ಮುಂಡಗೋಡ: ಕೊನೆಗೂ ಯಲ್ಲಾಪುರ ಮುಂಡಗೋಡ ಕ್ಷೇತ್ರದ ಹೆಬ್ಬಾರ್ ಬಳಗ ಕೈ ಪಡೆಗೆ ಸೇರಲು ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಗುರುವಾರ ಎಪ್ರಿಲ್ 11 ರಂದು, ಮದ್ಯಾನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರಂತೆ ಸಾವಿರಾರು ಬೆಂಬಲಿಗರು. ಆದ್ರೆ, ಸದ್ಯಕ್ಕೆ ಶಿವರಾಮ್ ಹೆಬ್ಬಾರ್ ಸುಪುತ್ರ ವಿವೇಕ್ ಹೆಬ್ಬಾರ್ ಕೈಗೆ ಸೇರ್ಪಡೆಯಾಗಲ್ಲವಂತೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ರಾಜ್ಯ ನಾಯಕರ ಸಮ್ಮುಖದಲ್ಲಿ ವಿವೇಕ್ ಸೇರ್ಪಡೆ ಆಗ್ತಾರಂತೆ.

ಪಟ್ಟಣ ಪಂಚಾಯತಿ 6 ಸದಸ್ಯರು “ಕೈ”ಗೆ..!?
ಅಂದಹಾಗೆ, ನಾಳೆ ಗುರುವಾರ ಮುಂಡಗೋಡಿನಲ್ಲಿ ನಡೆಯುವ “ಕೈ” ಸೇರ್ಪಡೆ ಕಾರ್ಯಕ್ರಮದಲ್ಲಿ ಮುಂಡಗೋಡ ಪಟ್ಟಣ ಪಂಚಾಯತಿಯ ಬರೋಬ್ಬರಿ ಆರು ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಅಸಲು, ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಈಗಾಗಲೇ 10 ಬಿಜೆಪಿ ಸದಸ್ಯರಿದ್ದು, ಅದ್ರಲ್ಲಿ 6 ಜನ ಸದಸ್ಯರು ಹೆಬ್ಬಾರ್ ಹಿಂಬಾಲಿಸೋದು ಫಿಕ್ಸ್ ಆಗಿದೆ ಎನ್ನಲಾಗಿದೆ. ಇನ್ನುಳಿದ ನಾಲ್ವರು ಸದಸ್ಯರು ಪಕ್ಷದಲ್ಲೇ ಉಳಿತಾರೋ ಅಥವಾ ಅವ್ರೂ ಕೂಡ ಕೈ ಸೇರ್ತಾರೊ ಸ್ಪಷ್ಟನೆ ಇಲ್ಲ.

ಗ್ರಾಪಂ ಮಟ್ಟದಲ್ಲಿ..!
ಇನ್ನು, ನಾಳಿನ ಕಮಲ ಪಾಳಯದ ಕೈ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಂಡಗೋಡ ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಿಂದ ನೂರಾರು ಕಾರ್ಯಕರ್ತರು ಕೈ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಖಚಿತವಾಗಿ ಎಷ್ಟು ಜನ ಸೇರ್ಪಡೆ ಆಗ್ತಿದಾರೆ ಅನ್ನೊ ಮಾಹಿತಿ ಲಭ್ಯವಾಗಿಲ್ಲ.

ಲೋಯೊಲಾ ಸಭಾಭವನದಲ್ಲಿ..!
ಅಂದಹಾಗೆ, ನಾಳೆ ಮುಂಡಗೋಡಿನ ಲೋಯೊಲಾ ಸಭಾಭವನದಲ್ಲಿ ನಡೆಯುವ ಪಕ್ಷ ಸೇರ್ಪಡೆ ಕಾರ್ಯಕ್ರಮದ ತಯಾರಿ ಶುರುವಾಗಿದೆ. ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಐವಾನ್ ಡಿಸೋಜ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳು ವೈದ್ಯ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಅನ್ನೋ ಮಾಹಿತಿ ಸಿಕ್ಕಿದೆ.

error: Content is protected !!