ಇದು ಮುಂಡಗೋಡ ತಾಲೂಕಿನ ಮಟ್ಟಿಗೆ ವಿಚಿತ್ರ, ಭಯ ಹುಟ್ಟಿಸುವ, ಆತಂಕಕಾರಿ ಘಟನೆ. ಸಿಸಿಟಿವಿ ದೃಷ್ಯಗಳನ್ನು ನೋಡಿದ್ರೆ ಎಂಥವರೂ ಒಂದು ಕ್ಷಣ ನಿಬ್ಬೆರಗಾಗೋ ವಿಚಿತ್ರ ಘಟನೆ. ಅಲ್ಲಿ ಗ್ಯಾರೇಜ್ ಎದುರು ನಿಲ್ಲಿಸಿದ್ದ ಬೈಕ್ ಕ್ಷಣಾರ್ಧದಲ್ಲಿ ಮಂಗಮಾಯವಾಗತ್ತೆ. ಅದಕ್ಕೂ ಮುಂಚೆ ಅದೇಂತದ್ದೋ ವಿಚಿತ್ರ ಚಲನ ವಲನ, ಅಷ್ಟಕ್ಕೂ ಇದೇಲ್ಲ ಕಳ್ಳರ ಕರಾಮತ್ತಿನ ಕಣ್ಣಾಮುಚ್ಚಾಲೆಯಾ..? ಅಥವಾ ಆತ್ಮಗಳ ಅಸಲೀ ಚೇಷ್ಟೆಯಾ..? ಅರ್ಥವೇ ಆಗುತ್ತಿಲ್ಲ.

CCTV ದೃಷ್ಯ..!
ಅಸಲು, ಇದು ನಡೆದದ್ದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಬಳಿಯ, ಯಲ್ಲಾಪುರ ರಸ್ತೆಯಲ್ಲಿ. ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಕ್ರಾಸ್ ಬಳಿ ಅಜಾದ್ ಹೊಟೇಲ್ ಇದೇಯಲ್ವಾ ಅದೇ ಹೊಟೇಲ್ ನ ಸಿಸಿಟಿವಿ ದೃಷ್ಯದಲ್ಲಿ ಕಂಡುಬಂದಿರೋ ಅಪರೂಪದ ವಿಚಿತ್ರ ಘಟನೆ ಇದು.

ಮದ್ಯರಾತ್ರಿ..!
ಇದು ನಡೆದದ್ದು ನಿನ್ನೆ ರಾತ್ರಿ ಅಂದ್ರೆ ದಿನಾಂಕ 6.12.2022 ರ ಮದ್ಯ ರಾತ್ರಿ 11.57 ರಿಂದ 12 ಗಂಟೆಯವರೆಗೆ ನಡೆದಿರೋ ಅಚ್ಚರಿ. ತಾಲೂಕಿನ ಇಂದೂರು ಗ್ರಾಮದ ಲಕ್ಷ್ಮಣ ಎಂಬುವವರ ಯಮಹಾ ಆರ್ 15 ಬೈಕ್ ರೀಪೇರಿಗೆ ಅಂತಾ ಟಿಬೇಟಿಯನ ಕ್ಯಾಂಪ್ ಬಳಿ ಇರುವ ಗ್ಯಾರೇಜ್ ಗೆ ಬಿಟ್ಟಿರುತ್ತಾರೆ. ಆ ಗ್ಯಾರೇಜ್ ನಲ್ಲಿ ಬೈಕ್ ರಿಪೇರಿ ಮಾಡಿ ಹೊರಗಡೆ ಪಾರ್ಕ್ ಮಾಡಿರ್ತಾರೆ. ಆದ್ರೆ ಆ ಬೈಕ್ ಮೊನ್ನೆ ಮಂಗಳವಾರ ಮದ್ಯ ರಾತ್ರಿ ಕ್ಷಣಾರ್ಧದಲ್ಲೇ ಮಾಯವಾಗಿದೆ. ಅಸಲು ಅಲ್ಲಿ ಮನುಷ್ಯರ ಯಾವ ಸುಳಿವೂ ಇಲ್ಲ. ಆದ್ರೆ ಬೈಕ್‌ ಮಾಯವಾಗಿರೋದು ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೇಲ್ಲ ನೆರಳು ಬೆಳಕಿನ ಆಟದಂತೆ ಕಣ್ ಕಟ್ಟಾಗಿದೆ.

ಅದು ಬೆಕ್ಕಾ,ಅಥವಾ ಭೂತಾನಾ..?
ಅಂದಹಾಗೆ, ಸಿಸಿಟಿವಿಯಲ್ಲಿ ಸೆರೆಯಾದ ದೃಷ್ಯದಂತೆ, ಮಂಗಳವಾರದ ಮದ್ಯರಾತ್ರಿ ಕರೆಕ್ಟಾಗಿ 11.57 ರಿಂದ 12 ಗಂಟೆಯಷ್ಟೊತ್ತಿಗೆ ಬೆಕ್ಕಿನ ನೆರಳು ಅತ್ತಿಂದಿತ್ತ ಓಡತ್ತೆ. ಅದ್ರ ಜೊತೆ ಅದೇಂತದ್ದೋ ಬೆಳಕಿನ ಕಿರಣ ಮೂಡಿರತ್ತೆ. ಇನ್ನು ಕೆಲವು ಕ್ಷಣಗಳು ಗಾಳಿಯ ಓಡಾಟದ ಕುರುಹು ಸಿಸಿಟಿವಿಯಲ್ಲಿ ದಾಖಲಾಗಿದೆ. ಅದೇನೋ ನಿರಾಕಾರ ವಸ್ತು ಚಲಿಸಿದಂತೆ ಭಾಸ.. ಕರೆಕ್ಟಾಗಿ 12 ಗಂಟೆಗೆ ಆ ಎಲ್ಲಾ ಚಿತ್ರಣವೇ ಕ್ಷಣಾರ್ಧದಲ್ಲಿ ಬೈಕ್ಮಾ ಯವಾಗುವುದರೊಂದಿಗೆ ಮುಕ್ತಾಯವಾಗತ್ತೆ. ಈ ದೃಷ್ಯ ನೋಡಿದ್ರೆ ಇದೇನು ಮಹಾ ಮ್ಯಾಜಿಕ್ಕಾ..? ಅಥವಾ ಭೂತ ಚೇಷ್ಟೆಯಾ..? ಅಥವಾ ಕಳ್ಳರ ಕೈಚಳಕದ ಕರಾಮತ್ತಾ..? ಏನಂದ್ರೆ ಏನೂ ಅರ್ಥವಾಗಿಲ್ಲ. ಪೊಲೀಸರು ಈ ಬಗ್ಗೆ ಒಂದಿಷ್ಟು ಗಮನ ಹರಿಸಬೇಕಿದೆ. ಏನಿದರ ಅಸಲಿ ಮಹಿಮೆ ಅನ್ನೋದನ್ನು ಕಂಡು ಹಿಡಿಯಬೇಕಿದೆ.

ಸದ್ಯ ಮುಂಡಗೋಡ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ ಕೇಸು. ಬಹುಶಃ ಪೊಲೀಸರಿಗೂ ತಲೆ ತಿರುಗೋದಂತೂ ಗ್ಯಾರಂಟಿ. ಹಾಗಿದೆ ಆ ದೃಷ್ಯ..

error: Content is protected !!