ಮುಂಡಗೋಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ಐಟಿ ವಿಭಾಗದಿಂದ ಅವಮಾನ ಆಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮುಂಡಗೋಡಿನಲ್ಲಿಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಬಿಜೆಪಿ ವಿರುದ್ಧ ಗುಡುಗಿದ್ರು.10 ತಲೆಗಳಿರುವ ರಾಹುಲ್ ಗಾಂಧಿ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದೆ. ಈ ಪೋಸ್ಟ್ ಅನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ, ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿಯವರನ್ನು ಅವಹೇಳನ ಮಾಡಿದ್ದಕ್ಕಾಗಿ ಅವ್ರು ಆಕ್ರೋಶ ವ್ಯಕ್ತ ಪಡಿಸಿದ್ರು. “ಇಂಡಿಯಾ” ಒಕ್ಕೂಟ ರಚನೆಯಾದಾಗಿನಿಂದ ಬಿಜೆಪಿಯವರು ಭಯಭೀತರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ರಾವಣ ಎಂದು ಕರೆಯುವುದು ಅವರ ಹತಾಶೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಏನೆಂಬುದು ದೇಶದ ಜನರಿಗೆ ಗೊತ್ತಿದೆ, ಜನರ ನೋವು ಅವರಿಗೆ ಅರ್ಥವಾಗಿದೆ. ಅವರು ಮಣಿಪುರದ ಜನರೊಂದಿಗೆ, ತರಕಾರಿ ಮಾರಾಟಗಾರರು...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ರಾಹುಲ್ ಗಾಂಧಿಗೆ ಬಿಜೆಪಿಯಿಂದ ಅವಮಾನ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ನಿಂದ ಮುಂಡಗೋಡಿನಲ್ಲಿ ಪ್ರತಿಭಟನೆ, ಆಕ್ರೋಶ..!
ದಲಿತ ವ್ಯಕ್ತಿಯ ಹತ್ಯೆ ಹಿನ್ನೆಲೆ, ನ್ಯಾಸರ್ಗಿಗೆ ಡಿಸಿ ಗಂಗೂಬಾಯಿ ಮಾನಕರ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ, ಪರಿಹಾರದ ಚೆಕ್ ಹಸ್ತಾಂತರ..!
ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ನಡೆದ ದಲಿತ ವ್ಯಕ್ತಿಯ ಹತ್ಯೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಕರಣ ಸಂಬಂಧ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮೃತನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಅಲ್ದೆ, ಪರಿಹಾರದ ಚೆಕ್ ವಿತರಿಸಿದ್ರು. ಅಮಾನುಷ ಘಟನೆ..! ಕಳೆದ ಸೆ. 17 ರಂದು ನಡೆದಿದ್ದ ಜಗಳದಲ್ಲಿ ನ್ಯಾಸರ್ಗಿಯ ದಲಿತ ವ್ಯಕ್ತಿ ಮಂಜುನಾಥ್ ಬೋವಿ ವಡ್ಡರ ಮೇಲೆ ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ಕುರುಬರ್ ಮಾರಣಾಂತಿಕ ಹಲ್ಲೆ ಮಾಡಿದ್ದ, ಹೀಗಾಗಿ, ತೀವ್ರ ಗಾಯಗೊಂಡಿದ್ದ ಮಂಜುನಾಥನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ 13 ದಿನಗಳ ನಂತ್ರ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮಂಜುನಾಥ ಸಾವನ್ನಪ್ಪಿದ್ದ. ಎಸ್ಪಿ, ಡಿಸಿ ಭೇಟಿ..! ಯಾವಾಗ, ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ದಲಿತ ವ್ಯಕ್ತಿ ಸಾವನ್ನಪ್ಪಿದ ವಿಷಯ ತಿಳಿದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನ್ಯಾಸರ್ಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದ್ರಂತೆ ಇವತ್ತು ಡಿಸಿ ಗಂಗೂಬಾಯಿ...
ಟಿಬೇಟಿಯನ್ ಕ್ಯಾಂಪಿನಲ್ಲಿ ನಡೆದಿದ್ದ ದರೋಡೆ ಕೇಸಿನಲ್ಲಿ ಕೋರ್ಟ್ ತೀರ್ಪು, ನಾಲ್ವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ..!
ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ 1 ರ ಟಿಬೇಟಿಗರ ಮನೆಯೊಂದರಲ್ಲಿ 2019 ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮುಂಡಗೋಡಿನ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೋಳಂಕಿ ಮತ್ತು ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ ಎಂಬುವವರಿಗೆ ಶಿಕ್ಷೆಯಾಗಿದೆ. 2019 ರ ಜನವರಿಯಲ್ಲಿ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರಲ್ಲಿ ಜಾಂಜ್ಚುಪ್ ರಾಚನ್ ತೇಂಜಿಂಗ್ ಎಂಬುವವರ ಮನೆಗೆ ರಾತ್ರಿ ನುಗ್ಗಿದ ನಾಲ್ವರು ಮನೆಯ ಯಜಮಾನ ಹಾಗೂ ಮಹಿಳೆಯ ಕೈ, ಬಾಯಿಗಳನ್ನು ಕಟ್ಟಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಜಾಂಜ್ಚುಪ್ ರಾಚನ್ ತೇಂಜಿಂಗ್ ಅವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ 6 ಲಕ್ಷ ರೂ.ನಗದು, ಎರಡು ಐಫೋನ್, ಒಪ್ಪೊ ಕಂಪನಿಯ ಮೊಬೈಲ್, ಟ್ಯಾಬ್, ಸಿಸಿ ಟಿವಿಯ ಪ್ರೊಜೆಕ್ಟರ್,...
ಮುಂಡಗೋಡ ಶಿಂಗನಳ್ಳಿ ಡ್ಯಾಂ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ..! ನೇಣು ಬಿಗಿದ ಸ್ಥಿತಿಯಲ್ಲಿರೋ ಶವದ ಸುತ್ತ ಅನುಮಾನದ ಹುತ್ತ..?
ಮುಂಡಗೋಡ ತಾಲೂಕಿನ ಶಿಂಗನಳ್ಳಿ ಜಲಾಶಯದ ಸಮೀಪದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ, ಕೊಳೆತು ದುರ್ನಾತ ಬೀರುತ್ತಿದೆ. ಸುಮಾರು 38 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಮುಖ ಕೊಳೆತು ವಿಕಾರವಾಗಿದೆ. ಕಾಡಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡಿರೋ ಸ್ಥಿತಿಯಲ್ಲಿರೋ ಶವದ ಬಲಗೈ ಕಟ್ ಆಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಅನ್ನೋ ಬಗ್ಗೆ ಇನ್ನಷ್ಟೇ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪತ್ರಕರ್ತರಿಂದ ಮುಖ್ಯಮಂತ್ರಿಗೆ ರಕ್ತ ‘ಸಹಿ’ತ ಮನವಿ..!
ಕಾರವಾರ : ಜೀವದ ಹಂಗು ತೊರೆದು ಹಗಲು, ರಾತ್ರಿ ಸಮಾಜದ ಒಳಿತಿಗೋಸ್ಕರ ದುಡಿಯುತ್ತಿರುವ ಪತ್ರಕರ್ತ ಸಮೂಹಕ್ಕೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉ. ಕ. ಜಿಲ್ಲಾಧ್ಯಕ್ಷ ಸದಾನಂದ ದೇಶಭಂಡಾರಿ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಸ್ವಾತಂತ್ರ್ಯ ದೊರೆತು 77 ವರ್ಷ ಕಳೆದಿವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಸರ್ಕಾರ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ 90 ಶೇಕಡಾ ಪತ್ರಕರ್ತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪ್ರತಿ ದಿನ ಹಗಲು-ರಾತ್ರಿ ಎನ್ನದೆ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸಹಸ್ರಾರು ಪತ್ರಕರ್ತರ ಬದುಕು ಇಂದು ಭಾಗಶಃ ಶೋಚನೀಯ ಸ್ಥಿತಿಯಲ್ಲಿದೆ. ಈ ನಡುವೆ ಕೆಲ ಆಯ್ದ ಪತ್ರಕರ್ತರಿಗೆ ಮಾತ್ರ ಸರ್ಕಾರದ ಸವಲತ್ತುಗಳು ಲಭ್ಯವಾಗುತ್ತಿದ್ದು, ಇನ್ನುಳಿದ 90 ಶೇಕಡಾ ಪತ್ರಕರ್ತರಿಗೆ ಸರ್ಕಾರದ ಸವಲತ್ತುಗಳು...
ಸೆ.17 ರಂದು ಹಲ್ಲೆಗೊಳಗಾಗಿದ್ದ ನ್ಯಾಸರ್ಗಿಯ ದಲಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು..! ಬೀದಿಯಲ್ಲಿ ನಡೆದ ಜಗಳ ಸಾವಿನಲ್ಲಿ ಅಂತ್ಯವಾಯ್ತಾ..?
ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಸಾವು ಕಂಡಿದ್ದಾನೆ. ಕಳೆದ ಸೆಪ್ಟೆಂಬರ್ 17 ರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣ ಈಗ ಸಾವಿನಲ್ಲಿ ದಿಕ್ಕು ಬದಲಿಸಿದೆ. ಹಲ್ಲೆ ನಡೆದು 13 ದಿನಗಳ ನಂತರ ಮೃತಪಟ್ಟಿದ್ದಾನೆ. ನ್ಯಾಸರ್ಗಿಯ ಮಂಜುನಾಥ ದುರ್ಗಪ್ಪ ಬೋವಿ(57) ಎಂಬುವವನೇ ಸದ್ಯ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಕಳೆದ ಸೆಪ್ಟೆಂಬರ್ 17 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನ್ಯಾಸರ್ಗಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯಲ್ಲಿ ಹನುಮಂತ ಭೀಮಣ್ಣ ಹರಪನಹಳ್ಳಿ ಹಾಗೂ ಮೃತ ಮಂಜುನಾಥ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿ, ಗಲಾಟೆಯಾಗಿತ್ತು. ಈ ವೇಳೆ ಹನುಮಂತ ಹರಪನಹಳ್ಳಿ ಈತನು ಮಂಜುನಾಥ್ ಮೇಲೆ ಜಾತಿ ನಿಂದನೆ ಮಾಡಿದ್ದೂ ಅಲ್ಲದೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಅಂತಾ ಗಾಯಾಳು ಮಂಜುನಾಥ ಬೋವಿವಡ್ಡರ್ ಪುತ್ರ ಮುಂಡಗೋಡ ಠಾಣೆಗೆ ದೂರು ನೀಡಿದ್ದ. ಹೀಗಾಗಿ, ಪ್ರಕರಣ ದಾಖಲಿಸಿಕೊಂಡಿದ್ದ ಮುಂಡಗೋಡ ಪೊಲೀಸರು ಜಾತಿನಿಂದನೆ ಸೇರಿದಂತೆ ಹಲ್ಲೆ ಪ್ರಕರಣದಡಿ ಆರೋಪಿ ಹನುಮಂತ ಹರಪನಳ್ಳಿ ಎಂಬುವವನನ್ನು ಬಂಧಿಸಿದ್ದರು....
ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ, ಕೇಳೋಕೆ ಹೋದ್ರೆ ಕೆಟ್ಟದಾಗಿ ಬೈತಾರೆ, ಮುಂಡಗೋಡ MG ಗಾರ್ಮೆಂಟ್ಸ್ ಮಾಲೀಕರ ವಿರುದ್ಧ FIR ದಾಖಲಿಸಿದ ಮಹಿಳಾ ಕಾರ್ಮಿಕರು..!
ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಮೇಲ್ಬಾಗದಲ್ಲಿರೋ ಎಂಜಿ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಮಾಲೀಕರ ಮೇಲೆ ಮಹಿಳಾ ಕಾರ್ಮಿಕರು ಮುಗಿ ಬಿದ್ದಿದ್ದಾರೆ. ತಾವು ನಿತ್ಯವೂ ಕೆಲಸ ಮಾಡಿ ಉಪವಾಸ ಬೀಳುವಂತ ಪರಿಸ್ಥಿತಿ ಬಂದೊದಗಿದೆ. ನಮಗೆ ಸಂಬಳವನ್ನೇ ನೀಡಿಲ್ಲ ಅಂತಾ ಆಕ್ರೋಶಗೊಂಡಿದ್ದಾರೆ. ಸಂಬಳ ಕೇಳಿದ್ರೆ ಅವಾಚ್ಯವಾಗಿ ನಿಂದಿಸ್ತಿರೋ ಮಾಲೀಕರು, ವ್ಯವಸ್ಥಾಪಕರು ಸೇರಿ ಮೂವರ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಗಾರ್ಮೆಂಟ್ಸ್ ಮಹಿಳೆಯರು ದೂರು ದಾಖಲಿಸಿದ್ದಾರೆ. 3ತಿಂಗಳಿಂದ ಸಂಬಳವಿಲ್ಲ..! ಅಂದಹಾಗೆ, ಗಾರ್ಮೆಂಟಿನಲ್ಲಿ ಕೆಲಸ ಮಾಡ್ತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು, ತಮಗೆ ಮೂರು ತಿಂಗಳಿಂದ ಸಂಬಳ ನೀಡಿಯೇ ಇಲ್ಲ. ಸಂಬಳ ನೀಡಿ ಅಂತಾ ಕೇಳಲು ಹೋದ್ರೆ ನಮಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಅಂತಾ ಕಾರ್ಮಿಕ ಮಹಿಳೆಯರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗಾರ್ಮೆಂಟ್ ಮಾಲೀಕ ಹೊನ್ನಾವರ ತಾಲೂಕು ಮಂಕಿಯ ವೆಂಕಟೇಶ್ ನಾಯ್ಕ್, ಸುಪರ್ವೈಸರ್ ಗಳಾದ ಪ್ರಶಾಂತ್ ಜೀವಕ್ಕನವರ್ ಹಾಗೂ ಗಣೇಶ್ ಕುಂಬಾರ್ ಎಂಬುವವರ ಮೇಲೆ ದೂರು ದಾಖಲಿಸಿದ್ದಾರೆ. 30 ಕ್ಕೂ ಹೆಚ್ಚು...
