ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬೆಂಗಳೂರು; ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ‌. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಅಂದಹಾಗೆ ಕಳೆದ ಮೂರ್ನಾಲ್ಕು ತಿಂಗಳಿಂದಲೇ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದ ವಿ.ಎಸ್.ಪಾಟೀಲರು, ಬಿಜೆಪಿ ತೊರದಿದ್ದರು. ಆದ್ರೆ, ಕಾಂಗ್ರೆಸ್ ಸೇರುವ ದಿನಾಂಕ‌ ಮಾತ್ರ ಬರೀ ಘೋಷಣೆಗಷ್ಟೇ ಸೀಮಿತವಾಗಿತ್ತು. ಹೀಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಡೊಲಾಯಮಾನ ಅನ್ನುವಂತಾಗಿತ್ತು. ಸದ್ಯ ಕಾಂಗ್ರೆಸ್ ಗೆ ಅಧಿಕೃತವಾಗಿಬಸೇರ್ಪಡೆಗೊಂಡಿರೋ ವಿ.ಎಸ್.ಪಾಟೀಲರು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ ಬಲ ತುಂಬಿದ್ದಾರೆ.

error: Content is protected !!