Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಹುನಗುಂದ ಬಳಿ ಭೀಕರ ಅಪಘಾತ, ಬೈಕ್ ಓಮಿನಿ ನಡುವೆ ಡಿಕ್ಕಿ, ನಂದಿಕಟ್ಟಾದ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!

ಹುನಗುಂದ ಬಳಿ ಭೀಕರ ಅಪಘಾತ, ಬೈಕ್ ಓಮಿನಿ ನಡುವೆ ಡಿಕ್ಕಿ, ನಂದಿಕಟ್ಟಾದ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!

ಮುಂಡಗೋಡ: ತಾಲೂಕಿನ ಹುನಗುಂದ ಹಾಗೂ ಟಿಬೇಟಿಯನ್ ಕ್ಯಾಂಪ್ ನಂ. 8 ರ ರಸ್ತೆ ಮದ್ಯೆ ಭೀಕರ ಅಪಘಾತವಾಗಿದೆ. ಓಮಿನಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾ‌ನೆ. ಮತ್ತೋರ್ವನಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ಕೃಷ್ಣ ಸೋಮಣ್ಣ ಕಟಾವಕರ್ (54) ಎಂಬುವವನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇನ್ನು ಪ್ರಭು(36) ಎಂಬುವ ಬೈಕ್ ಹಿಂಬದಿಯ ಸವಾರ ಗಾಯಗೊಂಡಿದ್ದಾನೆ. ಬೈಕ್ ಸವಾರರು ಹುನಗುಂದ ಗ್ರಾಮಕ್ಕೆ ತೆರಳುತ್ತಿದ್ದರು. ಹಾಗೇನೆ ಹುನಗುಂದ ಕಡೆಯಿಂದ ವರುತ್ತಿದ್ದ ಓಮಿನಿ ನಡುವೆ ಡಿಕ್ಕಿಯಾಗಿದೆ. ಹೀಗಾಗಿ, ಗಂಭೀರವಾಗಿ ಗಾಯಗೊಂಡಿದ್ದ...

Post
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ವಿರೋಧ, ಜಿಲ್ಲಾ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸೇರ್ಪಡೆ- ಮುನಾಫ್ ಮಿರ್ಜಾನಕರ್

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ವಿರೋಧ, ಜಿಲ್ಲಾ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸೇರ್ಪಡೆ- ಮುನಾಫ್ ಮಿರ್ಜಾನಕರ್

 ಮುಂಡಗೋಡ: ಬಿಜೆಪಿಯೊಂದಿಗೆ ಮೈತ್ರಿ ಹಿನ್ನೆಲೆಯಲ್ಲಿ JDS ವಿರುದ್ಧ ಉತ್ತರ ಕನ್ನಡದ ಬಹುತೇಕ ಅಲ್ಪಸಂಖ್ಯಾತ ಮುಖಂಡರು ಆಕ್ರೋಶಗೊಂಡಿದ್ದಾರೆ. ಜಾತ್ಯಾತೀತ ಜನತಾದಳದಲ್ಲಿದ್ದ ಹಲವು ಮುಖಂಡರು ಹೆಚ್ ಡಿಕೆ ವಿರುದ್ಧ ತಿರುಗಿ ಬಿದ್ದಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮುಂಡಗೋಡಿನಲ್ಲಿ ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಮುನಾಫ್ ಮಿರ್ಜಾನಕರ್, ಕುಮಾರಸ್ವಾಮಿಯವರ ಜೊತೆ ನಾವೇಲ್ಲ ನಿಕಟ ಸಂಪರ್ಕ ಹೊಂದಿದ್ದೇವು, ಅಲ್ಪಸಂಖ್ಯಾತರು ಜೆಡಿಎಸ್ ಜೊತೆ ಪಕ್ಷಕ್ಕಾಗಿ ದುಡಿದಿದ್ದೇವು. ಆದ್ರೆ, ನಮಗೆ ಹೇಳದೇ ಕೇಳದೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ನಮಗೆ ಬೇಸರ ತರಿಸಿದೆ....

Post
ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!

ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಲಾರಿ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಅರಷಿಣಗೇರಿಯ ಸ್ಕೂಟಿ ಸವಾರ ಸ್ಥಳದಲ್ಲೇ ಸಾಚನ್ನಪ್ಪಿದ್ದಾನೆ. ಬಸವರಾಜ್ ಶಿವನಗೌಡರ್ (50) ಎಂಬುವ ಸ್ಲೂಟಿ ಸವಾರನೇ ಅಪಘಾತದಲ್ಲಿ ಮೃತಪಟ್ಟಿದ್ದು, ಸಂಜೆ ಮುಂಡಗೋಡಿನಿಂದ ಸ್ಕೂಟಿ ಮೇಲೆ ಅರಷಿಣಗೇರಿಗೆ ಬರುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತೂ ಉದ್ಧಾರ ಆಗಲ್ಲ- ರೂಪಾಲಿ ನಾಯ್ಕ್

ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತೂ ಉದ್ಧಾರ ಆಗಲ್ಲ- ರೂಪಾಲಿ ನಾಯ್ಕ್

  ಮುಂಡಗೋಡ: ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತಿಗೂ ಉದ್ಧಾರ ಆಗಲ್ಲ ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಪರೋಕ್ಷವಾಗಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು. ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವ್ರು, ಪಕ್ಷದಲ್ಲಿ ಬಂದು ಸ್ಥಾನಮಾನ ಪಡೆದು, ಪಕ್ಷದ ಶಾಲು ಹಾಕಿಕೊಂಡು ಮೆರೆದವರು ಈಗ ಮತ್ತೆ ಪಕ್ಷ ಬಿಡುತ್ತಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಆತಂಕಗೊಳಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ....

Post
ಮುಂಡಗೋಡಿನಲ್ಲಿ ಬಿಜೆಪಿ ಸಮಾವೇಶ..! ಬಿಜೆಪಿ ಶಾಸಕ ಹೆಬ್ಬಾರರ ಭಾವಚಿತ್ರವೇ ನಾಪತ್ತೆ..!  ಬಿಜೆಪಿಗೆ ಬೇಡವಾದ್ರಾ ಹೆಬ್ಬಾರ್..?

ಮುಂಡಗೋಡಿನಲ್ಲಿ ಬಿಜೆಪಿ ಸಮಾವೇಶ..! ಬಿಜೆಪಿ ಶಾಸಕ ಹೆಬ್ಬಾರರ ಭಾವಚಿತ್ರವೇ ನಾಪತ್ತೆ..! ಬಿಜೆಪಿಗೆ ಬೇಡವಾದ್ರಾ ಹೆಬ್ಬಾರ್..?

ಮುಂಡಗೋಡಿನಲ್ಲಿಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದ್ರೆ, ಈ ಸಮಾವೇಶದ ವೇದಿಕೆಯಲ್ಲಿ ಹಾಕಿರೋ ಬ್ಯಾನರ್ ನಲ್ಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ರವರ ಭಾವಚಿತ್ರವನ್ನೇ ಹಾಕಿಲ್ಲ. ಅಂದಹಾಗೆ, ಇಂದು ನಡೆಯುತ್ತಿರೋ ಸಮಾವೇಶದಲ್ಲಿ ಬಹುತೇಕ ಜಿಲ್ಲಾ ನಾಯಕರು ಭಾಗವಹಿಸಿಲಿದ್ದಾರೆ ಎನ್ನಲಾಗ್ತಿದೆ. ಈ ಕಾರಣಕ್ಕಾಗಿನೇ, ವೇದಿಕೆಯ ಬ್ಯಾನರನಲ್ಲಿ ರಾಷ್ಟ್ರ ನಾಯಕರು, ರಾಜ್ಯ ನಾಯಕರು ಹಾಗೂ ಜಿಲ್ಲಾಮಟ್ಟದ ನಾಯಕರುಗಳ ಭಾವಚಿತ್ರ ಹಾಕಲಾಗಿದೆ. ಜೊತೆಗೆ ಬಿಜೆಪಿಯ...

Post
ಶಿವರಾಮ್ ಹೆಬ್ಬಾರ್ ಅಸಲಿ ಆಟ ಶುರು, ಕಾಂಗ್ರೆಸ್ ಸೇರಲ್ವಂತೆ ಸಾಹೇಬ್ರು..!

