ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಭೀಕರ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಟ್ಟಡದಲ್ಲಿ ವಾಚಮನ್ ಆಗಿದ್ದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರಸಪ್ಪ ಡಂಬರ(68)ಆತ್ಮಹತ್ಯೆ ಮಾಡಿಕೊಂಡ ವಾಚಮನ್ ಆಗಿದ್ದಾನೆ. ನಿನ್ನೆಯಷ್ಟೇ ಹುಬ್ಬಳ್ಳಿಯ ಸಿಲ್ವರ್ ಟೌನ್ ಕಟ್ಟಡದಲ್ಲಿ ಮುಂಡಗೋಡ ತಾಲೂಕಿನ ಮರಗಡಿಯ ಮೌಲಾಲಿ ಎಂಬುವ ಯುವಕನ ಬರ್ಬರ ಹತ್ಯೆಯಾಗಿತ್ತು. ಈ ಹತ್ಯೆಯ ಹಿಂದೆ ವಾಚಮನ್ ಕೈವಾಡವಿದೆ ಅಂತಾ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದರು.
ಸದ್ಯ ಕಟ್ಟಡದಲ್ಲಿ ವಾಚಮನ್ ಆಗಿದ್ದ ಪರಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಲೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.