ಮುಂಡಗೋಡ ತಾಲೂಕಿನ ಕೊಪ್ಪದ ಕೆರೆ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಪಘಾತವಾಗಿದೆ. ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದೆ. ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಅಪಘಾತವಾಗಿದೆ.
ಕೊಪ್ಪ ಇಂದಿರಾನಗರದ ಲಕ್ಷ್ಮಣ ರಾಮಣ್ಣ ಬೋವಿವಡ್ಡರ (36), ಬಸವರಾಜ್ ಹನ್ಮಂತಪ್ಪ ಕುಂಕೂರ್ (36), ಮುಂಡಗೋಡಿನ ಸಾದಿಕ್ ಜಲಾಲ್ ಸಾಬ್ ಹುಬ್ಬಳ್ಳಿ(36) ಗಂಭೀರ ಗಾಯಗೊಂಡಿದ್ದಾರೆ.
ಅಪಘಾತವಾದ ತಕ್ಷಣವೇ ಗ್ರಾಮಸ್ಥರು ಗಾಯಗೊಂಡವರನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.