ಭೀಮಾತೀರದ ಸಾಹುಕಾರನ ಮೇಲೆ ಫೈರಿಂಗ್ ಕೇಸ್; ಕಿಂಗ್ ಪಿನ್ ಮಡುಸ್ವಾಮಿ ಆರೆಸ್ಟ್

ವಿಜಯಪುರ- ಭೀಮಾತೀರದ ಸಾಹುಕಾರ್ ಮಹದೇವ್ ಬೈರಗೊಂಡ ಮೇಲೆ ನಡೆದ ಫೈರಿಂಗ್ ಕೇಸ್ ನ ಪ್ರಮುಖ ಆರೋಪಿ ಅಂದರ್ ಆಗಿದ್ದಾನೆ.. ಕಳೆದ ಒಂದು ತಿಂಗಳಿಂದ ಫೈರಿಂಗ್ ಕೇಸ್ ಬೆನ್ನತ್ತಿದ್ದ ವಿಜಯಪುರ ಪೊಲೀಸ್ರಿಗೆ ಅಸಲೀ ಆರೋಪಿಯ ಜಾಡು ಬೇಧಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ.. ಹಾಗಾದ್ರೆ ಮಹದೇವ್ ಸಾಹುಕಾರನ ಮೇಲೆ ಸಾವಿನ ಗುರಿಯಿಟ್ಟ ಆ ಹಂತಕರ ನಾಯಕ ಯಾರು..?


ಅವತ್ತು ನವೆಂಬರ್ 2 ಮಟ ಮಟ ಮದ್ಯಾಹ್ನ ಭೀಮಾತೀರದ ಮಹದೇವ ಸಾಹುಕಾರನ ಮೇಲೆ ಡೆಡ್ಲಿ ಅಟ್ಯಾಕ್ ಒಂದು ನಡೆದಿತ್ತು.. ಥೇಟು ಸಿನಿಮಾ ಸ್ಟೈಲ್ ನಲ್ಲೇ ನಡೆದಿದ್ದ ಆ ಅಟ್ಯಾಕ್ ನಲ್ಲಿ ಇಬ್ರು ಪ್ರಣ ಬಿಟ್ಟಿದ್ರು.. ಮಹದೇವ ಸಾಹುಕಾರನ ಮೇಲೆ ಹಾರಿದ್ದ ಗುಂಡುಗಳು ಮಹದೇವ ಸಾಹುಕಾರನ ಬದಲಿಗೆ ಇಬ್ಬರ ಜೀವ ತೆಗೆದಿದ್ವು.. ಆದ್ರೆ ಮಹದೇವ ಸಾಹುಕಾರ್ ಮಾತ್ರ ಗುಂಡು ತಾಗಿದ್ರು ಬಚಾವ್ ಆಗಿದ್ದ.. ಸದ್ಯ ಚಿಕಿತ್ಸೆ ಪಡಿತಿರೋ ಸಾಹುಕಾರ ಕೆಲವೇ ದಿನದಲ್ಲಿ ಡಿಶ್ಚಾರ್ಜ್ ಕೂಡ ಆಗ್ತಿದಾನೆ.. ಆದ್ರೆ ಅವತ್ತು ಅಂತಹದ್ದೊಂದು ಡೆಡ್ಲಿಯಸ್ಟ್ ಅಟ್ಯಾಕ್ ಹಿಂದೆ ಇದ್ದಿದ್ದ ಒಳಸುಳಿಯನ್ನ ಹೆಕ್ಕಿ ತೆಗಿಯೊಕೆ ಇಲ್ಲಿನ ಪೊಲೀಸ್ರಿಗೆ ಅಷ್ಟೊಂದು ಕಷ್ಟ ಆಗಲೇ ಇಲ್ಲ.. ಯಾಕಂದ್ರೆ ಅವತ್ತಿನ ಅಟ್ಯಾಕ್ ಹಿಂದೆ ಇದ್ದದ್ದು ಮತ್ತದೇ ಎರಡು ಕುಟುಂಬಗಳ ಜಿದ್ದು, ಧ್ವೇಷ.. ಇಲ್ಲಿ ಹಂತಕ ಧರ್ಮರಾಜ್ ಚಡಚಣನ ಧ್ವೇಷದ ಕಿಚ್ಚು ಮಹದೇವ ಸಾಹುಕಾರನ ಹತ್ಯೆಯ ಸಂಚು ರೂಪಿಸಿತ್ತು ಅನ್ನೋದು ಇಡೀ ಜಿಲ್ಲೆಗೇ ಗೊತ್ತಾಗಿತ್ತು.. ಭೀಮಾತೀರದ ನಟೋರಿಯಸ್ ವೃತ್ತಾಂತದಲ್ಲಿ ಇಂತಹದ್ದೊಂದು ಅಟ್ಯಾಕ್ ಮತ್ತೊಂದು ರಕ್ತ ಚರಿತ್ರೆಗೆ ನಾಂದಿ ಹಾಡಿತ್ತು..
