ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ಬಾಣಂತಿದೇವಿ ದೇವಸ್ಥಾನದ ಹತ್ತಿರ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ತಾಲೂಕಿನ ನಂದಿಪುರ ಗ್ರಾಮದ 26 ವರ್ಷ ವಯಸ್ಸಿನ ಪವಿತ್ರ ಶಿವಾನಂದ ಹರಕುಣಿ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಸಾಲಗಾಂವ ಬಾಣಂತಿದೇವಿ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಲಾಯಿತು.

108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರ್, ಚಾಲಕ ಪ್ರಕಾಶ್ ಬಾಗೇವಾಡಿ ಸೇರಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಸದ್ಯ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!