ವಿವೇಕ್ ಹೆಬ್ಬಾರ್ ಬಳಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ ಮುಂಡಗೋಡ ಬಿಜೆಪಿ ಮೈಕೊಡವಿ ಎದ್ದಿದೆ. ಒಂದಿಷ್ಟು ಯುವಕರ ಪಡೆ ಸ್ಥಳೀಯ ಬಿಜೆಪಿಯನ್ನ ಬಲಿಷ್ಟಗೊಳಿಸಲು, ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದೆ. ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ್ ನೇತೃತ್ವದಲ್ಲಿ ಇಡೀ ತಾಲೂಕಿನ ಬೂತ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ನೂತನ ಪದಾಧಿಕಾರಿಗಳ ಆಯ್ಕೆ..! ಅಂದಹಾಗೆ, ಬಿಜೆಪಿ ತೊರೆದು ಕೈ ಪಡೆಗೆ ಜಿಗಿದ ಹಲವು ಬಿಜೆಪಿ ಪದಾಧಿಕಾರಿಗಳಿಂದ ತೆರವಾದ ಸ್ಥಾನಗಳಿಗೆ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಮುಂಡಗೋಡಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರುಗಳು ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇವ್ರು ಬಿಜೆಪಿ ಹೊಸ ಪದಾಧಿಕಾರಿಗಳು..! ಮುಂಡಗೋಡ ಬಿಜೆಪಿ ಮಂಡಲದ ಉಪಾಧ್ಯಕ್ಷರನ್ನಾಗಿ, ಮಂಜುನಾಥ ಹರ್ಮಲ್ಕರ್, ರವಿ ಕಲಘಟಗಿ, ಸುಭಾಷ ಲಮಾಣಿ ನೇಮಕಗೊಂಡಿದ್ದಾರೆ. ಇನ್ನು ಕಾರ್ಯದರ್ಶಿಯಾಗಿ ಶ್ರೀಮತಿ ತೃಪ್ತಿ ಭಜಂತ್ರಿ ಯವರನ್ನು ಆಯ್ಕೆ ಮಾಡಲಾಗಿದೆ. ಮಹಾಶಕ್ತಿಕೇಂದ್ರ ಅಧ್ಯಕ್ಷರುಗಳು..! ಮುಂಡಗೋಡ ತಾಲೂಕಿನ ಬಿಜೆಪಿ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ. ಅದ್ರಂತೆ, ಚಿಗಳ್ಳಿ ಮಹಾಶಕ್ತಿ ಕೇಂದ್ರಕ್ಕೆ, ಸಂತೋಷ್ ಅಂತೋಜಿ,...
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ ನಿಧನ..!
ಮುಂಡಗೋಡ: ಪಟ್ಟಣದಲ್ಲಿ ಹೊಟೇಲ್ ನಡೆಸುತ್ತಿದ್ದ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ (68) ದೈವಾಧೀನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗಿನ ಜಾವ ಕೊನೆ ಉಸಿರೆಳೆದಿದ್ದಾರೆ. ಮೃತರು ಪತ್ನಿ, 7 ಜನ ಗಂಡು ಮಕ್ಕಳು, ಅಣ್ಣ ತಮ್ಮಂದಿರು, ಸಹೋದರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ..! ಸಲೈನ್ ಹಚ್ಚಿಕೊಂಡೇ ಪ್ರಚಾರಕ್ಕಿಳಿದಿರೋ ಕೈ ಅಭ್ಯರ್ಥಿ..!!
