ಶಿವರಾಮ್ ಹೆಬ್ಬಾರ್ ಅಸಲಿ ಆಟ ಶುರು, ಕಾಂಗ್ರೆಸ್ ಸೇರಲ್ವಂತೆ ಸಾಹೇಬ್ರು..!

ಇದು ನಿಜಕ್ಕೂ ಮುಂಡಗೋಡ ಯಲ್ಲಾಪುರ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾದ ಸುದ್ದಿ. ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸದ್ಯ ಕಾಂಗ್ರೆಸ್ ಸೇರೋದಿಲ್ಲ‌. ಬದಲಾಗಿ, ಹೆಬ್ಬಾರ್ ರವರ ಸುಪುತ್ರ ವಿವೇಕ್ ಹೆಬ್ಬಾರ್ ಇನ್ನೇನು ಕೆಲವೇ ದಿನಗಳಲ್ಲಿ ಕೈ ಹಿಡಿಯಲಿದ್ದಾರೆ ಅನ್ನೋದು ಕನ್ಪರ್ಮ್ ಆಗ್ತಿದೆ. ಈ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಅಕ್ಷರಶಃ ತಟಸ್ತರಾಗಿ ಕಮಲ ಪಾಳಯಕ್ಕೆ ಡಿಚ್ಚಿ ಕೊಡುವ ಎಲ್ಲಾ ತಯಾರಿ ಮಾಡಿಕೊಂಡಿದ್ದಾರಂತೆ ಹೆಬ್ಬಾರ್ ಸಾಹೇಬ್ರು..!

ಹಳ್ಳಿ ಹಳ್ಳಿಗಳಲ್ಲೂ ಸಭೆ..!
ಇಂತಹದ್ದೊಂದು ಕಾರ್ಯತಂತ್ರ ರೂಪಿಸಿಕೊಂಡಿರೋ ಶಿವರಾಮ್ ಹೆಬ್ಬಾರ್, ಸದ್ಯ ಇಡೀ ಯಲ್ಲಾಪುರ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡ್ತಿದಾರೆ. ಜೊತೆಗೆ ತಮ್ಮ ಸುಪುತ್ರ ವಿವೇಕ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಚರ್ಚಿಸಿ, ತಮ್ಮ ಬೆಂಬಲಿಗರನ್ನು ಮಗನ ಜೊತೆ ಕಾಂಗ್ರೆಸ್ ಸೇರಲು ಸೂಚನೆ ನೀಡ್ತಿದಾರೆ ಅನ್ನೋ ಮಾಹಿತಿ ಬರ್ತಿದೆ. ಈ ಸಂಬಂಧ ಮುಂಡಗೋಡ ತಾಲೂಕಿನಲ್ಲೂ ಕಳೆದ ಹಲವು ದಿನಗಳಿಂದ ಕಾರ್ಯಕರ್ತರ ಸಭೆ ನಡೆಸ್ತಿದಾರೆ. ಇದ್ರಲ್ಲಿ ಈಗಾಗಲೇ ಬಹುತೇಕರು ಹೆಬ್ಬಾರ್ ರ ಕಾರ್ಯತಂತ್ರಕ್ಕೆ ಜೈ ಅಂದಿದ್ದಾರೆ‌.

ಶಾಸಕ ಸ್ಥಾನಕ್ಕಾಗಿ..!
ಯಸ್, ಶಾಸಕ ಶಿವರಾಮ್ ಹೆಬ್ಬಾರ್ ಸದ್ಯ ಬಿಜೆಪಿಯ ಶಾಸಕ ಅಷ್ಟೆ, ಆದ್ರೆ ಅವ್ರ ತನು, ಮನ ಎಲ್ಲವೂ ಕಾಂಗ್ರೆಸ್ ನಲ್ಲಿ ಗಟ್ಟಿಗೊಂಡಿದೆ. ತಮ್ಮ ಮೇಲೆ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಂಡು ಉಚ್ಚಾಟನೆ ಮಾಡಿದ್ರೆ ಮಾಡಲಿ ಅನ್ನೋ ದಿಟ್ಟ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಹೆಬ್ಬಾರರಿಗೆ ಮನಸಿಲ್ಲ. ಒಂದುವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ರೆ, ಮತ್ತೆ ಅನವಶ್ಯಕವಾಗಿ ಚುನಾವಣೆ ಎದುರಿಸೋದು ಹೆಬ್ಬಾರ್ ಬಳಗಕ್ಕೆ ಇಷ್ಟವಿಲ್ಲ. ಹೀಗಾಗಿ, ಮುಂಬರುವ ವಿಧಾನಸಭಾ ಚುನಾವಣೆವರೆಗೂ ರಾಜೀನಾಮೆ ನೀಡದೆ ಮುಂದುವರಿಯೋ ಯೋಚನೆಯಲ್ಲಿದ್ದಾರೆ. ಮುಂದಿನ ಚುನಾವಣೆ ಹೊತ್ತಿಗೆ ಇನ್ನೇನು ಚುನಾವಣೆ ಘೋಷಣೆ ಆಗತ್ತೆ ಅನ್ನೊ ಟೈಮಲ್ಲಿ ರಾಜೀನಾಮೆ ನೀಡಿ ಕಾಂಗ್ರೆಸ್ ಅಭ್ಯರ್ಥಿಯಾಗೋ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದ್ಯ ತಮ್ಮ ಸುಪುತ್ರ ಮಾತ್ರ ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ.

ಅಪಾರ ಬೆಂಬಲ..!
ಹಾಗೆ ನೋಡಿದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಅದೇನೇ ತೀರ್ಮಾನ ತೆಗೆದುಕೊಂಡ್ರೂ, ಬಹುತೇಕ ಕಾರ್ಯಕರ್ತರು ಅವ್ರನ ಹಿಂಬಾಲಿಸೋದು ಪಕ್ಕಾ‌. ಹೀಗಾಗಿನೇ, ಸದ್ಯ ಮತ್ತೊಮ್ಮೆ ಇಡೀ ಕ್ಷೇತ್ರದ ಕಾರ್ಯಕರ್ತರನ್ನು ಒಗ್ಗೂಡಿಸಲು ಹೆಬ್ಬಾರ್ ಸಾಹೇಬ್ರು ಹಳ್ಳಿ, ಹಳ್ಳಿಗಳಲ್ಲೂ ಕಾರ್ಯಕರ್ತರ ಸಭೆ ನಡಸಿ ಚರ್ಚೆ ನಡೆಸಿದ್ದಾರೆ.

ಒಟ್ಮಲ್ಲಿ, ಶಿವರಾಮ್ ಹೆಬ್ಬಾರ್ ಸುಪುತ್ರ ಸದ್ಯದಲ್ಲೇ ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆ ಇದ್ದು, ಅಪಾರ ಬೆಂಬಲಿಗರು ಅವ್ರೊಂದಿಗೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ಖಚಿತ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬರಪೂರ ಮತಗಳು ಬೀಳೋದಂತೂ ಪಕ್ಕಾ.. ಇದ್ರೊಂದಿಗೆ ಕ್ಷೇತ್ರದ ಬಿಜೆಪಿಗೆ ಭಾರೀ ಹೊಡೆತ ನೀಡಲಿದೆ ಹೆಬ್ಬಾರ್ ಟೀಂ..

error: Content is protected !!