Home BIG BREAKING

Category: BIG BREAKING

Post
ನಮಗೆ ಬಸ್ ಬೇಕೇ ಬೇಕು..!  ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!

ನಮಗೆ ಬಸ್ ಬೇಕೇ ಬೇಕು..! ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!

 ಮುಂಡಗೋಡ: ತಾಲೂಕಿನ ಇಂದೂರು ಪ್ರೌಢಶಾಲೆ ಹತ್ತಿರ ಸುರಿವ ಮಳೆಯಲ್ಲೇ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ರು. ಅಸಲು, ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಕೆಂದಲಗೇರಿ, ಹುಲಿಹೊಂಡ, ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ಪ್ರತಿಭಟಿಸಿದ್ದಾರೆ.  ಇಂದೂರುಹೈಸ್ಕೂಲ್ ಹತ್ತಿರ.. ಅಂದಹಾಗೆ, ಇಂದು ಸಂಜೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಸುಮಾರು...

Post
ಬಾಚಣಕಿ ಸಮೀಪ ರಸ್ತೆ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಸ್ಥಗಿತ..!

ಬಾಚಣಕಿ ಸಮೀಪ ರಸ್ತೆ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಸ್ಥಗಿತ..!

ಮುಂಡಗೋಡ ತಾಲೂಕಿನ ಬಾಚಣಕಿ ಸಮೀಪ ಹುಬ್ಬಳ್ಳಿ ಶಿರಸಿ ರಸ್ತೆ ಸಂಚಾರ ಸ್ಥಗಿತವಾಗಿದೆ. ನಿರಂತರ ಮಳೆಯಿಂದ ಬೃಹತ್ ಮರ ರಸ್ತೆ ಮೇಲೆ ಉರುಲಕಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿದೆ. ರಸ್ತೆ ಬದಿ ಇದ್ದ ಮರ ಮದ್ಯಾಹ್ನ ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದಾರೆ. ಅಂದಹಾಗೆ, ಕಳೆದ ಹತ್ತು ದಿನಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಬಿಟ್ಟೂ ಬಿಡದೇ ಸುರಿಯುತ್ತಿರೋ...

Post
ನ್ಯಾಸರ್ಗಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಎರಡು ಶ್ವಾನಗಳ ದಾರುಣ ಸಾವು..!

ನ್ಯಾಸರ್ಗಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಎರಡು ಶ್ವಾನಗಳ ದಾರುಣ ಸಾವು..!

 ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ವಿದ್ಯುತ್ ಅವಘಡವಾಗಿದೆ. ನಿರಂತರ ಮಳೆಯಿಂದ, ರಾತ್ರಿ ವೇಳೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಪರಿಣಾಮ ವಿದ್ಯತ್ ತಂತಿ ಸ್ಪರ್ಶಿಸಿ ಎರಡು ನಾಯಿಗಳು ಸ್ಥಳದಲ್ಲೇ ದಾರುಣ ಸಾವು ಕಂಡಿವೆ. ತಪ್ಪಿದ ಭಾರೀ ಅನಾಹುತ..! ಬಹುತೇಕ ಪುಟ್ಟ ಪುಟ್ಟ ಮಕ್ಕಳು ಓಡಾಡುವ ಸ್ಥಳ ಇದಾಗಿದೆ. ಅಲ್ಲದೇ ಮನೆಯ ಎದುರಿಗೆ ಇಂತಹದ್ದೊಂದು ಘಟನೆ ನಡೆದಿದೆ. ವಿದ್ಯುತ್ ತಂತಿ ಮರಕ್ಕೆ ತಾಗಿಕೊಂಡು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ತಂತಿ ತುಂಡಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಜನರ ಜೀವ ಹಾನಿಯಾಗಿಲ್ಲ‌‌....

Post
ರಾಕ್ಷಸ ಮಳೆ: ನದಿ ನೀರಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ..!

ರಾಕ್ಷಸ ಮಳೆ: ನದಿ ನೀರಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ..!

ಉಡುಪಿ: ರಾಕ್ಷಸ ಮಳೆಯ ರಣಭೀಕರತೆ ಮುಂದುವರೆದಿದೆ. 7 ವರ್ಷದ ಬಾಲಕಿಯೊಬ್ಬಳು ಕಾಲುಸಂಕದಿಂದ ಕೆಳಗೆ ಬಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಉಡುಪಿ ಜಿಲ್ಲೆ ಬೈಂದೂರಿನ ಬೀಜಮಕ್ಕಿಯಲ್ಲಿ ನಡೆದಿದೆ. 7 ವರ್ಷ ವಯಸ್ಸಿನ ಸನ್ನಿಧಿ ಎಂಬ ಬಾಲಕಿಯೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಶಾಲೆಯಿಂದ ಮನೆಗೆ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಭಾರಿ ಮಳೆಯ ನಡುವೆಯೇ ಶಾಲೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದ ಬಾಲಕಿ ಕಾಲುಸಂಕ ದಾಟುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ನದಿ ನೀರಿನ ರಭಸಕ್ಕೆ...

