ಶಿರಸಿ- ಕುಮಟಾ ರಸ್ತೆಯ, ದೇವಿಮನೆ ಘಟ್ಟದಲ್ಲಿ ಪುರುಷನ ಅಪರಿಚಿತ ಶವ ಪತ್ತೆ, ಕೊಲೆ ಮಾಡಿ ಬೀಸಾಡಿ ಹೋದ್ರಾ ಹಂತಕರು..?

ಶಿರಸಿ- ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಸ್ಥಿತಿ ಕಂಡ ಪೊಲೀಸರು ಇದೊಂದು ಮರ್ಡರ್ ಅನ್ನೋ ಅನುಮಾನ ವ್ಯಕ್ತ ಪಡಿಸ್ತಿದಾರೆ.

ಅಂದಾಜು, 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಸಾವನ್ನಪ್ಪಿರುವ ವ್ಯಕ್ತಿಯ ತಲೆ ಹಿಂಬದಿಯಲ್ಲಿ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯಾರೋ, ಎಲ್ಲಿಯೊ ಕೊಲೆ ಮಾಡಿ, ಇಲ್ಲಿ ತಂದು ಎಸೆದು ಹೋಗಿರಬಹುದಾದ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಬಿಳಿ ಶರ್ಟ ಹಾಗೂ ಲುಂಗಿ ಹಾಕಿದ್ದು, ಶರ್ಟನಲ್ಲಿ ಬಸ್ ಟಿಕೆಟ್ ಸಹ ಪತ್ತೆಯಾಗಿದೆ.

ಗಜೇಂದ್ರಗಡಕ್ಕೆ..!
ಅಂದಹಾಗೆ, ಮೃತ ವ್ಯಕ್ತಿ ಕಳೆದ ಗುರುವಾರ 28 ರಂದು ಮುಶಿಗೇರಿ ಯಿಂದ ಗಂಜೇಂದ್ರಗಡಕ್ಕೆ ಪ್ರಯಾಣಿಸಿರುವ ಟಿಕೆಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಈಗಾಗಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!