ಶಿರಸಿ: ಇಲ್ಲೊಬ್ಬ ಅಸಾಮಿ ಅದೇನೋ ಇರಲಾರದೇ ಇರುವೆ ಬಿಟ್ಕೊಂಡಂಗೆ ಮಾಡಿಕೊಂಡಿದ್ದಾನೆ. ಈದ್ ಮಿಲಾದ್ ಹಬ್ಬದ ದಿನ ತನ್ನ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಅವಮಾನ ಮಾಡಿದ್ದಾನೆ ಅಂತಾ ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಧ್ವಜ ಹಾರಿಸಲು, ರಾಷ್ಟ್ತಧ್ವಜದಲ್ಲಿ,ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಹಾಕಿ ಧ್ವಜಕ್ಕೆ ಅವಮಾನ ಮಾಡಿದ್ದಾನೆ.
ಉಮರ್ ಫಾರೂಕ್ ಅಬ್ದುಲ್ ಖಾದರ ಶೇಖ್ (38), ಬಂಧಿತ ವ್ಯಕ್ತಿಯಾಗಿದ್ದು, ಈತ ಮನೆಯ ಮೇಲೆ ರಾಷ್ಟ್ರ ಧ್ವಜವನ್ನ ಹಾರಿಸಿದ್ದಾನೆ. ಹಾರಿಸಿರುವ ರಾಷ್ಟ್ರ ಧ್ವಜಕ್ಕೆ ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಚಿತ್ರವನ್ನ ಅಂಟಿಸಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದ,
ಈತ ಮನೆಯ ಹಂಚಿನ ಮೇಲ್ದಾವಣಿಯ ಮೇಲ್ದಾಗದಲ್ಲಿ ಒಂದು ಕಂಬಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ಮಾಡಿ ಅದರ ಮಧ್ಯದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಮುಸ್ಲಿಂ ಧರ್ಮದ ಮದಿನಾ ಗುಂಬಸಿನ ಚಿತ್ರ ಹಾಕಿ ಮುಸ್ಲಿಂ ಧರ್ಮದ ಘೋಷಣೆ ಬರೆದಿದ್ದ.
ಇಂತಹ ರಾಷ್ಟ್ರಧ್ವಜವನ್ನು ಎಲ್ಲರಿಗೂ ಕಾಣುವಂತೆ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದ,
ಈ ಪೊಟೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಶಿರಸಿ ಪೊಲೀಸರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಉಮರ್ ಫಾರೂಕ್ ಅಬ್ದುಲ್ ಖಾದರ ಶೇಖ್ ಎಂಬಾತನನ್ನ ಬಂಧಿಸಿದ್ದಾರೆ.
ಈ ಕುರಿತಾಗಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.