ಸಿಎಂ ಬೊಮ್ಮಾಯಿ ವಿರುದ್ಧ ಸಿಟ್ಟಾದ ಈಶ್ವರಪ್ಪ: ಬೆಳಗಾವಿಗೆ ಹೋಗ್ತಿನಿ, ಆದ್ರೆ ಅಧಿವೇಶನದಲ್ಲಿ ಭಾಗಿಯಾಗದೇ ಬಹಿಷ್ಕಾರ..!


ಬಾಗಲಕೋಟೆ: ಸಚಿವ ಸ್ಥಾನ ಸಿಗದ ಹಿನ್ನೆಲೆ ಬಹಿರಂಗವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ‌ ಮಾತನಾಡಿರೋ ಈಶ್ವರಪ್ಪ, ಹೈಕಮಾಂಡ್ ಹಾಗೂ ಸಿಎಂ ನಡೆಗೆ ಬೇಸರವಾಗಿದೆ, ಅವರ ನಡೆ ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ.. ಅದಕ್ಕೆ ಈಗ ನಾನು ಅಧಿವೇಶನದಲ್ಲಿ ಭಾಗಿಯಾಗದೇ ಸೌಜನ್ಯದ ಪ್ರತಿಭಟನೆ ನಡೆಸುತ್ತಿದ್ದೆನೆ ಅಂದ್ರು.

ನಾನು ಬೆಳಗಾವಿಗೆ ಹೋಗ್ತೇನೆ ಆದ್ರೆ ಅಧಿವೇಶನಕ್ಕೆ ಹೋಗಲ್ಲ. ಅಧಿವೇಶನದಲ್ಲಿ ನಾನು ಇರಲ್ಲ ಅಂತ ಅಧ್ಯಕ್ಷರಿಗೆ ಪತ್ರ ಕೊಟ್ಟು,
ಪರಮಿಷನ್ ತೆಗೆದುಕೊಳ್ಳೋಕೆ ಹೋಗ್ತೀನಿ
ಯಾಕೆ ಅಂದ್ರೆ ನನ್ನ ಸ್ನೇಹಿತರು ಒಬ್ಬರು ಹೇಳಿದ್ರು, ಅಪರಾಧದಿಂದ ಮುಕ್ತವಾದ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗಲ್ಲ ಅಂತ, ಆದ್ರೆ ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ, ಕ್ಲಿನ್ ಚಿಟ್ ಸಿಕ್ಕಾಗಿದೆ.. ನಿಮ್ಮನ್ನ ಮಂತ್ರಿ ಮಾಡ್ತಿವಿ ಮಂತ್ರಿ ಮಾಡ್ತೀವಿ ಅಂತ,
ಇವತ್ತು ನಾಳೆ ಅಂತ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸ್ತಿದ್ದಾರೆ. “ನಿಮ್ಮಂತವರು ಮಂತ್ರಿ ಮಂಡಲದಲ್ಲಿ ಇರಬೇಕು ಅಂತ ಹೇಳ್ತಾರೆ, ಆದ್ರೆ ಯಾತಕ್ಕೆ ತಗೊಳ್ತಿಲ್ಲ ಅಂತ ಗೊತ್ತಿಲ್ಲ.. ಇಡೀ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು, ಮಠಾಧೀಶರು ನನಗೆ ಫೋನ್ ಮಾಡ್ತಾರೆ ಯಾಕೆ ನಿಮ್ಮನ್ನ ಮಂತ್ರಿ ಮಾಡ್ತಿಲ್ಲ..? ನಮಗೆಲ್ಲ ನೋವು ಆಗಿದೆ ಅಂತ ಅವ್ರೇಲ್ಲ ಹೇಳಿದ ಸಂಧರ್ಭದಲ್ಲಿ ನನಗೂ ನೋವು ಆಗ್ತಿದೆ ಅಪಮಾನ ಆಗ್ತಿದೆ ಅಂತಾ ಬೇಸರ ವ್ಯಕ್ತ ಪಡಿಸಿದ ಈಶ್ವರಪ್ಪ, ಇದನ್ನೇಲ್ಲ ಅವರಿಗೆ ಅರ್ಥ ಮಾಡಿಸಬೇಕು ಅನ್ನೋ ಒಂದೇ ಕಾರಣಕ್ಕೆ ನಾನು ಒಂದು ರೀತಿಯ ಸೌಜನ್ಯ ಪ್ರತಿಭಟನೆ ಮಾಡ್ತೀನಿ ಅಂತಾ ಘೋಷಣೆ ಮಾಡಿದ್ರು.

ಮೊದಲನೇ ಬಾರಿ ವಿಧಾನಸೌಧಕ್ಕೆ ಕಾಲಿಟ್ಟಾಗಿನಿಂದ, ಈ ತೀರ್ಪು ತಡ ಆಗುತ್ತೆ ಅಂದ್ರೂ ಕೂಡ ನಾನು ಒಂದೇ ಒಂದು ದಿನ ಚಕ್ಕರ್ ಹೊಡಿಲಿಲ್ಲ ಪರಮಿಷನ್ ತಗೊಂಡಿಲ್ಲ. ನಾನು ಕ್ಲಿನ್ ಚಿಟ್ ತಗೊಂಡು ನಿರಪರಾಧಿ ಅಂತ ತೀರ್ಮಾನ ಆದ ನಂತರವೂ ಕೂಡ, ಇಡೀ ರಾಜ್ಯದ ಜನರು ಪ್ರಶ್ನೆ ಮಾಡೋ ಸಂಧರ್ಭದಲ್ಲಿ, ನಿಮ್ಮ ಮುಖಾಂತರ ನಾನು (ಮುಖ್ಯಮಂತ್ರಿಗೆ) ಕೇಳೋಕೆ ಇಷ್ಟಾ ಪಡ್ತೀನಿ, ನೀವು ಉತ್ತರ ಕೊಡಿ. ಯಾತಕ್ಕೆ ಈಶ್ವರಪ್ಪರನ್ನ ತೆಗೆದುಕೊಂಡಿಲ್ಲ..? ಅವ್ರು ಕೇಂದ್ರ ನಾಯಕರು ತಕ್ಕೊಂಡಿಲ್ಲ ಅನ್ನೋ ಮಾತು ಆಡಬಹುದು.. ಆದ್ರೆ, ಮುಖ್ಯಮಂತ್ರಿಗೆ ತನ್ನ ಸಚಿವ ಸಂಪುಟದಲ್ಲಿ ಯಾರ್ ಯಾರು ಇಟ್ಕೋಬೇಕು ಅನ್ನೋ ಅಧಿಕಾರ ಇರುತ್ತೆ.ಕೇಂದ್ರದ ನಾಯಕರು ಕೂಡ ಈ ವಿಚಾರದಲ್ಲಿ ಒಳ್ಳೆ ಅಭಿಪ್ರಾಯ ಇಟ್ಟುಕೊಂಡು ತಗೋಬೇಕಿತ್ತು. ಮುಖ್ಯಮಂತ್ರಿಗಳು ಇದನ್ನ ಗಮನಿಸಬೇಕು, ಬಹಿರಂಗವಾಗಿ ಯಾಕೆ ಹೇಳ್ತೀನಿ ಅಂದ್ರೆ ಇದು ಸೌಜನ್ಯ ಪ್ರತಿಭಟನೆ ಅಂತಾ ಮಾಮಿಕವಾಗಿಯೇ ಸಿಎಂ ಗೆ ತಿವಿದಿದ್ದಾರೆ ಈಶ್ವರಪ್ಪ‌ನವರು.

error: Content is protected !!