ಕುಮಟಾ: ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಪ್ರಚಾರದಲ್ಲಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಅನಾರೋಗ್ಯದ ನಡುವೆಯೂ ಪ್ರಚಾರ ಮುಂದುವರಿಸಿ ಕಾರ್ಯಕರ್ತರ ಹುರುಪು ಹೆಚ್ಚಿಸಿದ್ದಾರೆ. ಕಾಂಗ್ರೆಸ್ನಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದ ಡಾ.ಅಂಜಲಿ ನಿಂಬಾಳ್ಕರ್, ಈಗಾಗಲೇ ಬ್ಲಾಕ್ ಮಟ್ಟದ ಸಭೆಗಳನ್ನ ಪೂರ್ಣಗೊಳಿಸಿ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ. ಸತತವಾಗಿ ವಿರಾಮವಿಲ್ಲದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ವೈದ್ಯಕೀಯ ತಪಾಸಣೆಗೆ ಒಳಗಾಗಿ ವೈದ್ಯಕೀಯ ಉಪಚಾರ ಪಡೆದಿರುವ ಅವರು, ವಾಸ್ತವ್ಯ ಹೂಡುವ ಸ್ಥಳದಲ್ಲೇ ಸಲೈನ್ (ಡ್ರಿಪ್ಸ್) ಹಚ್ಚಿಕೊಂಡು ಪ್ರಚಾರ ಕಾರ್ಯಗಳನ್ನ ಮುಂದುವರಿಸಿದ್ದಾರೆ. ಕೈನಲ್ಲಿ ಸಲೈನ್ನ ಕ್ಯಾನುಲಾ (ಸೂಜಿ) ಇಟ್ಟುಕೊಂಡೇ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದಿರುವ ಡಾ.ಅಂಜಲಿಯವರ ಬದ್ಧತೆ ಕಾರ್ಯಕರ್ತರಲ್ಲೂ ಹುರುಪು ತಂದಿದೆ. ಕೆಲವೆಡೆ ಕಾರ್ಯಕರ್ತರೇ ‘ತಾವು ವಿಶ್ರಾಂತಿ ಪಡೆಯಿರಿ. ತಮಗಾಗಿ ನಾವು ಪ್ರಚಾರ ನಡೆಸುತ್ತೇವೆ’ ಎನ್ನುತ್ತಿದ್ದಾರೆ. ‘ನನ್ನ ಜನರಿಗಾಗಿ ಈ ಚುನಾವಣೆ ನಡೆಯುತ್ತಿದೆ. ನನ್ನೆಲ್ಲ ಕಾರ್ಯಕರ್ತರು, ನಾಯಕರು ನಮಗಾಗಿ ದುಡಿಯುತ್ತಿರುವಾಗ...
ಪಾಳಾ ಸಮೀಪದ ಕಲಕೊಪ್ಪದಲ್ಲಿ ಭಾರೀ ಅನಾಹುತ, ಸಿಡಿಲು ಬಡಿದು 5 ಹಸುಗಳು ದಾರುಣ ಸಾವು..!
ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಕಲಕೊಪ್ಪದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಮೊದಲ ದಿನದ ಮಳೆಯಲ್ಲೇ ಐದು ಹಸುಗಳು ದಾರುಣ ಸಾವು ಕಂಡಿವೆ. ಸಿಡಿಲು ಬಡಿದು ಗದ್ದೆಯಲ್ಲಿದ್ದ 5 ಹಸುಗಳು ಮೃತಪಟ್ಟಿವೆ. ಪಾಳಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಕೊಪ್ಪ ಗ್ರಾಮದ ಪಕ್ಕೀರ ಗೌಡ ಕಡಬಗೇರಿ ಎಂಬುವವರ ಐದು ಹಸುಗಳು ಗದ್ದೆಯಲ್ಲಿ ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿವೆ. ಇಂದು ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಲ್ಲಿ ಸಿಡಿಲ ಅರ್ಭಟದಿಂದ ಅನಾಹುತ ಸಂಭವಿಸಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ “ಕೈ”ಪಡೆಯಲ್ಲಿ ಬದಲಾವಣೆ ಬಿರುಗಾಳಿ, ಹೆಬ್ಬಾರ್ “ಬೆಂ”ಬಲದ ಅಲೆಯಲ್ಲಿ ಕೊಚ್ಚಿ ಹೋಗುವವರೇಷ್ಟು..?
