ಬಿಜೆಪಿ MLC ಟಿಕೆಟ್ ಅಧಿಕೃತ ಘೋಷಣೆ: ಲಕ್ಷ್ಮಣ ಸವದಿಗೆ ಜಾಕ್ ಪಾಟ್..!

ಬೆಂಗಳೂರು: ಬಿಜೆಪಿಯ ಪರಿಷತ್ ಅಭ್ಯರ್ಥಿಗಳ ಪಟ್ಟಿ ರಿಲೀಜ್ ಆಗಿದೆ‌. ಲಕ್ಷ್ಮಣ ಸವದಿ, ಚೆಲುವಾದಿ ನಾರಾಯಣ ಸ್ವಾಮಿ, ಕೇಶವ್ ಪ್ರಸಾದ್ ಹಾಗೂ ಹೇಮಲತಾ ನಾಯಕ್ ಗೆ ಈ ಬಾರಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಅಚ್ಚರಿಯ ಘೋಷಣೆ ಮಾಡಿದೆ.

ಲಿಂಗಾಯತ ಕೋಟಾದಡಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ., ದಲಿತ ಕೋಟಾದಡಿ ಚಲುವಾದಿ ನಾರಾಯಣಸ್ವಾಮಿ, ಮಹಿಳಾ ಹಾಗೂ ನಾಯಕ್ ಕೋಟಾದಡಿ ಹೇಮಲತಾ ನಾಯಕ್ ಗೆ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿ ಕೇಶವ್ ಪ್ರಸಾದ್ ಗೆ ಟಿಕೆಟ್ ನೀಡಲಾಗಿದೆ.

error: Content is protected !!