ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಮೇಲ್ಬಾಗದಲ್ಲಿರೋ ಎಂಜಿ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಮಾಲೀಕರ ಮೇಲೆ ಮಹಿಳಾ ಕಾರ್ಮಿಕರು ಮುಗಿ ಬಿದ್ದಿದ್ದಾರೆ. ತಾವು ನಿತ್ಯವೂ ಕೆಲಸ ಮಾಡಿ ಉಪವಾಸ ಬೀಳುವಂತ ಪರಿಸ್ಥಿತಿ ಬಂದೊದಗಿದೆ. ನಮಗೆ ಸಂಬಳವನ್ನೇ ನೀಡಿಲ್ಲ ಅಂತಾ ಆಕ್ರೋಶಗೊಂಡಿದ್ದಾರೆ. ಸಂಬಳ ಕೇಳಿದ್ರೆ ಅವಾಚ್ಯವಾಗಿ ನಿಂದಿಸ್ತಿರೋ ಮಾಲೀಕರು, ವ್ಯವಸ್ಥಾಪಕರು ಸೇರಿ ಮೂವರ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಗಾರ್ಮೆಂಟ್ಸ್ ಮಹಿಳೆಯರು ದೂರು ದಾಖಲಿಸಿದ್ದಾರೆ.
3ತಿಂಗಳಿಂದ ಸಂಬಳವಿಲ್ಲ..!
ಅಂದಹಾಗೆ, ಗಾರ್ಮೆಂಟಿನಲ್ಲಿ ಕೆಲಸ ಮಾಡ್ತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು, ತಮಗೆ ಮೂರು ತಿಂಗಳಿಂದ ಸಂಬಳ ನೀಡಿಯೇ ಇಲ್ಲ. ಸಂಬಳ ನೀಡಿ ಅಂತಾ ಕೇಳಲು ಹೋದ್ರೆ ನಮಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಅಂತಾ ಕಾರ್ಮಿಕ ಮಹಿಳೆಯರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗಾರ್ಮೆಂಟ್ ಮಾಲೀಕ ಹೊನ್ನಾವರ ತಾಲೂಕು ಮಂಕಿಯ ವೆಂಕಟೇಶ್ ನಾಯ್ಕ್, ಸುಪರ್ವೈಸರ್ ಗಳಾದ ಪ್ರಶಾಂತ್ ಜೀವಕ್ಕನವರ್ ಹಾಗೂ ಗಣೇಶ್ ಕುಂಬಾರ್ ಎಂಬುವವರ ಮೇಲೆ ದೂರು ದಾಖಲಿಸಿದ್ದಾರೆ.
30 ಕ್ಕೂ ಹೆಚ್ಚು ಕಾರ್ಮಿಕರು..!
ಇನ್ನು, ಎಂಜೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಲ್ಲ ಮಹಿಳಾ ಕಾರ್ಮಿಕರ ಪರವಾಗಿ ಶ್ರೀಮತಿ ನೇತ್ರಾವತಿ ಕೋಂ ಮಂಜುನಾಥ ಮಲ್ಲಾಡದ,ತರ್ಲಘಟ್ಟ, ತಾ.ಶಿಗ್ಗಾವಿ, ಅಂಜಲಿ ವಡ್ಡರ ಸಾ.ಇಂದಿರಾ ನಗರ ಪ್ಲಾಟ್, ಮುಂಡಗೋಡ, ಸರೋಜಾ ಮೋಟೆ ಸಾ.ಚವಡಳ್ಳಿ ತಾ. ಮುಂಡಗೋಡ, ಮಾದೇವಿ ವಡ್ಡರ, ಸಾ. ಸಾಲಗಾಂವ ತಾ. ಮುಂಡಗೋಡ, ಕವಿತಾ ಸುಳ್ಳಳ್ಳಿ ಸಾ.ಚಿಗಳ್ಳಿ ತಾ. ಮುಂಡಗೋಡ, ನಟ್ಕಾ ಗಾಜಿಪುರ ಸಾ. ಇಂದಿರಾ ನಗರ ಪ್ಲಾಟ್, ಮುಂಡಗೋಡ, ಜ್ಯೋತಿ ಮುರ್ಡೇಶ್ವರ ಸಾ. ನೆಹರೂ ನಗರ, ಮುಂಡಗೋಡ, ಜಯಾ ವಾಲತರ ಸಾ. ಗಣೇಶಪುರ ತಾ. ಮುಂಡಗೋಡ, ನೇತ್ರಾವತಿ ಹಂಚಿನಮನಿ ಸಾ. ಚವಡಳ್ಳಿ ತಾ. ಮುಂಡಗೋಡ, ಜಯಮ್ಮಾ ಹುಲಮನಿ ಸಾ. ಚವಡಳ್ಳಿ ತಾ. ಮುಂಡಗೋಡ ಸೇರಿ ಸುಮಾರು 30 ಜನ ಕಾರ್ಮಿಕರು ದೂರು ನೀಡಿದ್ದಾರೆ.
ಇನ್ನು ದೂರು ದಾಖಲಿಸಿಕೊಂಡಿರೋ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.