ಮುಂಡಗೋಡ: ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಪಡೆ ಸದ್ಯ ಬಿಜೆಪಿಯಿಂದ ಕಾಂಗ್ರೆಸ್ ಕಡೆ ಜಂಪ್ ಮಾಡಿದೆ. ಹೀಗಾಗಿ, ವಿಧಾನಸಭೆ ಚುನಾವಣೆ ಬಳಿಕ ಬಹುತೇಕ ಕೊಸರಾಟದಲ್ಲೇ ತೊಡಗಿದ್ದ ಮುಂಡಗೋಡ ಕಾಂಗ್ರೆಸ್ ಗೆ ಹೆಬ್ಬಾರ್ ಪಡೆಯ ಆಗಮನ ಆನೆ ಬಲ ತಂದಿದ್ದು, ಒಳಗೊಳಗಿನ ಅಸಮಾಧಾನ, ಕಚ್ಚಾಟಗಳಿಗೆ “ಪವರ್ ಬ್ರೇಕ್” ಬೀಳೋ ಸಾಧ್ಯತೆ ಇದೆ. ಹೀಗಾಗಿ, ಸೋತ ಮನೆಯಲ್ಲಿ ನಾ ಹೆಚ್ಚು ನೀ ಹೆಚ್ಚು ಅಂತಾ ಕತ್ತಿ ಮಸೆಯುತ್ತಿದ್ದ “ಐರನ್ನು” ಮುಖಂಡರುಗಳಿಗೆ ಈಗ ತಮ್ಮ ಸ್ಥಾನಮಾನಗಳದ್ದೇ ಚಿಂತೆ ಹೆಚ್ಚಾಗಿದೆ. ಅವ್ರ ಕತೆಯೇನು..? ಇನ್ನು, ಪಕ್ಷದ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಕೆಲವರು, ಸದ್ಯ ಅದೇಲ್ಲೇಲ್ಲೋ ಚೇಳು ಕಡಿದವರಂತೆ ಓಡಾಡುತ್ತಿದ್ದಾರಂತೆ. ತಮ್ಮ ಸ್ಥಾನಗಳಿಗೆ ಬರಬಹುದಾದ ಸಂಚಕಾರ ತಪ್ಪಿಸಿಕೊಳ್ಳಲು ಯಲ್ಲಾಪುರದ ಕಡೆ ಮುಖ ಮಾಡಿ ಕುಳಿತಿದ್ದಾರಂತೆ. ಯಾಕಂದ್ರೆ, ಕೆಲವರ ಬಗ್ಗೆ ಈಗಾಗಲೇ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ಇದ್ದರೂ, ಎಲೆಕ್ಷನ್ ಮುಗಿಯೋವರೆಗೂ ಹೇಗಾದ್ರೂ ಸಹಿಸಿಕೊಳ್ಳಿ ಅಂತಾ ಜಿಲ್ಲಾ ಮುಖಂಡರು ತಾಮಣಿ ಮಾಡಿದ್ದರು. ಆದ್ರೆ, ಇವಾಗ ಹೆಬ್ಬಾರ್ ಬಳಗದ...
ಕೊಪ್ಪ ಕೆರೆಯ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಫಘಾತ, ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ ತಾಲೂಕಿನ ಕೊಪ್ಪದ ಕೆರೆ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಪಘಾತವಾಗಿದೆ. ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದೆ. ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಅಪಘಾತವಾಗಿದೆ. ಕೊಪ್ಪ ಇಂದಿರಾನಗರದ ಲಕ್ಷ್ಮಣ ರಾಮಣ್ಣ ಬೋವಿವಡ್ಡರ (36), ಬಸವರಾಜ್ ಹನ್ಮಂತಪ್ಪ ಕುಂಕೂರ್ (36), ಮುಂಡಗೋಡಿನ ಸಾದಿಕ್ ಜಲಾಲ್ ಸಾಬ್ ಹುಬ್ಬಳ್ಳಿ(36) ಗಂಭೀರ ಗಾಯಗೊಂಡಿದ್ದಾರೆ. ಅಪಘಾತವಾದ ತಕ್ಷಣವೇ ಗ್ರಾಮಸ್ಥರು ಗಾಯಗೊಂಡವರನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಬ್ಬಾರ್ ಬೆಂಬಲಿಗರು ಬಿಜೆಪಿ ತೊರೆಯುವ ಮುಹೂರ್ತ ಫಿಕ್ಸ್..! ನಾಳೆ ಗುರುವಾರ ಮದ್ಯಾನ ಕೈ ಸೇರ್ತಾರಂತೆ ಸಾವಿರಾರು ಕಾರ್ಯಕರ್ತರು..!!
