ಮುಂಡಗೋಡ ನೂತನ ಸಿಪಿಐ ಆಗಿ ರಂಗನಾಥ್ ನೀಲಮ್ಮನವರ್ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತಿಚೆಗಷ್ಟೇ ಪದೋನ್ನತಿ ಹೊಂದಿ ಇಲ್ಲಿಂದ ವರ್ಗಾವಣೆಗೊಂಡ ಬಿ.ಎಸ್.ಲೋಕಾಪುರ ಸ್ಥಾನಕ್ಕೆ ರಂಗನಾಥ್ ನೀಲಮ್ಮನವರ್ ನೇಮಕಗೊಂಡಿದ್ದಾರೆ.

ಅಂದಹಾಗೆ, ಈ ಮೊದಲು ಯಲ್ಲಾಪುರ ಠಾಣೆಯಲ್ಲಿಯೂ ಕಾರ್ಯನಿರ್ವಹಿಸಿದ್ದ ನೀಲಮ್ಮನವರ್, ಕಾರವಾರದ ಸೈಬರ್ ಕ್ರೈಂ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಮುಂಡಗೋಡ ಠಾಣೆಗೆ ನಿಯುಕ್ತಿಗೊಂಡು ಆಗಮಿಸಲಿದ್ದಾರೆ. ಇವತ್ತು ಬಹುತೇಕ ಮುಂಡಗೋಡ ಠಾಣೆಗೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

error: Content is protected !!