ಮುಂಡಗೋಡ: ಬಿಜೆಪಿಯೊಂದಿಗೆ ಮೈತ್ರಿ ಹಿನ್ನೆಲೆಯಲ್ಲಿ JDS ವಿರುದ್ಧ ಉತ್ತರ ಕನ್ನಡದ ಬಹುತೇಕ ಅಲ್ಪಸಂಖ್ಯಾತ ಮುಖಂಡರು ಆಕ್ರೋಶಗೊಂಡಿದ್ದಾರೆ. ಜಾತ್ಯಾತೀತ ಜನತಾದಳದಲ್ಲಿದ್ದ ಹಲವು ಮುಖಂಡರು ಹೆಚ್ ಡಿಕೆ ವಿರುದ್ಧ ತಿರುಗಿ ಬಿದ್ದಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮುಂಡಗೋಡಿನಲ್ಲಿ ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಮುನಾಫ್ ಮಿರ್ಜಾನಕರ್, ಕುಮಾರಸ್ವಾಮಿಯವರ ಜೊತೆ ನಾವೇಲ್ಲ ನಿಕಟ ಸಂಪರ್ಕ ಹೊಂದಿದ್ದೇವು, ಅಲ್ಪಸಂಖ್ಯಾತರು ಜೆಡಿಎಸ್ ಜೊತೆ ಪಕ್ಷಕ್ಕಾಗಿ ದುಡಿದಿದ್ದೇವು. ಆದ್ರೆ, ನಮಗೆ ಹೇಳದೇ ಕೇಳದೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ನಮಗೆ ಬೇಸರ ತರಿಸಿದೆ. ಹೀಗಾಗಿ, ನಾವೇಲ್ಲ ಅಲ್ಪಸಂಖ್ಯಾತ ಜಿಲ್ಲಾ ಹಾಗೂ ತಾಲೂಕು ಮುಖಂಡರು ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ ಅಂತಾ ತಿಳಿಸಿದ್ರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇವೆ ಅಂತಾ ತಿಳಿಸಿದ್ರು.