Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಅಕ್ರಮ ಮದ್ಯ ಕುಡಿಯಲು ಅವಕಾಶ, ಚಹಾ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ..!

ಅಕ್ರಮ ಮದ್ಯ ಕುಡಿಯಲು ಅವಕಾಶ, ಚಹಾ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ನ್ಯಾಸರ್ಗಿ ಕ್ರಾಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ, ತನ್ನ ಅಂಗಡಿಯಲ್ಲೆ ಮದ್ಯ ಕುಡಿಯಲು ಅನುವು ಮಾಡಿಕೊಟ್ಟು ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಚಣಕಿ ಗ್ರಾಮದ ನಾಗರಾಜ್ ದೊಡ್ಡ ಹನ್ಮಂತಪ್ಪ ವಡ್ಡರ ಎಂಬುವವನೇ ಆರೋಪಿಯಾಗಿದ್ದಾನೆ.. ಈತ ತನ್ನ ಚಹಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ, ಅಲ್ಲದೇ ಅಲ್ಲಿಯೇ ಮಧ್ಯ ಕುಡಿಯಲು ಜನರಿಗೆ ಅವಕಾಶ ನೀಡುತ್ತಿದ್ದ. ಹೀಗಾಗಿ ಮುಂಡಗೋಡ ಕ್ರೈಂ ಪಿಎಸ್...

Post
ಇಂದೂರು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ: CCTV ಕ್ಯಾಮೆರಾ ಕದ್ದೊಯ್ದ ಕಳ್ಳರು..!

ಇಂದೂರು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ: CCTV ಕ್ಯಾಮೆರಾ ಕದ್ದೊಯ್ದ ಕಳ್ಳರು..!

ಮುಂಡಗೋಡ: ತಾಲೂಕಿನ ಇಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಇಂದೂರು ಗ್ರಾಮವನ್ನು ವಿಶೇಷ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಇದೇ ಸಮಯವನ್ನೇ ಉಪಯೋಗಿಸಿಕೊಂಡಿರೋ ಕಳ್ಳರು, ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.. ಅಂದಹಾಗೆ, ಶಾಲೆಯ ವರಾಂಡದಲ್ಲಿ ಹಾಕಲಾಗಿದ್ದ ಎರಡು CCTV ಕ್ಯಾಮೆರಾಗಳನ್ನು ಕಿತ್ತೊಯ್ದಿರೋ ಕಳ್ಳರು, ಶಾಲೆಯ 5 ಕೊಠಡಿಗಳ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ, ಅಲ್ದೆ ಬಾತ್ ರೂಮಿನ ಬೀಗವನ್ನೂ ಮುರಿದಿದ್ದಾರೆ. ಆದ್ರೆ...

Post
ಮುಂಡಗೋಡಿನಲ್ಲಿ ಆನ್ಲೈನ್ ವಂಚನೆ: RFO ಗೆ 72 ಸಾವಿರ ರೂ. ಪಂಗನಾಮ..!!

ಮುಂಡಗೋಡಿನಲ್ಲಿ ಆನ್ಲೈನ್ ವಂಚನೆ: RFO ಗೆ 72 ಸಾವಿರ ರೂ. ಪಂಗನಾಮ..!!

ಮುಂಡಗೋಡ: ಪಟ್ಟಣದ ವಲಯ ಅರಣ್ಯಾಧಿಕಾರಿ ಪರಮೇಶ್ವರ ದಾಸಪ್ಪ ಎಂಬುವವರಿಗೆ BSNL ಸಿಮ್ ಬ್ಲಾಕ್ ಆಗತ್ತೆ ಅಂತಾ ಸಂದೇಶ ಕಳುಹಿಸಿ, ಆನ್ಲೈನ್ ಖದೀಮರು ಬರೋಬ್ಬರಿ 72 ಸಾವಿರ ರೂಪಾಯಿ ವಂಚಿಸಿರೋ ಘಟನೆ ನಡೆದಿದೆ. ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಕುರಿತು ವಲಯ ಅರಣ್ಯಾಧಿಕಾರಿ, ಪರಮೇಶ್ವರ ದಾಸಪ್ಪ ದೂರು ದಾಖಲಿಸಿದ್ದಾರೆ.. ಹಿಂದಿ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದ ವ್ಯಕ್ತಿ ಸದ್ಯದಲ್ಲಿಯೇ ನಿಮ್ಮ ಸಿಮ್ ಬ್ಲಾಕ್ ಆಗತ್ತೆ ಹೀಗಾಗಿ ಅಪಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ನಂತ್ರ ಕ್ವಿಕ್ ಆ್ಯಪ್ ಡೌನ್ ಲೋಡ್ ಮಾಡಿಸಿ...

