ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಭಾರೀ ದುರಂತ ಸಂಭವಿಸಿದೆ. ಈಸಲು ತೆರಳಿದ್ದ ಇಬ್ಬರು ಟಿಬೇಟಿಯನ್ ಬೌದ್ದ ಸನ್ಯಾಸಿಗಳು ನೀರು ಪಾಲಾಗಿದ್ದಾರೆ. ಇಬ್ಬರೂ ಬಾಚಣಕಿ ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ.
ಬೆಳಿಗ್ಗೆಯಿಂದಲೇ ಬಾಚಣಕಿ ಜಲಾಶಯಕ್ಕೆ ಈಸಲು ಬಂದಿದ್ದ ಬೌದ್ದ ಸನ್ಯಾಸಿಗಳು ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಈ ವೇಳೆ ಟಿಬೇಟಿಯನ್ ಲಾಮಾಗಳು ಶವಗಳನ್ನು ಪೊಲೀಸರಿಗೆ ಗೊತ್ತಾಗದಂತೆ ಎಸ್ಕೇಪ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಆದ್ರೆ ಸ್ಥಳೀಯರು ಗಮನಿಸಿ ಮುಂಡಗೋಡ ಪೋಲಿಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಸದ್ಯ ಒಂದು ಶವ ಬಾಚಣಕಿ ಜಲಾಶಯದಲ್ಲಿದ್ದು ಮತ್ತೊಂದು ಶವ ಟಿಬೇಟಿಯನ್ ಆಸ್ಪತ್ರೆಗೆ ರವಾನಿಸಲಾಗಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಮೃತರ ಹೆಸರು ತಿಳಿದು ಬಂದಿಲ್ಲ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.