ಮುಂಡಗೋಡ ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂದೆ ಬೃಹತ್ ಆಲದ ಮರ ಏಕಾಏಕಿ ನೆಲಕ್ಕುರುಳಿದೆ. ಪರಿಣಾಮ ಮರದ ಕೆಳಗಡೆ ನಿರ್ಮಿಸಿಕೊಂಡಿದ್ದ ಗ್ಯಾರೇಜ್ ಹಾಗೂ ವೆಲ್ಡಿಂಗ್ ವರ್ಕ್ ಶಾಪ್ ಗೆ ಹಾನಿಯಾಗಿದೆ‌. ನಾಲ್ಕೈದು ಬೈಕ್ ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಅಂದಹಾಗೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದುಗಡೆ ಇರೋ ಪುರಾತನ ಆಲದ ಮರ ಮೂರು ಭಾಗಗಳಾಗಿ ನೆಲಕ್ಕುರಿಳಿದ್ದು. ಪ್ರಮೋದ್ ಎಂಬುವವರಿಗೆ ಸೇರಿದ ಗ್ಯಾರೇಜು ಸಂಪೂರ್ಣ ಜಖಂ ಗೊಂಡಿದೆ. ಇದ್ರಿಂದ ಗ್ಯಾರೇಜಿನಲ್ಲಿ ರಿಪೇರಿಗೆಂದು ಬಂದಿದ್ದ ಬೈಕ್ ಗಳು ಜಖಂ ಆಗಿವೆ. ಏಯರ್ ಕಾಂಪ್ರೆಶರ್ ಗೆ ಹಾನಿಯಾಗಿದೆ. ಅಲ್ದೆ ಗ್ಯಾರೇಜ್ ಎದುರಿಗೆ ನಿಲ್ಲಿಸಿದ್ದ ಹೊಸ ಬೈಕ್ ಜಖಂಗೊಂಡಿದೆ.

error: Content is protected !!