ಶಿವರಾಮ್ ಹೆಬ್ಬಾರ್ ಅಸಲಿ ಆಟ ಶುರು, ಕಾಂಗ್ರೆಸ್ ಸೇರಲ್ವಂತೆ ಸಾಹೇಬ್ರು..!

ಇದು ನಿಜಕ್ಕೂ ಮುಂಡಗೋಡ ಯಲ್ಲಾಪುರ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾದ ಸುದ್ದಿ. ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸದ್ಯ ಕಾಂಗ್ರೆಸ್ ಸೇರೋದಿಲ್ಲ‌. ಬದಲಾಗಿ, ಹೆಬ್ಬಾರ್ ರವರ ಸುಪುತ್ರ ವಿವೇಕ್ ಹೆಬ್ಬಾರ್ ಇನ್ನೇನು ಕೆಲವೇ ದಿನಗಳಲ್ಲಿ ಕೈ ಹಿಡಿಯಲಿದ್ದಾರೆ ಅನ್ನೋದು ಕನ್ಪರ್ಮ್ ಆಗ್ತಿದೆ. ಈ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಅಕ್ಷರಶಃ ತಟಸ್ತರಾಗಿ ಕಮಲ ಪಾಳಯಕ್ಕೆ ಡಿಚ್ಚಿ ಕೊಡುವ ಎಲ್ಲಾ ತಯಾರಿ ಮಾಡಿಕೊಂಡಿದ್ದಾರಂತೆ ಹೆಬ್ಬಾರ್ ಸಾಹೇಬ್ರು..! ಹಳ್ಳಿ ಹಳ್ಳಿಗಳಲ್ಲೂ ಸಭೆ..! ಇಂತಹದ್ದೊಂದು ಕಾರ್ಯತಂತ್ರ ರೂಪಿಸಿಕೊಂಡಿರೋ ಶಿವರಾಮ್ ಹೆಬ್ಬಾರ್,...

Post
ಎದುರಾಳಿ ಬಿಜೆಪಿ ಮನೆ ಬಿಟ್ಟು, ನಮ್ಮ ಮನೆಗೆ ಬರುವವರನ್ನು ಸ್ವಾಗತಿಸೋಣ..!   ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ವಾಗತ..!!

ಎದುರಾಳಿ ಬಿಜೆಪಿ ಮನೆ ಬಿಟ್ಟು, ನಮ್ಮ ಮನೆಗೆ ಬರುವವರನ್ನು ಸ್ವಾಗತಿಸೋಣ..! ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ವಾಗತ..!!

ಮುಂಡಗೋಡ: ಚುನಾವಣೆಯೆಂಬ ಪರೀಕ್ಷೆ ಬಂದಿದೆ. ಎದುರಾಳಿ ಬಿಜೆಪಿ ಮನೆಯನ್ನ ಬಿಟ್ಟು ನಮ್ಮ ಮನೆಗೆ ಬರಲು ಹೊರಟಿರುವವರಿಗೆ ಸ್ವಾಗತ ಮಾಡಬೇಕಿದೆ. ಕಾಂಗ್ರೆಸ್ ಎಂಬುದು ದೊಡ್ಡ ಸಮುದ್ರ. ನಮಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಯಾವ ಟೈಮ್ ನಲ್ಲಿ ಯಾವ ಆಪರೇಷನ್ ಮಾಡಬೇಕೆಂಬುದೂ ನನಗೆ ಗೊತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು. ಮುಂಡಗೋಡಿನಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ, ವೈಮಸ್ಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ...

Post
ಸನವಳ್ಳಿ ಜಲಾಶಯದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?

ಸನವಳ್ಳಿ ಜಲಾಶಯದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?

ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 24 ರಿಂದ 25 ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಏನಿಲ್ಲವೆಂದರೂ ವಾರದ ಹಿಂದೆಯೇ ಜಲಾಶಯದಲ್ಲಿ ಬಿದ್ದು ಸಾವನ್ನಪ್ಪಿರಬಹುದು ಅಂತಾ ಅಂದಾಜಿಸಲಾಗಿದೆ‌. ಇಂದು ಬೆಳಿಗ್ಗೆ ಸನವಳ್ಳಿ ಗ್ರಾಮದ ಜನ ಜಲಾಶಯಕ್ಕೆ ಬಂದಾಗ, ಶವ ತೇಲುತ್ತಿರುವ ದೃಷ್ಯ ಕಂಡಿದೆ. ಇಡೀ ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಜಲಾಶಯದಲ್ಲಿ, ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಆತ್ಮಹತ್ಯೆಯಾ..? ಅಷ್ಟಕ್ಕೂ, ಜಲಾಶಯದಲ್ಲಿ...