ಅಸಲು ಅವತ್ತು ನಡೆದಿದ್ದ ಗುಂಡಿನ ದಾಳಿಯ ಹಂತಕರನ್ನ ಹೆಡೆಮುರಿ ಕಟ್ಟುವಲ್ಲಿ ವಿಜಯಪುರ ಪೊಲೀಸ್ರು ಟೊಂಕ ಕಟ್ಟಿ ನಿಂತಿದ್ರು.. ಕೇಸ್ ನಲ್ಲಿ ಭಾಗಿಯಾಗಿ ಕೈಯಲ್ಲಿ ಗನ್ ಮಚ್ಚು ಲಾಂಗು ಹಿಡಿದಿದ್ದ ಬರೋಬ್ಬರಿ ಮೂವತ್ತು ಜನ ಆರೋಪಿಗಳನ್ನ ಎಳೆದು ತಂದಿದ್ರು.. ಆದ್ರೆ ಅವನೊಬ್ಬ ಮಾತ್ರ ಇನ್ನೂ ಸಿಕ್ಕಿರಲೇ ಇಲ್ಲ.. ಕೇಸ್ ನ ಕಿಂಗ್ ಪಿನ್ ಆಗಿ, ಹತ್ಯೆಯ ಸಂಚಿನ ಸೂತ್ರದಾರನಾಗಿದ್ದ ಆತನ ಪೊಲೀಸ್ರಿಗೂ ಚಳ್ಳೆಹಣ್ಣು ತಿನ್ನಿಸಿ ಭೂಗತನಾಗಿದ್ದ.. ಆದ್ರೆ ಖಾಕಿಗಳ ಕಣ್ಣಿನಿಂದ ಬಚಾವಾಗಲು ಆತನಿಗೆ ಸಾಧ್ಯವಾಗಲೇ ಇಲ್ಲ.. ಹೀಗಾಗಿ ಇಂದು ಆತ ಪೊಲೀಸ್ರ ಬಲೆಗೆ ಬಿದ್ದಿದ್ದಾ‌ನೆ.. ಅಂದಹಾಗೆ ಆತನ ಹೆಸ್ರು ಮಡಿವಾಳ ಸ್ವಾಮಿ ಹಿರೇಮಠ್ ಅಲಿಯಾಸ್ ಮಡುಸ್ವಾಮಿ…

ಮಡುಸ್ವಾಮಿ, ಈತ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣನ ಕಟ್ಟಾ ಬೆಂಬಲಿಗ.. ಇಂತಹದ್ದೊಂದು ಡೆಡ್ಲಿ ಸ್ಕೆಚ್ ಹಾಕಿದ್ದು ಈತನೇ.. ಕಳೆದ ಜನೆವರಿಯಿಂದ್ಲೇ ಮಹದೇವ್ ಸಾಹುಕಾರನನ್ನ ಹೇಗಾದ್ರೂ ಸರಿ ಮುಗಿಸ್ಲೇ ಬೇಕು ಅಂತಾ ಪ್ಲಾನ್ ರೆಡಿ ಮಾಡ್ಕೊಂಡಿದ್ದ ಈತ.. ಅದಕ್ಕಾಗೇ DMC ಅನ್ನೋ ಹೆಸರಲ್ಲಿ ಒಂದು ಗ್ರೂಪ್ ಕಟ್ಟಿಕೊಂಡಿದ್ದ.. DMC ಅಂದ್ರೆ ಧರ್ಮರಾಜ್ ಮಲ್ಲಿಕಾರ್ಜುನ ಚಡಚಣ ಅಂತಾ.. ಆದ್ರೆ ಇಂತಹದ್ದೊಂದು ಡೆಡ್ಲಿ ಪ್ಲ್ಯಾನ್ ಮಾತ್ರ ಅಕ್ಷರಶಃ ಗಟ್ಟಿರೂಪ ತಾಳಿದ್ದು ಅಕ್ಟೋಬರ್ 30 ರಂದು.. ಅವತ್ತು ಧರ್ಮರಾಜ್ ಚಡಚಣನ ಪುಣ್ಯತಿಥಿಯಂದೇ ಮಹಾದೇವ ಸಾಹುಕಾರನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು.. ಧರ್ಮರಾಜನ ಹತ್ತು ವರ್ಷದ ಸಹಚರ ಮಡಿವಾಳ ಸ್ವಾಮಿ ಹಿರೇಮಠ ಅಲಿಯಾಸ್ ಮಡಿಸ್ವಾಮಿ ಇಂತಹದ್ದೊಂದು ಡೆಡ್ಲಿ ಅಟ್ಯಾಕ್ ನ ಉಸ್ತುವಾರಿ ವಹಿಸಿಕೊಂಡು ಅವತ್ತೇ ಮುಹೂರ್ಥ ಫಿಕ್ಸ್ ಮಾಡಿದ್ದ..
ಅಸಲು ಡಿಎಂಸಿ ಅನ್ನೋ ಗ್ರೂಪ್ ಕಟ್ಟಿಕೊಂಡಿದ್ದ ಧರ್ಮರಾಜನ ಕೆಲವೇ ಕೆಲವು ಕಟ್ಟಾ ಬೆಂಬಲಿಗರು ಆ ಗ್ರೂಪ್ ಗೆ ಹೊಸ ಹೊಸ ಬಿಸಿ ರಕ್ತದ ಹುಡುಗರನ್ನ ಸೇರಿಸಿಕೊಂಡು ಕ್ರೈಂ ನ ಇಂಚಿಂಚೂ ಪಾಠಗಳನ್ನ ಮಾಡ್ತಿದ್ರು.. ಕ್ರೈಂ ಮೂಲಕವೇ ಡಾನ್ ಆದ್ರೆ ಹಣ ಮಾಡಬಹುದು ಅಂತಾ ಹುಂಬತನದಲ್ಲಿ ಕೆಲವ್ರು ಇದ್ರೆ.. ಇನ್ನೂ ಕೆಲ ಯುವಕರು ಶೋಕಿಗಾಗಿ ಈ ಫಿಲ್ಡ್ ಗೆ ಎಂಟ್ರಿ ಕೊಟ್ಟಿದ್ದರು.‌. ಇಂತವರನ್ನೇ ಮುಂದಿಟ್ಟುಕೊಂಡು ಪಕ್ಕಾ ಪ್ಲಾನ್ ಮಾಡಿದ್ದ ಹಂತಕರ ಕಿಂಗ್ ಪಿನ್ ಮಡಿವಾಳ ಸ್ವಾಮಿ, ಮಹದೇವ್ ಸಾಹುಕಾರನನ್ನ ಮುಗಿಸಲು ಪ್ಲಾನ್ ರೆಡಿ ಮಾಡಿದ್ದ.. ಅದಕ್ಕೆ ಬೇಕಾಗಿದ್ದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದ.. ನವೆಂಬರ್ ಎರಡನೆ ತಾರೀಕು ಮದ್ಯಾಹ್ನ ಮಹದೇವ ಸಾಹುಕಾರನ ಮೇಲೆ ಗುಂಡಿನ ದಾಳಿ ಮಾಡಿಸಿದ್ದ ಅಂತಾ ಪೊಲೀಸ್ರು ಹೇಳ್ತಿದಾರೆ..