Post
ಪಾಳಾದ ದೊಡ್ಡಕೆರೆ ಒಡೆಯುವ ಆತಂಕ, ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ, ತೀವ್ರ ತರಾಟೆಗೆ ಪಡೆದ ಅನ್ನದಾತರು..!

ಪಾಳಾದ ದೊಡ್ಡಕೆರೆ ಒಡೆಯುವ ಆತಂಕ, ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ, ತೀವ್ರ ತರಾಟೆಗೆ ಪಡೆದ ಅನ್ನದಾತರು..!

  ಮುಂಡಗೋಡ ತಾಲೂಕಿನ ಪಾಳಾ ದೊಡ್ಡಕೇರಿ ಸಂಪೂರ್ಣ ಭರ್ತಿಯಾಗಿದೆ‌. ನಿರಂತರ ಮಳೆಯಿಂದ ತಾಲೂಕಿನಲ್ಲೇ ಅತಿದೊಡ್ಡ ಕೆರೆಯ ಸ್ಥಾನ ಪಡೆದಿರೊ ದೊಡ್ಡಕೆರೆ ಭರ್ತಿಯಾಗಿದ್ದು, ಜೊತೆಗೆ ಈ ಭಾಗದ ಜ‌ನರಿಗೆ, ರೈತರಿಗೆ ಆತಂಕವೂ ಶುರುವಾಗಿದೆ. ಯಾಕಂದ್ರೆ, ಚಿಕ್ಕ ನೀರಾವರಿ ಇಲಾಖೆಯ ಬಹು ದೊಡ್ಡ ಬೇಜವಾಬ್ದಾರಿಗೆ ಇಡೀ ಕೆರೆಯೇ ಒಡೆದು ಹೋಗುವ ಆತಂಕದಲ್ಲಿದೆ‌. ಇನ್ನೇರಡು ದಿನ ಹೀಗೆ ಮಳೆ ಸುರಿದ್ರೆ ಇಡೀ ಕೆರೆಯೇ ಒಡೆದು ಹೋಗುವ ಹಂತಕ್ಕೆ ಬಂದಿದೆ. ಹೀಗಾಗಿ, ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿ...

Post
ಆ ಶಿಕ್ಷಕನ ಯಡವಟ್ಟಿಗೆ, ಇಂದೂರಿನ ಓರ್ವ ವಿದ್ಯಾರ್ಥಿಯ ಬದುಕೇ ಬರ್ಬಾದು, ಬಿಇಓ ಸಾಹೇಬ್ರೇ ಏನಿದೇಲ್ಲ..?

ಆ ಶಿಕ್ಷಕನ ಯಡವಟ್ಟಿಗೆ, ಇಂದೂರಿನ ಓರ್ವ ವಿದ್ಯಾರ್ಥಿಯ ಬದುಕೇ ಬರ್ಬಾದು, ಬಿಇಓ ಸಾಹೇಬ್ರೇ ಏನಿದೇಲ್ಲ..?

 ಮುಂಡಗೋಡ: ತಾಲೂಕಿನ ಇಂದೂರಿನ ಅದೊಬ್ಬ ಬಡ ವಿದ್ಯಾರ್ಥಿ ಸಂಕಟಕ್ಕೆ ಸಿಲುಕಿದ್ದಾನೆ. ಅವನ ಜೊತೆ ಆತನ ಪೋಷಕರೂ ನಿತ್ಯವೂ ಮುಂದೇನು ಅಂತಾ ಪರದಾಡುವ ಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವನೊಬ್ಬ ಮಾಸ್ತರು ಅದೇಂಥಾ ನಿದ್ದೆಗುಂಗಿನಲ್ಲಿ ಮಾಡಿದ್ನೋ ಗೊತ್ತಿಲ್ಲ, ಆತ ಮಾಡಿದ ಯಡವಟ್ಟಿಗೆ ಆ ವಿದ್ಯಾರ್ಥಿ ಈಗ ವಿಲ ವಿಲ ಅಂತಿದಾನೆ. ಆತನ ಹೆಸ್ರು ಮಾಂತೇಶ್..! ಅಂದಹಾಗೆ, ಇಂದೂರಿನ ಆ ವಿದ್ಯಾರ್ಥಿಯ ಹೆಸ್ರು ಮಾಂತೇಶ್ ಫಕ್ಕೀರಪ್ಪ ನಾಣಪೂರ್, ಈತ ಇಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪಾಸ್ ಆಗಿ, ಅದೇ...