ಮುಂಡಗೋಡ: ಕೊನೆಗೂ ಯಲ್ಲಾಪುರ ಮುಂಡಗೋಡ ಕ್ಷೇತ್ರದ ಹೆಬ್ಬಾರ್ ಬಳಗ ಕೈ ಪಡೆಗೆ ಸೇರಲು ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಗುರುವಾರ ಎಪ್ರಿಲ್ 11 ರಂದು, ಮದ್ಯಾನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರಂತೆ ಸಾವಿರಾರು ಬೆಂಬಲಿಗರು. ಆದ್ರೆ, ಸದ್ಯಕ್ಕೆ ಶಿವರಾಮ್ ಹೆಬ್ಬಾರ್ ಸುಪುತ್ರ ವಿವೇಕ್ ಹೆಬ್ಬಾರ್ ಕೈಗೆ ಸೇರ್ಪಡೆಯಾಗಲ್ಲವಂತೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ರಾಜ್ಯ ನಾಯಕರ ಸಮ್ಮುಖದಲ್ಲಿ ವಿವೇಕ್ ಸೇರ್ಪಡೆ ಆಗ್ತಾರಂತೆ. ಪಟ್ಟಣ ಪಂಚಾಯತಿ 6 ಸದಸ್ಯರು “ಕೈ”ಗೆ..!? ಅಂದಹಾಗೆ, ನಾಳೆ ಗುರುವಾರ ಮುಂಡಗೋಡಿನಲ್ಲಿ ನಡೆಯುವ “ಕೈ” ಸೇರ್ಪಡೆ ಕಾರ್ಯಕ್ರಮದಲ್ಲಿ ಮುಂಡಗೋಡ ಪಟ್ಟಣ ಪಂಚಾಯತಿಯ ಬರೋಬ್ಬರಿ ಆರು ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಅಸಲು, ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಈಗಾಗಲೇ 10 ಬಿಜೆಪಿ ಸದಸ್ಯರಿದ್ದು, ಅದ್ರಲ್ಲಿ 6 ಜನ ಸದಸ್ಯರು ಹೆಬ್ಬಾರ್ ಹಿಂಬಾಲಿಸೋದು ಫಿಕ್ಸ್ ಆಗಿದೆ ಎನ್ನಲಾಗಿದೆ. ಇನ್ನುಳಿದ ನಾಲ್ವರು ಸದಸ್ಯರು ಪಕ್ಷದಲ್ಲೇ ಉಳಿತಾರೋ ಅಥವಾ ಅವ್ರೂ ಕೂಡ ಕೈ ಸೇರ್ತಾರೊ ಸ್ಪಷ್ಟನೆ ಇಲ್ಲ. ಗ್ರಾಪಂ ಮಟ್ಟದಲ್ಲಿ..!...
ನಂದಿಕಟ್ಟಾದಲ್ಲಿ ನೀರು ಅರಸಿ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳ ದಾಳಿ, ರಕ್ಷಿಸಿದ ಗ್ರಾಮಸ್ಥರು..!
ಮುಂಡಗೋಡ: ತೀವ್ರ ಬರದ ಎಫೇಕ್ಟ್ ಕಾಡು ಪ್ರಾಣಿಗಳಿಗೂ ತಟ್ಟಿದೆ. ಜಿಂಕೆಯೊಂದು ಕುಡಿಯುವ ನೀರು ಅರಸಿ ಕಾಡಿನಿಂದ ನಾಡಿಗೆ ಬಂದು ನಾಯಿಗಳ ದಾಳಿಗೆ ಒಳಗಾಗಿದೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಜಿಂಕೆ ನಾಯಿಗಳ ದಾಳಿಯಿಂದ ಬಚಾವಾಗಿದ್ದು ರಕ್ಷಣೆಯಾಗಿದೆ. ಅಂದಹಾಗೆ, ನಂದಿಕಟ್ಟಾ ಗ್ರಾಮದ ಅರಣ್ಯದಂಚಿನಿಂದ ಜಿಂಕೆ, ಕುಡಿಯುವ ನೀರು ಅರಸಿಕೊಂಡು ಗ್ರಾಮದ ಹೊರವಲಯಕ್ಕೆ ಬಂದಿತ್ತು. ಈ ವೇಳೆ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಿದ್ದವು. ಹೀಗಾಗಿ, ತೀವ್ರವಾಗಿ ಗಾಬರಿಗೊಂಡಿದ್ದ ಜಿಂಕೆಗೆ ನಾಯಿಗಳಿಂದ ರಕ್ಷಣೆ ಮಾಡಿದ ಯುವಕರು, ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಗೆ ಸೂಕ್ತ ಚಿಕಿತ್ಸೆಯ ನಂತರ ಕಾಡಿಗೆ ಮರಳಿಸಿದ್ದಾರೆ.
ಮುಂಡಗೋಡಿನಲ್ಲಿ ನೆಲಕ್ಕುರುಳಿದ ಬೃಹತ್ ಆಲದ ಮರ, ಅಪಾರ ಹಾನಿ..!
ಮುಂಡಗೋಡ ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂದೆ ಬೃಹತ್ ಆಲದ ಮರ ಏಕಾಏಕಿ ನೆಲಕ್ಕುರುಳಿದೆ. ಪರಿಣಾಮ ಮರದ ಕೆಳಗಡೆ ನಿರ್ಮಿಸಿಕೊಂಡಿದ್ದ ಗ್ಯಾರೇಜ್ ಹಾಗೂ ವೆಲ್ಡಿಂಗ್ ವರ್ಕ್ ಶಾಪ್ ಗೆ ಹಾನಿಯಾಗಿದೆ. ನಾಲ್ಕೈದು ಬೈಕ್ ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂದಹಾಗೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದುಗಡೆ ಇರೋ ಪುರಾತನ ಆಲದ ಮರ ಮೂರು ಭಾಗಗಳಾಗಿ ನೆಲಕ್ಕುರಿಳಿದ್ದು. ಪ್ರಮೋದ್ ಎಂಬುವವರಿಗೆ ಸೇರಿದ ಗ್ಯಾರೇಜು ಸಂಪೂರ್ಣ ಜಖಂ ಗೊಂಡಿದೆ. ಇದ್ರಿಂದ ಗ್ಯಾರೇಜಿನಲ್ಲಿ ರಿಪೇರಿಗೆಂದು ಬಂದಿದ್ದ ಬೈಕ್ ಗಳು ಜಖಂ ಆಗಿವೆ. ಏಯರ್ ಕಾಂಪ್ರೆಶರ್ ಗೆ ಹಾನಿಯಾಗಿದೆ. ಅಲ್ದೆ ಗ್ಯಾರೇಜ್ ಎದುರಿಗೆ ನಿಲ್ಲಿಸಿದ್ದ ಹೊಸ ಬೈಕ್ ಜಖಂಗೊಂಡಿದೆ.
ಕೇಸ್ ದಾಖಲಾದ ಮೇಲೆ ‘ನಮ್ಮವರಲ್ಲ’ವೆಂದ ಬಿಜೆಪಿ, ಬಿಜೆಪಿ ವಿರುದ್ಧ ಸ್ವಪಕ್ಷಿಗರಿಂದಲೇ ಅಸಮಾಧಾನ
ಕುಮಟಾ: ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ನಿಂದನಾತ್ಮಕವಾಗಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ‘ಅವರು ನಮ್ಮ ಪಕ್ಷದವರಲ್ಲ’ ಎಂದಿದ್ದ ಬಿಜೆಪಿ ವಿರುದ್ಧ ಇದೀಗ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತ ಎನ್ನಲಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎನ್ನುವವರು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಮರಾಠ ಜಾತಿಗೆ ನಿಂದಿಸಿ ಫೇಸ್ಬುಕ್ ನಲ್ಲಿ ಕಾಂಗ್ರೆಸ್ಸಿಗರ ಪೋಸ್ಟ್ ವೊಂದಕ್ಕೆ ಕಮೆಂಟ್ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಅವರು ಪೊಲೀಸ್ ದೂರು ದಾಖಲಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಇದಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬಿಜೆಪಿ ವಕ್ತಾರರು, ಕಮೆಂಟ್ ಹಾಕಿದ್ದ ವ್ಯಕ್ತಿ ತಮ್ಮ ಪಕ್ಷದವನೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಗರಲ್ಲೇ ಇದೀಗ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ದೂರು ದಾಖಲಾದ ಕಾರ್ಯಕರ್ತನಿಗೆ ಧೈರ್ಯ ತುಂಬುವುದನ್ನ ಬಿಟ್ಟು ‘ನಮ್ಮವನಲ್ಲ’ ಎಂದು ಜಾರಿಕೊಂಡ ಬಿಜೆಪಿ ನಾಯಕರ ವರ್ತನೆಯ...