ಶಿರಸಿ: ಇಲ್ಲೊಬ್ಬ ಅಸಾಮಿ ಅದೇನೋ ಇರಲಾರದೇ ಇರುವೆ ಬಿಟ್ಕೊಂಡಂಗೆ ಮಾಡಿಕೊಂಡಿದ್ದಾನೆ. ಈದ್ ಮಿಲಾದ್ ಹಬ್ಬದ ದಿನ ತನ್ನ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಅವಮಾನ ಮಾಡಿದ್ದಾನೆ ಅಂತಾ ಶಿರಸಿ ಪೊಲೀಸರು ಬಂಧಿಸಿದ್ದಾರೆ. ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಧ್ವಜ ಹಾರಿಸಲು, ರಾಷ್ಟ್ತಧ್ವಜದಲ್ಲಿ,ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಹಾಕಿ ಧ್ವಜಕ್ಕೆ ಅವಮಾನ ಮಾಡಿದ್ದಾನೆ. ಉಮರ್ ಫಾರೂಕ್ ಅಬ್ದುಲ್ ಖಾದರ ಶೇಖ್ (38), ಬಂಧಿತ ವ್ಯಕ್ತಿಯಾಗಿದ್ದು, ಈತ ಮನೆಯ ಮೇಲೆ ರಾಷ್ಟ್ರ ಧ್ವಜವನ್ನ ಹಾರಿಸಿದ್ದಾನೆ. ಹಾರಿಸಿರುವ ರಾಷ್ಟ್ರ ಧ್ವಜಕ್ಕೆ ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಚಿತ್ರವನ್ನ ಅಂಟಿಸಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದ, ಈತ ಮನೆಯ ಹಂಚಿನ ಮೇಲ್ದಾವಣಿಯ ಮೇಲ್ದಾಗದಲ್ಲಿ ಒಂದು ಕಂಬಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ಮಾಡಿ ಅದರ ಮಧ್ಯದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಮುಸ್ಲಿಂ ಧರ್ಮದ ಮದಿನಾ ಗುಂಬಸಿನ ಚಿತ್ರ ಹಾಕಿ ಮುಸ್ಲಿಂ ಧರ್ಮದ ಘೋಷಣೆ ಬರೆದಿದ್ದ. ಇಂತಹ ರಾಷ್ಟ್ರಧ್ವಜವನ್ನು ಎಲ್ಲರಿಗೂ ಕಾಣುವಂತೆ ಹಾರಿಸಿ...
Top Stories
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಚಿಗಳ್ಳಿ ಹಿರಿಕೆರೆಯಲ್ಲಿ ಮೀನುಗಳ ದಾರುಣ ಸಾವು, ಇಡೀ ಕೆರೆಗೇ ವಿಷ ಹಾಕಿದ್ರಾ ದುರುಳರು..?
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಯುವಕ ಆರೆಸ್ಟ್..! ತಿರಂಗಾದಲ್ಲಿ ಧಾರ್ಮಿಕ ಚಿತ್ರ ಹಾಕಿ ಅಂದರ್ ಆದ ಹುಡುಗ..!!
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಮಳಗಿ ಸಮೀಪ ಗಾಂಜಾ ಮಾರುತ್ತಿದ್ದವ ಅಂದರ್..!
ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಬರೋಬ್ಬರಿ 2kg ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ತಿಳವಳ್ಳಿಯ ಸಲ್ಮಾನಖಾನ್ ಗೌನಖಾನ್ ಆಲೂರು (24), ಎಂಬುವವನೇ ಗಾಂಜಾ ಕೇಸಿನ ಆರೋಪಿಯಾಗಿದ್ದು, ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಇವನಿಂದ ಬರೋಬ್ಬರಿ 2kg 28grm ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 80 ಸಾವಿರ ರೂಪಾಯಿ. ಸಿಪಿಐ ಬರಮಪ್ಪ ಲೋಕಾಪುರ್ ನೇತೃತ್ವದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ತಿರುಪತಿ ಹುನ್ನಳ್ಳಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೆರ್, ಬಸವರಾಜ್ ಲಮಾಣಿ, ಸಂಜು ರಾಠೋಡ್, ಗುರುರಾಜ್ ದಾಳಿಯಲ್ಲಿ ಭಾಗಿಯಾಗಿದ್ರು.
ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಹತ್ಯೆ ಕೇಸಿಗೆ ಟ್ವಿಸ್ಟ್, ಕಟ್ಟಡದ ವಾಚಮನ್ ನೇಣಿಗೆ ಶರಣು..!
ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಭೀಕರ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಟ್ಟಡದಲ್ಲಿ ವಾಚಮನ್ ಆಗಿದ್ದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಸಪ್ಪ ಡಂಬರ(68)ಆತ್ಮಹತ್ಯೆ ಮಾಡಿಕೊಂಡ ವಾಚಮನ್ ಆಗಿದ್ದಾನೆ. ನಿನ್ನೆಯಷ್ಟೇ ಹುಬ್ಬಳ್ಳಿಯ ಸಿಲ್ವರ್ ಟೌನ್ ಕಟ್ಟಡದಲ್ಲಿ ಮುಂಡಗೋಡ ತಾಲೂಕಿನ ಮರಗಡಿಯ ಮೌಲಾಲಿ ಎಂಬುವ ಯುವಕನ ಬರ್ಬರ ಹತ್ಯೆಯಾಗಿತ್ತು. ಈ ಹತ್ಯೆಯ ಹಿಂದೆ ವಾಚಮನ್ ಕೈವಾಡವಿದೆ ಅಂತಾ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದರು. ಸದ್ಯ ಕಟ್ಟಡದಲ್ಲಿ ವಾಚಮನ್ ಆಗಿದ್ದ ಪರಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಲೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಂಡಗೋಡ ಹುಡುಗನ ಮರ್ಡರ್: ಈದ್ ಮಿಲಾದ್ ಗಾಗಿ ಬರಲು ರೆಡಿಯಾಗಿದ್ದವ ಹುಡುಗಿಗಾಗಿ ಹೆಣವಾದ್ನಾ..?
ಮುಂಡಗೋಡ: ಆತ ಮುಂಡಗೋಡಿನ ಹಳ್ಳಿಯಿಂದ ಸಿಟಿಗೆ ದುಡಿಯೋಕೆ ಹೋಗಿದ್ದ. ಕಟ್ಟಡ ಕೆಲಸಕ್ಕೆಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೋಗಿದ್ದ ಯುವಕ ನಾಳೆ ಹಬ್ಬಕ್ಕೆ ಊರಿಗೆ ಬರಬೇಕಿತ್ತು. ತಂದೆ ತಾಯಿ ಹಬ್ಬ ಮಾಡಲಿ ಅಂತಾ ಮನೆಗೆ ನಿನ್ನೆ ದುಡ್ಡು ಕೂಡಾ ಹಾಕಿದ್ದ. ಇನ್ನೇನು ಕೆಲಸ ಮುಗಿಸಿ ಹಬ್ಬಕ್ಕೆ ಬರಬೇಕೆಂದವ ಮಲಗಿದ್ದಲ್ಲೇ ಕೊಲೆಯಾಗಿದ್ದಾನೆ. ತಾನು ಕೆಲಸ ಮಾಡ್ತಿದ್ದ ಕಟ್ಟಡದಲ್ಲಿಯೇ ಆತ ಹೆಣವಾಗಿ ಬಿದ್ದಿದ್ದಾನೆ. ದುಷ್ಕರ್ಮಿಗಳು ಎಲ್ಲೆಂದರಲ್ಲಿ ಇರಿದು ಯುವಕನ ಕೊಲೆ ಮಾಡಿದ್ದಾರೆ. ಕಟ್ಟಡ ಕೆಲಸ ಮಾಡ್ತಿದ್ದ ಕಾರ್ಮಿಕ ಮಲಗಿದಲ್ಲೆಯೇ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಕಟ್ಟಡ ಕಾರ್ಮಿಕನ ಕೊಲೆ ಸುದ್ದಿ ಕೇಳಿ ಅಲ್ಲಿನ ಜನ ಬೆಚ್ಚಿಬಿದ್ದಿದ್ದಾರೆ. ಹೌದು, ಒಂದು ಕಡೆ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟ ಕಾರ್ಮಿಕ. ಇನ್ನೊಂದು ಕಡೆ ನಿರ್ಮಾಣ ಹಂತದ ಕಟ್ಟಡದಲ್ಲಿ ಪೊಲೀಸ ಕಮೀಷನರ್ ಪರಿಶೀಲನೆ. ಮತ್ತೊಂದು ಕಡೆ ಅಣ್ಣನ ಕಳೆದುಕೊಂಡ ತಮ್ಮನ ಕಣ್ಣೀರು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.. ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ನೆತ್ತರು ಹರಿದಿದೆ....
ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಭಯಾನಕ ಮರ್ಡರ್..!