Post
ಚೌಡಳ್ಳಿ-ಮಲವಳ್ಳಿ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!

ಚೌಡಳ್ಳಿ-ಮಲವಳ್ಳಿ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!

ಮುಂಡಗೋಡ: ತಾಲೂಕಿನ ಚೌಡಳ್ಳಿ- ಮಲವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಎರಡನೇ ಅವಧಿಗೆ, ನೂತನ ಅಧ್ಯಕ್ಷರಾಗಿ ಮೌಲಾಸಾಬ ಪೀರ್ ಸಾಬ್ ನದಾಫ್ ಹಾಗೂ ಉಪಾಧ್ಯಕ್ಷರಾಗಿ ಶಿವಾನಂದ ಯಲ್ಲಪ್ಪ ಬಿಸುಗಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮುಖಂಡರಾದ ವೈ.ಪಿ ಪಾಟೀಲ್, ಅರ್ಜುನಪ್ಪ ಸಿಗ್ನಳಿ, ಪಿ. ಜಿ.ಪಾಟೀಲ, ಪರಶುರಾಮ್ ತಹಸೀಲ್ದಾರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ವೈ.ಪಿ.ಭುಜಂಗಿ, ಪರಶುರಾಮ್ ಕುರಿಯವರ್, ಬಸವರಾಜ್ ಉಗ್ಗಿನಕೇರಿ, ರಾಮಚಂದ್ರ ರಾಥೋಡ್, ಮಹೇಶ್ ಅರ್ಕಸಾಲಿ, ಚವಡಳ್ಳಿ ಗ್ರಾಪಂ ಸದಸ್ಯ ಪ್ರದೀಪ್ ಚವಾಣ್, ಅಬ್ದುಲ್ ಖಾದರ್...

Post
ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!

ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!

ಮುಂಡಗೋಡ: ಪಟ್ಟಣದ ಗಾಂಧಿನಗರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ಗಾಂಧಿನಗರದ ದೇವಪುತ್ರ ಗೋರ್ನಾಳ (35) ಎಂಬ ಯುವಕನೇ ನೇಣಿಗೆ ಶರಣಾಗಿದ್ದು, ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?

ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?

 ಮುಂಡಗೋಡ: ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಅರ್ಥವೇ ಆಗ್ತಿಲ್ಲ. ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡ್ತಿಲ್ಲ. ಯಾಕಂದ್ರೆ, ಪಟ್ಟಣದ ಬಂಕಾಪುರ ರಸ್ತೆಯ ನಿವಾಸಿಗಳಿಗೆ ಮಳೆ ಬಂದ್ರೆ ಸಾಕು ಜೀವ ಅಂಗೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಚೀಪ್ ಆಫೀಸರ್ ಅನ್ನೋ ಹುದ್ದೆ ನೆತ್ತಿಗೇರಿಸಿಕೊಂಡು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಆ “ಆಫಿ” ಸರ್ರು..! ಇಡೀ ಪಟ್ಟಣವೇ ಗಬ್ಬೆದ್ದು ಹೋಗಿಸಿದ್ದಾರೆ. ಥೇಟು ಶಿಗ್ಗಾವಿ ಪಟ್ಟಣದ ರೀತಿಯಲ್ಲೇ ಮುಂಡಗೋಡನ್ನೂ ಬದಲಾಯಿಸಿ ಬಿಡ್ತಾರಾ..? ಅನ್ನುವ ಅನುಮಾನ ಶುರುವಾಗಿದೆ....

Post
ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ APMC ಸಮೀಪ ಜಿಂಕೆಗೆ ಡಿಕ್ಕಿ ಹೊಡೆದ KSRTC ಬಸ್, ಜಿಂಕೆ ಸಾವು..!

ಮುಂಡಗೋಡ: ಪಟ್ಟಣದ APMC ಹತ್ತಿರ KSRTC ಬಸ್ ಡಿಕ್ಕಿಯಾಗಿ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ KSRTC ಬಸ್ APMC ಸಮೀಪದ ರಸ್ತೆಯಲ್ಲಿ ಏಕಾಏಕಿ ಜಿಂಕೆ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಜಿಂಕೆ ಸ್ಥಳದಲ್ಲೇ‌ ಮೃತಪಟ್ಟಿದೆ. ಇನ್ನು, ಮೃತಪಟ್ಟ ಜಿಂಕೆ ರಸ್ತೆಯಲ್ಲೇ ಬಿದ್ದಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಿದೆ.

error: Content is protected !!