Post

ಮುಂಡಗೋಡ ಪೊಲೀಸರ ಮಿಂಚಿನ ಕಾರ್ಯ; ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಟೊ ಹಾಕಿದ್ದವ ಅಂದರ್

ಮುಂಡಗೋಡ- ತಾಲೂಕಿನ ಯುವತಿಯೋರ್ವಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಬರೆದು, ಅಶ್ಲೀಲ ವಿಡಿಯೋ, ಪೋಟೋಗಳನ್ನು ಹರಿಬಿಟ್ಟ ಬೆಂಗಳೂರಿನ ಯುವಕನನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.. ದಿನಾಂಕ 14-12-2020 ರಂದು ಮುಂಡಗೋಡ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದ ಯುವತಿಯೋರ್ವಳು, ಯಾರೋ ಒಬ್ಬ ವ್ಯಕ್ತಿ ತನ್ನ ಬಗ್ಗೆ ಅಶ್ಲೀಲ ವಿಡಿಯೋ ಹಾಗೂ ಪೋಟೊಗಳನ್ನು ಫೇಸ್ ಬುಕ್, ವಾಟ್ಸ್ ಅಪ್, ಇನ್ ಸ್ಟ್ರಾಗ್ರಾಂ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.. ಇದ್ರಿಂದ ನನಗೆ ಹಾಗೂ ನನ್ನ ಕುಟುಂಬದ ತೇಜೋವಧೆಯಾಗುತ್ತಿದೆ.. ಹೀಗಾಗಿ, ಕ್ರಮ ಕೈಗೊಳ್ಳಿ ಅಂತಾ ದೂರಿನಲ್ಲಿ...

Post

ಯುವತಿ ನಾಪತ್ತೆ ದೂರು; ಅಗಡಿ ಗ್ರಾಮದ ಯುವಕನೂ ನಾಪತ್ತೆ

ಮುಂಡಗೋಡ: ಪಟ್ಟಣದ ಕಿಲ್ಲೇ ಓಣಿಯಲ್ಲಿನ ಯುವತಿಯೋರ್ವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿ ಕಾಣೆಯಾದ ಬಗ್ಗೆ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಪರವೀನಬಾನು ಫಕೀರ(20) ಎಂದು ತಿಳಿದು ಬಂದಿದ್ದು ಈಕೆಯು ಡಿ.4 ರಂದು ಮಧ್ಯಾಹ್ನ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವಳು ಈ ವರೆಗೂ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ. ತಾಲೂಕಿನ ಅಗಡಿ ಗ್ರಾಮದ ಯುವಕ ಶಾರೂಖ್ ಪಠಾಣ ಎಂಬುವನು ಕಾಣುತ್ತಿಲ್ಲ ಆತನೊಂದಿಗೆ ಹೋಗಿರಬಹುದೆಂಬ ಸಂಶಯವಿದೆ ತಮ್ಮ ಸಹೋದರಿಯನ್ನು ಹುಡಿಕಿ...

Post

ಗುಂಜಾವತಿ ಬಳಿ ಕಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಗಂಭೀರ

ಮುಂಡಗೋಡ: ಕಾರಿಗೆ ಮೋಟರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರನನ್ನು ಮೈನಳ್ಳಿ ಗ್ರಾಮದ ಸಣ್ಯಾ ಸಿದ್ದಿ ಎಂದು ತಿಳಿದು ಬಂದಿದೆ. ಈತನು ಮುಂಡಗೋಡ ಕಡೆಯಿಂದ ಹೋಗುತ್ತಿರುವಾಗ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಯಲ್ಲಾಪೂರದಿಂದ ಮುಂಡಗೋಡ ಕಡೆಗೆ ಬರುತ್ತಿರುವ ಕಾರಿಗೆ ಡಿಕ್ಕಿ ಹೊಡೆದು ಸ್ವಯಂಕೃತ ಅಪಘಾತ ಪಡಿಸಿಕೊಂಡು ಹಣೆ, ತಲೆಗೆ, ಕಾಲು ಹಾಗೂ ಗದ್ದಕ್ಕೆ ಗಾಯಪಡಿಸಿಕೊಂಡಿದ್ದಾನೆಂದು ಮುಂಡಗೋಡ ಠಾಣೆಯಲ್ಲಿ ನೀಡಿದ...

Post

ಗೋ ಕಳ್ಳರಿಗೆ ನೆರವು; ಬಜರಂಗದಳ ಮಾಜಿ ಸಂಚಾಲಕ ಆರೆಸ್ಟ್

ಕಾರ್ಕಳ: ಗೋ ಕಳ್ಳರಿಗೆ ನೆರವಾಗುತ್ತಿದ್ದ ಕಾರ್ಕಳ ನಗರದ ಬಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭುನನ್ನ ಪೊಲೀಸರು ಬಂಧಿಸಿದ್ದಾರೆ. ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ಎಂಬಾತನನ್ನು ಕಳವುಗೈದ ಹಸುಗಳನ್ನು ವಧಿಸಿ ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ದನಗಳನ್ನು ಕಳವು ಮಾಡಿ ವಧಿಸಿ ಮಾಂಸ ಮಾರಾಟ ಜಾಲದವರಿಗೆ ಅಭಯವಾಗಿದ್ದ ಅನಿಲ್ ಪ್ರಭು, ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ ಅವರಿಂದ ಪಾಲು ಪಡೆಯುತ್ತಿದ್ದನೆಂದು...