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ ದುಷ್ಕರ್ಮಿಗಳು. ಗಾರೆ ಕೆಲಸಕ್ಕೆಂದು ಹುಬ್ಬಳ್ಳಿಗೆ ಹೋಗಿದ್ದ ಮೌಲಾಲಿ ಎಂಬುವ ಯುವಕನ್ನು ಕೊಂದು ಹಾಕಿದ್ದಾರೆ. ಹುಬ್ಬಳ್ಳಿಯ ಸಿಲ್ವರ್ ಟೌನ್ ನಲ್ಲಿ ಘಟನೆ ನಡೆದಿದ್ದು ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ನಿವಾಸಿ ಮೌಲಾಲಿ ಕೊಲೆಯಾಗಿದ್ದಾನೆ. ಹೊಟ್ಟೆಪಾಡಿಗೆಂದು ಹುಬ್ಬಳ್ಳಿಗೆ ಗೌಂಡಿ ಕೆಲಸಕ್ಕೆಂದು ಹೋಗಿದ್ದ ಎನ್ನಲಾಗಿದೆ. ಮೌಲಾಲಿಯನ್ನು ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿಯೇ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಗೋಕುಲ್ ರೋಡ್ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ. ಕೊಲೆ ಮಾಡಿ ಪರಾರಿಯಾದವರ ಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ಹುನಗುಂದ ಗ್ರಾಪಂ ಮಾಜಿ ಅಧ್ಯಕ್ಷೆ ಯಲ್ಲವ್ವ ಇಟ್ಲಾಪುರ ನಿಧನ, ಹಲವರ ಸಂತಾಪ..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಯಲ್ಲವ್ವ ರಾಮಣ್ಣ ಇಟ್ಲಾಪುರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವ್ರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಕೊನೆ ಉಸಿರೆಳೆದಿದ್ದಾರೆ. ಹುನಗುಂದ ಗ್ರಾಮ ಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಯಲ್ಲವ್ವ ಇಟ್ಲಾಪುರ, ಕಳೆದ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಧ್ಯಕ್ಷ ಪದವಿಯಿಂದ ಕೆಳಗೆ ಇಳಿದಿದ್ರು. ಬಹುತೇಕ ಸದಸ್ಯರ ಪೈಕಿ ಹಿರಿಯರಾಗಿದ್ದ ಯಲ್ಲವ್ವ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲವ್ವ ಇಟ್ಲಾಪುರ ನಿಧನಕ್ಕೆ ಗ್ರಾಮದ ಹಲವು ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.
ಹುನಗುಂದ ಗ್ರಾಮಸಭೆಯಲ್ಲಿ ಕೋಲಾಹಲ, ಅಸಂಬದ್ಧ ಉತ್ತರಿಸಿದ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆ..!
ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಇಂದು ಮಂಗಳವಾರ ಗ್ರಾಮ ಸಭೆ ಆಯೋಜಿಸಲಾಗಿತ್ತು. ವಿಠ್ಠಲ ರುಕುಮಾಯಿ ಮಂದಿರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಹುತೇಕ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಸಂಬದ್ಧ ಉತ್ತರಗಳಿಂದ ಭಾರೀ ಕೋಲಾಹಲಕ್ಕೆ ಕಾರಣವಾಯ್ತು. ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಗ್ರಾಮಸ್ಥರು ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅದು 75 ಲಕ್ಷದ ಕಾಮಗಾರಿ..! ಅಸಲು, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಜಲಾಶಯದ ಕಾಲುವೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಜಲಾಶಯದ ಅಡಿಯಲ್ಲಿ ಬರುವ ಅತ್ತಿವೇರಿ, ಹುನಗುಂದ, ಅಗಡಿ ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಕಾಲುವೆ ಕಾಮಗಾರಿ ಅಕ್ಷರಶಃ ಕಳಪೆಯಾಗಿದ್ದು, ಬರೋಬ್ಬರಿ 75 ಲಕ್ಷ ರೂ. ವೆಚ್ಚದ ಕಾಮಗಾರಿ ಹಳ್ಳ ಹಿಡಿದಿದೆ. ಈ ಕುರಿತು ಗ್ರಾಮಸ್ಥರು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಮರ್ಪಕ ಉತ್ತರ ನೀಡಬೇಕಿದ್ದ ಅಧಿಕಾರಿ, ಅದನ್ನೇಲ್ಲ ಈಗ್ಯಾಕೇ ಕೇಳ್ತಿದ್ದಿರಿ..? ಅವಾಗ ನೀವು ಎಲ್ಲಿ ಹೋಗಿದ್ರಿ..? ಅವಾಗ್ಲೇ ಕೇಳಬೇಕಿತ್ತು ಅಂತಾ...
ಹಸಿಮೇವು ತಿಂದ ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ದಾರುಣ ಸಾವು, ಹುನಗುಂದದಲ್ಲಿ ಘಟನೆ..!
ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಹಸಿಮೇವು ತಿಂದು ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ಸಾವನ್ನಪ್ಪಿರೋ ಘಟನೆ ನಡೆದಿದೆ. ಮೇವು ತಿಂದ ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುನಗುಂದ ಗ್ರಾಮದ ಬಸವರಾಜ್ ಗುರುಸಿದ್ದಪ್ಪ ಚಬ್ಬಿ ಎಂಬುವವರಿಗೆ ಸೇರಿದ ಸುಮಾರು 37 ಸಾವಿರ ರೂ. ಮೌಲ್ಯದ ಆಕಳು ಮತ್ತು ಕರು ದಾರುಣ ಸಾವು ಕಂಡಿದ್ದು ಆಘಾತ ತಂದಿದೆ. ಇನ್ನು ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಸಾವಿಗೆ ಕಾರಣವೇನು ಅಂತ ಪರಿಶೀಲನೆ ನಡೆಸಿದ್ದಾರೆ.
ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಬಿಜೆಪಿಗೆ ಭಾರೀ ಮುಖಭಂಗ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಸೊಸೈಟಿಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ನಿಚ್ಚಳ ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಅಕ್ಷರಶಃ ಕೈತಪ್ಪಿದೆ. ಬದಲಾಗಿ, ಕಾಂಗ್ರೆಸ್ ಬೆಂಬಲಿತರು ಸೊಸೈಟಿಯಲ್ಲಿ ಜಯದ ಝಂಡಾ ಹಾರಿಸಿದ್ದಾರೆ. ಇದ್ರೊಂದಿಗೆ ಇಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಆದಂತಾಗಿದೆ. ಅಂದಹಾಗೆ, ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಧರ್ಮಣ್ಣ ಬಸಪ್ಪ ಅರೆಗೊಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಬಿಜೆಪಿಯ ರಾಜವ್ವ ದೇವಿಂದ್ರಪ್ಪ ಹಾನಗಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 13 ಸದಸ್ಯ ಬಲದ ಚೌಡಳ್ಳಿ ಸೊಸೈಟಿಯಲ್ಲಿ ಕೇವಲ 7 ಸದಸ್ಯರ ಅಧ್ಯಕ್ಷರ ಪರವಾಗಿ ಮತ ಚಲಾಯಿಸಿದ್ದಾರೆ. ಹಾಗೆನೇ, ಉಪಾಧ್ಯಕ್ಷ ಸ್ಥಾನಕ್ಕಾಗಿ ಕಣದಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯೆಗೆ 7 ಸದಸ್ಯರು ಮತ ಚಲಾಯಿಸಿದ್ದಾರೆ. ಹೀಗಾಗಿ, ಅಧ್ಯಕ್ಷ ಸ್ಥಾನ ಬಿಜೆಪಿಗೆ ತಪ್ಪಿ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ವ್ಯಕ್ತಿಯ ಭೀಕರ ಹತ್ಯೆ..! ಕಳ್ಳತನಕ್ಕೆ ಬಂದವನು ಮಾಜಿ ಸೈನಿಕನಿಂದ ಹೆಣವಾದ್ನಾ..?
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ಭೀಕರ ಹತ್ಯೆಯಾಗಿದೆ. ಟಿಬೇಟಿಯನ್ ಮಾಜಿ ಸೈನಿಕನೊಬ್ಬ 36 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ನಟ್ಟ ನಡುರಾತ್ರಿಯಲ್ಲಿ ನಡೆದಿರೋ ಘಟನೆಯಲ್ಲಿ ಆರೋಪಿಯೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಟಿಬೇಟಿಯನ್ ಕ್ಯಾಂಪ್ ನಂಬರ್ 4 ರ Jamyang Dakpa @ Lobsang S/o Tenzin Yeshi(35) ಎಂಬುವವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇನ್ನು ಅದೇ ಕ್ಯಾಂಪಿನ ವಾಸಿ Gonpo Choedak S/o Thinley (50) ಎಂಬುವನೇ ಕೊಲೆಯ ಆರೋಪಿಯಾಗಿದ್ದಾನೆ. ಘಟನೆ ಏನು..? ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ರಾತ್ರಿ ಕೊಲೆಯಾದ ವ್ಯಕ್ತಿ Jamyang Dakpa @ Lobsang S/o Tenzin Yeshi ತನ್ನ ಮನೆಯ ಸಮೀಪವೇ ಇರುವ ಮಾಜಿ ಸೈನಿಕನ ಮನೆಗೆ ಕೈಯಲ್ಲಿ ಚಾಕು ಹಿಡಿದುಕೊಂಡು ಹೋಗಿದ್ದ ಎನ್ನಲಾಗಿದೆ. ಆ ಹೊತ್ತಲ್ಲಿ, ಬಾಗಿಲು ಬಡಿದಾಗ ಬಾಗಿಲು ತೆರೆದ ಮಾಜಿ ಸೈನಿಕನ ಮೇಲೆ ಏಕಾಏಕಿ ದಾಳಿ ಮಾಡಿದ್ದ...