ ದೋಚಿದ ಕಳ್ಳರು..! ದೂರು ದಾಖಲು

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿರೋ ಘಟನೆ ನಡೆದಿದೆ. ಹೀಗಾಗಿ ಕುಟುಂಬಸ್ಥರು ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇ15 ರ ಮಧ್ಯಾಹ್ನ 02-00 ಗಂಟೆಯಿಂದ ದಿನಾಂಕ ಮೇ 23 ರಂದು ಸಾಯಾಂಕಾಲ 07-00 ಗಂಟೆಯ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಖಚಿತವಾಗಿ ಯಾವ ಹೊತ್ತಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲ‌. ಯಾಕಂದ್ರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ.

ಏನೇನು ಕಳ್ಳತನ..?
ಮಳಗಿಯ ಇಂದಿರಾನಗರದಲ್ಲಿರೋ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗ ಮೀಟಿ ತೆಗೆದು ಮನೆಯ ಒಳಹೊಕ್ಕಿದ್ದಾರೆ ಕಳಗಳರು. ಮನೆಯ ಮಲಗುವ ಕೋಣೆಯ ಟ್ರಜರಿಯಲ್ಲಿದ್ದ ಒಟ್ಟೂ 17 ಗ್ರಾಂ ತೂಕದ 68,000/-ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಹಾಗೂ 3 ಸಾವಿರ ರೂ. ಬೆಲೆಯ ನೊಕಿಯಾ ಮೊಬೈಲ್ ಮತ್ತು ನಗದು 77,000/-ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ
ಮೃತ್ಯುಂಜಯಸ್ವಾಮಿ ಎಂಬುವವರು ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!