ಮುಂಡಗೋಡ: ತೀವ್ರ ಬರದ ಎಫೇಕ್ಟ್ ಕಾಡು ಪ್ರಾಣಿಗಳಿಗೂ ತಟ್ಟಿದೆ. ಜಿಂಕೆಯೊಂದು ಕುಡಿಯುವ ನೀರು ಅರಸಿ ಕಾಡಿನಿಂದ ನಾಡಿಗೆ ಬಂದು ನಾಯಿಗಳ ದಾಳಿಗೆ ಒಳಗಾಗಿದೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಜಿಂಕೆ ನಾಯಿಗಳ ದಾಳಿಯಿಂದ ಬಚಾವಾಗಿದ್ದು ರಕ್ಷಣೆಯಾಗಿದೆ.
ಅಂದಹಾಗೆ, ನಂದಿಕಟ್ಟಾ ಗ್ರಾಮದ ಅರಣ್ಯದಂಚಿನಿಂದ ಜಿಂಕೆ, ಕುಡಿಯುವ ನೀರು ಅರಸಿಕೊಂಡು ಗ್ರಾಮದ ಹೊರವಲಯಕ್ಕೆ ಬಂದಿತ್ತು. ಈ ವೇಳೆ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಿದ್ದವು.
ಹೀಗಾಗಿ, ತೀವ್ರವಾಗಿ ಗಾಬರಿಗೊಂಡಿದ್ದ ಜಿಂಕೆಗೆ ನಾಯಿಗಳಿಂದ ರಕ್ಷಣೆ ಮಾಡಿದ ಯುವಕರು, ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಗೆ ಸೂಕ್ತ ಚಿಕಿತ್ಸೆಯ ನಂತರ ಕಾಡಿಗೆ ಮರಳಿಸಿದ್ದಾರೆ.