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ, e ಸ್ವತ್ತು ಮಾಡಲು ಲಂಚ ಕೇಳಿದ್ದಕ್ಕೆ, ಖೆಡ್ಡಾ ತೋಡಿದ ಅಧಿಕಾರಿಗಳು..!
ಈ ಸ್ವತ್ತು ಮಾಡಿಸಲು ಲಂಚ ಪಡೆದ ಹಿರೇಕೆರೂರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ್ ಪಂಚಾಯತ ಕಚೇರಿಯಲ್ಲೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹಿರೇಕೆರೂರು ಪಟ್ಟಣದ ಸ್ವಿವಿಲ್ ಇಂಜನಿಯರ ಮೊಹಮ್ಮದ್ ಆಖಿಬ ಮತ್ತೂರು ಅವರ ಈ ಸ್ವತ್ತು ಮಾಡಿಸಲು ಮುಖ್ಯಾಧಿಕಾರಿ ಪಂಪಾಪತಿ ನಾಯ್ಕಗೆ ಮೊದಲು 10ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದು, ನಂತರ ಸೆ.30ರಂದು ಮತ್ತೆ 10ಸಾವಿರ ರೂಗಳ ಲಂಚಕ್ಕೆ ಬೇಡಿಕೆಯಿಟ್ಟ ವೇಳೆ ಅವರ ಕಚೇರಿಯಲ್ಲಿ ಲೋಕಾಯುಕ್ತರು ದಾಳಿ ಮಾಡಿ ಪಂಪಾಪತಿ ನಾಯ್ಕರನ್ನು ಟ್ರ್ಯಾಪ್ ಮಾಡಿದ್ದಾರೆ. ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾವೇರಿ ಜಿಲ್ಲೆಯ ಲೋಕಾಯುಕ್ತರು ಕೈಗೊಂಡು, ಆರೋಪಿ ಪಂಪಾಪತಿ ನಾಯ್ಕನನ್ನು ಹಿರೇಕೆರೂರು ಪಟ್ಟಣ ಪಂಚಾಯತಿಯಲ್ಲಿ ಬಂಧಿಸಿದ್ದಾರೆ. ಪ್ರಸ್ತುತ ಹಿರೇಕೆರೂರು ಪಟ್ಟಣದಲ್ಲಿಯೇ ಇರುವ ಅವರ ವಸತಿ ಗೃಹದಲ್ಲಿ, ಕಛೇರಿಯಲ್ಲಿಯೂ ಶೋಧನೆ ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ವಸತಿ ಗೃಹದಲ್ಲಿ ಸುಮಾರು 3.5 ಲಕ್ಷ ರೂ. ಹಾಗೂ ಇತರೆ ದಾಖಲಾತಿಗಳು ದೊರೆತಿರೋ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆದಿದೆ.
ಶಿರಸಿ- ಕುಮಟಾ ರಸ್ತೆಯ, ದೇವಿಮನೆ ಘಟ್ಟದಲ್ಲಿ ಪುರುಷನ ಅಪರಿಚಿತ ಶವ ಪತ್ತೆ, ಕೊಲೆ ಮಾಡಿ ಬೀಸಾಡಿ ಹೋದ್ರಾ ಹಂತಕರು..?
