ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ರು. ಹೀಗಾಗಿ, ಬಸ್ ನಿಲ್ದಾಣದಲ್ಲೇ ಬಸ್ ಗಳು ನಿಂತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಬಸ್ಸೇ ಇಲ್ಲ..!
ಅಂದಹಾಗೆ, ಇದು ಇವತ್ತಿನ ಸಮಸ್ಯೆ ಅಷ್ಟೇ ಅಲ್ಲ‌. ಮುಂಡಗೋಡ ಬಸ್ ನಿಲ್ದಾಣದಲ್ಲಿ ನಿತ್ಯವೂ ಇದೇ ಗೋಳು. ಶಾಲಾ,ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಪರಿಪಾಟಲು ಅಂತೂ ಹೇಳತೀರದ್ದು. ಹೀಗಾಗಿ, ಅದೇಷ್ಟೇ ಬಾರಿ ಮನವಿ ಮಾಡಿದ್ರೂ, ಕೇಳಿಕೊಂಡ್ರೂ ಈ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನಲ್ಲ. ಕಾಲ್ ಮಾಡಿದ್ರೆ ಪಿಕ್ ಮಾಡಲ್ಲ. ಹೀಗಾಗಿ, ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಆಗ್ತಿದೆ. ಹೀಗಾಗಿ, ಅವ್ರೇಲ್ಲ ಇವತ್ತು ಉಗ್ರಗೊಂಡಿದ್ದಾರೆ.

ನಿಂತಲ್ಲೇ ನಿಂತ ಬಸ್ ಗಳು..!
ನಿತ್ಯವೂ ಇದೇ ಪರಿಸ್ಥಿತಿ ಎದುರಿಸ್ತಿರೋ ಪ್ರಯಾಣಿಕರು, ವಿದ್ಯಾರ್ಥಿಗಳು ಅಧಿಕಾರಿಗಳು ಕ್ಯಾರೇ ಅನ್ನದಿದ್ದಾಗೆ ಅನಿವಾರ್ಯವಾಗಿ ಇವತ್ತು ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟಿಸಿದ್ರು. ಶಿರಸಿ- ಹುಬ್ಬಳ್ಳಿ ಮಂಗಳೂರು-ಹುಬ್ಬಳ್ಳಿ ಸೇರಿದಂತೆ ಹಲವು ಬಸ್ ಗಳನ್ನು ನಿಲ್ದಾಣದಲ್ಲೇ ತಡೆದು ನಿಲ್ಲಿಸಿ ಆಕ್ರೋಶ ಹೊರಹಾಕಿದ್ರು. ಹೀಗಾಗಿ, ಸುದ್ದಿ ತಿಳಿದ ಪೊಲೀಸರು ಪ್ರತಿಭಟ‌ನಾ ನಿರತ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಹರಸಾಹ ಪಡುತ್ತಿದ್ದಾರೆ.

ಸಾರಿಗೆ ಅಧಿಕಾರಿಗಳು ಬರಲಿ..!
ಇನ್ನು, ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಲು ಮುಂದಾದಾಗ, ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಲಾಯಿತು. ಈ ವೇಳೆ ಪೋನ್ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮತ್ತದೇ ಹಾರಿಕೆ ಉತ್ತರ ಬರುವಂತಾಯಿತು. ಹೀಗಾಗಿ, ಕೆಲ ಕಾಲ ಪೊಲೀಸರೊಂದಿಗೆ ಪ್ರತಿಭಟನಾ ನಿರತರು ಚರ್ಚೆ ಮಾಡಿದ್ರು.

error: Content is protected !!