ಮುಂಡಗೋಡ ಅಮ್ಮಾಜಿ ಕೆರೆ ಸಮೀಪ ವಿಷ ಕುಡಿದು ನಿತ್ರಾಣಗೊಂಡಿದ್ದ ಯುವಕ, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

ಮುಂಡಗೋಡ ಪಟ್ಟಣದ ಅಮ್ಮಾಜಿ ಕೆರೆ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ನಿತ್ರಾಣಗೊಂಡ ಯುವಕನೋರ್ವನ ರಕ್ಷಣೆ ಮಾಡಲಾಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಮೂಲದವನು ಅಂತಾ ಅಂದಾಜಿಸಲಾಗಿರೋ ಯುವಕನಿಗೆ ಸದ್ಯ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವೇರಿ ನೋಂದಣಿ ಸಂಖ್ಯೆ ಹೊಂದಿರುವ ಸ್ಕೂಟಿ ಮೇಲೆ ಬಂದಿರೋ ಯುವಕ, ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಪಕ್ಕ ಬಿದ್ದು ನರಳಾಡುತ್ತಿದ್ದ. ಬಾಯಲ್ಲಿ ನೊರೆ ಬಂದು ಕೋಮಾ ಸ್ಥಿತಿಗೆ ತಲುಪಿದ್ದ ಯುವಕ ವಿಷ ಸೇವಿಸಿರಬಹುದು ಅಂತಾ ಅಂದಾಜಿಸಲಾಗಿದೆ. ಸಾರ್ವಜನಿಕರು ತಕ್ಷಣವೇ ವಾಹನದ ಮೂಲಕ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!