ಶಿರಸಿ- ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಸ್ಥಿತಿ ಕಂಡ ಪೊಲೀಸರು ಇದೊಂದು ಮರ್ಡರ್ ಅನ್ನೋ ಅನುಮಾನ ವ್ಯಕ್ತ ಪಡಿಸ್ತಿದಾರೆ. ಅಂದಾಜು, 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಸಾವನ್ನಪ್ಪಿರುವ ವ್ಯಕ್ತಿಯ ತಲೆ ಹಿಂಬದಿಯಲ್ಲಿ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯಾರೋ, ಎಲ್ಲಿಯೊ ಕೊಲೆ ಮಾಡಿ, ಇಲ್ಲಿ ತಂದು ಎಸೆದು ಹೋಗಿರಬಹುದಾದ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಬಿಳಿ ಶರ್ಟ ಹಾಗೂ ಲುಂಗಿ ಹಾಕಿದ್ದು, ಶರ್ಟನಲ್ಲಿ ಬಸ್ ಟಿಕೆಟ್ ಸಹ ಪತ್ತೆಯಾಗಿದೆ. ಗಜೇಂದ್ರಗಡಕ್ಕೆ..! ಅಂದಹಾಗೆ, ಮೃತ ವ್ಯಕ್ತಿ ಕಳೆದ ಗುರುವಾರ 28 ರಂದು ಮುಶಿಗೇರಿ ಯಿಂದ ಗಂಜೇಂದ್ರಗಡಕ್ಕೆ ಪ್ರಯಾಣಿಸಿರುವ ಟಿಕೆಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಈಗಾಗಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಯುವಕ ಆರೆಸ್ಟ್..! ತಿರಂಗಾದಲ್ಲಿ ಧಾರ್ಮಿಕ ಚಿತ್ರ ಹಾಕಿ ಅಂದರ್ ಆದ ಹುಡುಗ..!!
ಶಿರಸಿ: ಇಲ್ಲೊಬ್ಬ ಅಸಾಮಿ ಅದೇನೋ ಇರಲಾರದೇ ಇರುವೆ ಬಿಟ್ಕೊಂಡಂಗೆ ಮಾಡಿಕೊಂಡಿದ್ದಾನೆ. ಈದ್ ಮಿಲಾದ್ ಹಬ್ಬದ ದಿನ ತನ್ನ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಅವಮಾನ ಮಾಡಿದ್ದಾನೆ ಅಂತಾ ಶಿರಸಿ ಪೊಲೀಸರು ಬಂಧಿಸಿದ್ದಾರೆ. ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಧ್ವಜ ಹಾರಿಸಲು, ರಾಷ್ಟ್ತಧ್ವಜದಲ್ಲಿ,ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಹಾಕಿ ಧ್ವಜಕ್ಕೆ ಅವಮಾನ ಮಾಡಿದ್ದಾನೆ. ಉಮರ್ ಫಾರೂಕ್ ಅಬ್ದುಲ್ ಖಾದರ ಶೇಖ್ (38), ಬಂಧಿತ ವ್ಯಕ್ತಿಯಾಗಿದ್ದು, ಈತ ಮನೆಯ ಮೇಲೆ ರಾಷ್ಟ್ರ ಧ್ವಜವನ್ನ ಹಾರಿಸಿದ್ದಾನೆ. ಹಾರಿಸಿರುವ ರಾಷ್ಟ್ರ ಧ್ವಜಕ್ಕೆ ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಚಿತ್ರವನ್ನ ಅಂಟಿಸಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದ, ಈತ ಮನೆಯ ಹಂಚಿನ ಮೇಲ್ದಾವಣಿಯ ಮೇಲ್ದಾಗದಲ್ಲಿ ಒಂದು ಕಂಬಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ಮಾಡಿ ಅದರ ಮಧ್ಯದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಮುಸ್ಲಿಂ ಧರ್ಮದ ಮದಿನಾ ಗುಂಬಸಿನ ಚಿತ್ರ ಹಾಕಿ ಮುಸ್ಲಿಂ ಧರ್ಮದ ಘೋಷಣೆ ಬರೆದಿದ್ದ. ಇಂತಹ ರಾಷ್ಟ್ರಧ್ವಜವನ್ನು ಎಲ್ಲರಿಗೂ ಕಾಣುವಂತೆ ಹಾರಿಸಿ...