Post
ಮುಂಡಗೋಡ ಅಮ್ಮಾಜಿ ಕೆರೆ ಸಮೀಪ ವಿಷ ಕುಡಿದು ನಿತ್ರಾಣಗೊಂಡಿದ್ದ ಯುವಕ, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

ಮುಂಡಗೋಡ ಅಮ್ಮಾಜಿ ಕೆರೆ ಸಮೀಪ ವಿಷ ಕುಡಿದು ನಿತ್ರಾಣಗೊಂಡಿದ್ದ ಯುವಕ, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

ಮುಂಡಗೋಡ ಪಟ್ಟಣದ ಅಮ್ಮಾಜಿ ಕೆರೆ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ನಿತ್ರಾಣಗೊಂಡ ಯುವಕನೋರ್ವನ ರಕ್ಷಣೆ ಮಾಡಲಾಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಮೂಲದವನು ಅಂತಾ ಅಂದಾಜಿಸಲಾಗಿರೋ ಯುವಕನಿಗೆ ಸದ್ಯ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ನೋಂದಣಿ ಸಂಖ್ಯೆ ಹೊಂದಿರುವ ಸ್ಕೂಟಿ ಮೇಲೆ ಬಂದಿರೋ ಯುವಕ, ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಪಕ್ಕ ಬಿದ್ದು ನರಳಾಡುತ್ತಿದ್ದ. ಬಾಯಲ್ಲಿ ನೊರೆ ಬಂದು ಕೋಮಾ ಸ್ಥಿತಿಗೆ ತಲುಪಿದ್ದ ಯುವಕ ವಿಷ ಸೇವಿಸಿರಬಹುದು ಅಂತಾ ಅಂದಾಜಿಸಲಾಗಿದೆ. ಸಾರ್ವಜನಿಕರು...

Post
ಮುಂಡಗೋಡಿಗೆ ನೂತನ ಸಿಪಿಐ ಯಾರು ಗೊತ್ತಾ..? ಇವತ್ತೇ ಅಧಿಕಾರ ಸ್ವೀಕಾರ ಫಿಕ್ಸ್..!

ಮುಂಡಗೋಡಿಗೆ ನೂತನ ಸಿಪಿಐ ಯಾರು ಗೊತ್ತಾ..? ಇವತ್ತೇ ಅಧಿಕಾರ ಸ್ವೀಕಾರ ಫಿಕ್ಸ್..!

ಮುಂಡಗೋಡ ನೂತನ ಸಿಪಿಐ ಆಗಿ ರಂಗನಾಥ್ ನೀಲಮ್ಮನವರ್ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತಿಚೆಗಷ್ಟೇ ಪದೋನ್ನತಿ ಹೊಂದಿ ಇಲ್ಲಿಂದ ವರ್ಗಾವಣೆಗೊಂಡ ಬಿ.ಎಸ್.ಲೋಕಾಪುರ ಸ್ಥಾನಕ್ಕೆ ರಂಗನಾಥ್ ನೀಲಮ್ಮನವರ್ ನೇಮಕಗೊಂಡಿದ್ದಾರೆ. ಅಂದಹಾಗೆ, ಈ ಮೊದಲು ಯಲ್ಲಾಪುರ ಠಾಣೆಯಲ್ಲಿಯೂ ಕಾರ್ಯನಿರ್ವಹಿಸಿದ್ದ ನೀಲಮ್ಮನವರ್, ಕಾರವಾರದ ಸೈಬರ್ ಕ್ರೈಂ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಮುಂಡಗೋಡ ಠಾಣೆಗೆ ನಿಯುಕ್ತಿಗೊಂಡು ಆಗಮಿಸಲಿದ್ದಾರೆ. ಇವತ್ತು ಬಹುತೇಕ ಮುಂಡಗೋಡ ಠಾಣೆಗೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

error: Content is protected !!