Post

ಅನಾಥ ಬುದ್ದಿಮಾಂದ್ಯೆಯ ಮೇಲೆ ಅತ್ಯಾಚಾರ; ಅನ್ನ ಕೊಡುವ ನೆಪದಲ್ಲಿ ವಿಕೃತಿ ಮೆರೆದ ಯುವಕ ಆರೆಸ್ಟ್

ಹಾವೇರಿ- ಹಾವೇರಿಯಲ್ಲೊಂದು ಹೀನ ಕೃತ್ಯ ನಡೆದಿದೆ..ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಓರ್ವ ಪಾಪಿ ಯುವಕ ಅತ್ಯಾಚಾರ ಎಸಗಿದ್ದಾನೆ.. ಡಿಸೆಂಬರ್ 7 ರ ಮಧ್ಯರಾತ್ರಿ, ಹಾವೇರಿಯ ಎಪಿಎಂಸಿ ಬಳಿಯ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಮಲಗಿದ್ದ ಸುಮಾರು 40-45 ವರ್ಷ ಪ್ರಾಯದ ಬುದ್ದಿಮಾಂದ್ಯೆಗೆ, 24 ವರ್ಷದ ತಸ್ಲೀಮ್ ಸೆರವಾಡ್ ಎಂಬ ಆರೋಪಿ ಊಟ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ.. ಈತನ ಕುಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.. ಇನ್ನು, ಸಿಸಿಟಿವಿ ದೃಶ್ಯ ನೋಡಿದ ಕಟ್ಟಡದ ಮಾಲೀಕ ನವೀನ್ ಕುಮಾರ್ ತೋಟಣ್ಣನವರ್ ಪೋಲಿಸರಿಗೆ ದೂರು...

Post
ಭೀಮಾತೀರದ ಸಾಹುಕಾರನ ಮೇಲೆ ಫೈರಿಂಗ್ ಕೇಸ್; ಕಿಂಗ್ ಪಿನ್ ಮಡುಸ್ವಾಮಿ ಆರೆಸ್ಟ್

ಭೀಮಾತೀರದ ಸಾಹುಕಾರನ ಮೇಲೆ ಫೈರಿಂಗ್ ಕೇಸ್; ಕಿಂಗ್ ಪಿನ್ ಮಡುಸ್ವಾಮಿ ಆರೆಸ್ಟ್

ವಿಜಯಪುರ- ಭೀಮಾತೀರದ ಸಾಹುಕಾರ್ ಮಹದೇವ್ ಬೈರಗೊಂಡ ಮೇಲೆ ನಡೆದ ಫೈರಿಂಗ್ ಕೇಸ್ ನ ಪ್ರಮುಖ ಆರೋಪಿ ಅಂದರ್ ಆಗಿದ್ದಾನೆ.. ಕಳೆದ ಒಂದು ತಿಂಗಳಿಂದ ಫೈರಿಂಗ್ ಕೇಸ್ ಬೆನ್ನತ್ತಿದ್ದ ವಿಜಯಪುರ ಪೊಲೀಸ್ರಿಗೆ ಅಸಲೀ ಆರೋಪಿಯ ಜಾಡು ಬೇಧಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ.. ಹಾಗಾದ್ರೆ ಮಹದೇವ್ ಸಾಹುಕಾರನ ಮೇಲೆ ಸಾವಿನ ಗುರಿಯಿಟ್ಟ ಆ ಹಂತಕರ ನಾಯಕ ಯಾರು..? ಅವತ್ತು ನವೆಂಬರ್ 2 ಮಟ ಮಟ ಮದ್ಯಾಹ್ನ ಭೀಮಾತೀರದ ಮಹದೇವ ಸಾಹುಕಾರನ ಮೇಲೆ ಡೆಡ್ಲಿ ಅಟ್ಯಾಕ್ ಒಂದು ನಡೆದಿತ್ತು.. ಥೇಟು ಸಿನಿಮಾ...

Post

ಉತ್ತರ ಕನ್ನಡ ಇಬ್ಬರು ಕಳ್ಳರ ಬಂಧನ

  ಕುಮಟಾ ಹಾಗೂ ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 14 ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದರಿಂದ ಶೀಘ್ರವೇ ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಒಂದು ತಂಡವನ್ನು ರಚಿಸಿದ್ದರು. ಈ ತಂಡ ಆರೋಪಿಗಳಾದ ಚಂದಾವರದ ಸಜ್ಜಾದ ಅಹ್ಮದ್ ಹಾಗೂ ಮುಬಾಸೀರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೊನ್ನಾವರ ಪೊಲೀಸ್ ಠಾಣೆಯ 11 ಪ್ರಕರಣಗಳು ಹಾಗೂ ಕುಮಟಾ ಠಾಣೆಯ...

error: Content is protected !!