ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ ನಿಧನ..!

ಮುಂಡಗೋಡ: ಪಟ್ಟಣದಲ್ಲಿ ಹೊಟೇಲ್ ನಡೆಸುತ್ತಿದ್ದ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ (68) ದೈವಾಧೀನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗಿನ ಜಾವ ಕೊನೆ ಉಸಿರೆಳೆದಿದ್ದಾರೆ.

ಮೃತರು ಪತ್ನಿ, 7 ಜನ ಗಂಡು ಮಕ್ಕಳು, ಅಣ್ಣ ತಮ್ಮಂದಿರು, ಸಹೋದರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

error: Content is protected !!