ಈ ಸ್ವತ್ತು ಮಾಡಿಸಲು ಲಂಚ ಪಡೆದ ಹಿರೇಕೆರೂರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ್ ಪಂಚಾಯತ ಕಚೇರಿಯಲ್ಲೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹಿರೇಕೆರೂರು ಪಟ್ಟಣದ ಸ್ವಿವಿಲ್ ಇಂಜನಿಯರ ಮೊಹಮ್ಮದ್ ಆಖಿಬ ಮತ್ತೂರು ಅವರ ಈ ಸ್ವತ್ತು ಮಾಡಿಸಲು ಮುಖ್ಯಾಧಿಕಾರಿ ಪಂಪಾಪತಿ ನಾಯ್ಕಗೆ ಮೊದಲು 10ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದು, ನಂತರ ಸೆ.30ರಂದು ಮತ್ತೆ 10ಸಾವಿರ ರೂಗಳ ಲಂಚಕ್ಕೆ ಬೇಡಿಕೆಯಿಟ್ಟ ವೇಳೆ ಅವರ ಕಚೇರಿಯಲ್ಲಿ ಲೋಕಾಯುಕ್ತರು ದಾಳಿ ಮಾಡಿ ಪಂಪಾಪತಿ ನಾಯ್ಕರನ್ನು ಟ್ರ್ಯಾಪ್ ಮಾಡಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾವೇರಿ ಜಿಲ್ಲೆಯ ಲೋಕಾಯುಕ್ತರು ಕೈಗೊಂಡು, ಆರೋಪಿ ಪಂಪಾಪತಿ ನಾಯ್ಕನನ್ನು ಹಿರೇಕೆರೂರು ಪಟ್ಟಣ ಪಂಚಾಯತಿಯಲ್ಲಿ ಬಂಧಿಸಿದ್ದಾರೆ. ಪ್ರಸ್ತುತ ಹಿರೇಕೆರೂರು ಪಟ್ಟಣದಲ್ಲಿಯೇ ಇರುವ ಅವರ ವಸತಿ ಗೃಹದಲ್ಲಿ, ಕಛೇರಿಯಲ್ಲಿಯೂ ಶೋಧನೆ ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ವಸತಿ ಗೃಹದಲ್ಲಿ ಸುಮಾರು 3.5 ಲಕ್ಷ ರೂ. ಹಾಗೂ ಇತರೆ ದಾಖಲಾತಿಗಳು ದೊರೆತಿರೋ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆದಿದೆ.