ಮುಂಡಗೋಡ: ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮುಂಡಗೋಡಿನಲ್ಲಿ ಮೊದಲ ಮಾತು ಆಡಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವರು ಬಂದ ನಂತ್ರ ಪ್ರಜಾಪ್ರಭುತ್ವವನ್ನು ಕಳೆದುಕೊಂಡಿದ್ದೇವೆ ಅಂತಾ ಆರೋಪಿಸಿದ್ದಾರೆ. ತಮ್ಮಮಾತಿನುದ್ದಕ್ಕೂ ಸಚಿವರ ವಿರುದ್ಧ ಪರೋಕ್ಷವಾಗೇ ವಾಗ್ದಾಳಿ ನಡೆಸಿದ್ದಾರೆ.
ಮನೆ ಹಂಚಲೂ ಸಚಿವರೇ ಬೇಕು..!
ಕ್ಷೇತ್ರದಲ್ಲಿ ಈ ಮೊದಲು ಕಾರ್ಯಕರ್ತರೇ ನಾಯಕರಾಗಿರುತ್ತಿದ್ದರು. ಆದ್ರೆ ಈಗ ಗ್ರಾಮ ಪಂಚಾಯತಿ ಸದಸ್ಯರ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ತಮ್ಮ ವಾರ್ಡಿನಲ್ಲಿನ ಅರ್ಹ ಫಲಾನುಭವಿಗಳನ್ನು ಹುಡುಕಿ ಮನೆ ಹಂಚುವ ಹಕ್ಕೂ ಗ್ರಾಪಂ ಸದಸ್ಯರಿಗೆ ಉಳಿದಿಲ್ಲ. ಸಚಿವರೇ ಖುದ್ದಾಗಿ ಬಂದು ತಮಗೆ ಇಷ್ಟವಾದವರಿಗೆ ಮನೆ ಹಂಚುವ ಕಾರ್ಯ ಮಾಡುತ್ತಾರೆ. ಮನೆ ಇರಲಿ ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ತಾಡಪತ್ರಿಗಳನ್ನೂ ಕೂಡ ಸಚಿವರೇ ತಮಗಿಷ್ಟ ಬಂದವರಿಗೆ ಹಂಚುತ್ತಾರೆ ಅಂತಾ ಆರೋಪಿಸಿದ್ರು. ಹೀಗಾಗಿ, ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಅಂತಾ ಪಾಟೀಲ್ ಆರೋಪಿಸಿದ್ರು.
ತಾವು ಉದ್ದಾರ ಆದ್ರೆ ಸಾಕು..!
ಊರ ಉದ್ದಾರ ಮಾಡಲಿ ಅಂತಾ ಆರಿಸಿ ಕಳಿಸಿ ಕೊಟ್ಟಿರ್ತಿರಾ. ಆದ್ರೆ ಅವಾಗೇಲ್ಲ ಊರ ಉದ್ಧಾರಕ್ಕಾಗಿ ಜನಸೇವಕರು ಇರ್ತಿದ್ರು. ಈಗ ಹಾಗಿಲ್ಲ ಊರ ಉದ್ಧಾರ ಆಗಲಿ ಬಿಡಲಿ, ತಮ್ಮ ಉದ್ಧಾರ ಆದ್ರೆ ಸಾಕು ಅನ್ನೊ ಮನಸ್ಥಿತಿಯವರಿದ್ದಾರೆ. ಮತ್ತೆ ಚುನಾವಣೆ ಬಂದಾಗ ಅಷ್ಟೊಇಷ್ಟು ಕೊಟ್ಟು ಗೆಲ್ಲುವ ಪ್ಲ್ಯಾನ್ ಮಾಡಿರ್ತಾರೆ ಅದಕ್ಕಾಗಿ ಎಲ್ಲರೂ ಹುಶಾರಾಗಿರ್ಬೇಕು ಅಂತಾ ವಿ.ಎಸ್.ಪಾಟೀಲ್ ಕಾರ್ಯಕರ್ತರಿಗೆ ಕರೆ ನೀಡಿದ್ರು.
ಒಟ್ನಲ್ಲಿ, ಕಾಂಗ್ರೆಸ್ ಸೇರಿದ ನಂತರ ಮೊದಲ ಬಾರಿಗೆ ಮುಂಡಗೋಡ ಪಟ್ಟಣಕ್ಕೆ ಆಗಮಿಸಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲರು ಮೈ ಕೊಡವಿ ಎದ್ದಂತಿದೆ. ಹೀಗಾಗಿನೇ ಸಚಿವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುವ ಮೂಲಕ ಚುನಾವಣೆಯ ಕಣದಲ್ಲಿ ಸೆಡ್ಡು ಹೊಡೆದಂತಾಗಿದೆ.