ಇನ್ನು, ಇಡೀ ಭೀಮಾತೀರವನ್ನೇ ಬೆಚ್ಚಿಬೀಳಿಸಿದ್ದ ಈ ಡೆಡ್ಲಿ ಫೈರಿಂಗ್ ಕೇಸ್, ಎರಡು ಕುಟುಂಬಗಳ ದುಶ್ಮನಿಯಲ್ಲಿ ನಡೆದಿದೆ ಅನ್ನೋದು ಎಷ್ಟು ಸತ್ಯವೋ, ಈ ಗುಂಡಿನ ದಾಳಿಯಲ್ಲಿ ಭಾಗವಹಿಸಿದ್ದು ಮಾತ್ರ ಬಿಸಿ ರಕ್ತದ ಎಳೆವಯಸ್ಸಿನ ಹುಡುಗ್ರು ಅನ್ನೋದೂ ಅಷ್ಟೇ ಸತ್ಯ.. ಯಾಕಂದ್ರೆ ಇವತ್ತು ಪೊಲೀಸ್ರ ಬಲೆಗೆ ತಗ್ಲಾಕ್ಕೊಂಡಿರೋ ಬಹುತೇಕ ಮೂವತ್ತೂ ಆರೋಪಿಗಳು ಇನ್ನೂ ಎಳೆಮೀಸೆಯವ್ರು.. 25 ವರ್ಷ ವಯಸ್ಸಿನ ಆಸುಪಾಸಿನವ್ರು..
– ಅಂದಹಾಗೆ ಇಲ್ಲಿ ನಿರೀಕ್ಷೆಯಂತೆ ಎರಡು ಕುಟುಂಬಗಳ ದಶಕಗಳ ಹಗೆ ಕ್ರೌರ್ಯ ಮೆರೆದಿದೆ ಅನ್ನೋದು ಮತ್ತೆ ಸಾಭೀತಾಗಿದ್ದೇನೋ ನಿಜ…ಆದ್ರೆ ಈ ಬಾರಿ ಇಲ್ಲಿ ಹುಂಬ ಮನಸ್ಸಿನ ಬಿಸಿ ರಕ್ತದ ಹುಡುಗರು ಫಿಲ್ಡಿಗಿಳಿದಿದ್ರು ಅನ್ನೋದು ಅಚ್ಚರಿ… ನಾನೂ ಡಾನ್ ಆಗಬೇಕು ಅನ್ನೊ ಹುಂಬತನ ಇಲ್ಲಿನ ಹೊಸ ಹುಡುಗರ ಕೈಗೆ ನೆತ್ತರು ಹಚ್ಚಿದೆ.. ಅಸಲು, ಮಹಾದೇವ್ ಸಾಹುಕಾರನನ್ನ ಮುಗಿಸಲು ಇಲ್ಲಿ ನಡೆದಿದ್ದು ಇದೊಂದೇ ಡೆಡ್ಲಿ ಸ್ಕೆಚ್ ಅಲ್ಲ.. ಬದಲಾಗಿ ಬರೋಬ್ಬರಿ ಮೂರು ಸಾರಿ ಇಂತಹುದ್ದೇ ಸ್ಕೆಚ್ ಹಾಕಿ ಪ್ಲಾಪ್ ಆಗಿತ್ತು ಹಂತಕರ ಟೀಂ.
ಅಂದಹಾಗೆ, ಭೀಮಾತೀರದ ಕಿಂಗ್ ಸಾಹುಕಾರ್ ಮೇಲೆ ಜಿದ್ದಿಗೆ ಬಿದ್ದಿದ್ದ ಡಿಎಂಸಿ ಗ್ರೂಪ್, ಸಾಹುಕಾರನನ್ನ ಹೇಗಾದ್ರೂ ಸರಿ ಬೇಟೆ ಆಡಲೇ ಬೇಕು ಅಂತಾ ಭಾರೀ ಸ್ಕೆಚ್ ಹಾಕಿಕೊಂಡಿರತ್ತೆ.. ಈ ಮೊದಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ್ ಅಂತ್ಯ ಸಂಸ್ಕಾರಕ್ಕೆ ಮಹದೇವ್ ಸಾಹುಕಾರ್ ಬರ್ತಿದಾನೆ ಅನ್ನೊ ಮಾಹಿತಿ ಪಡದಿದ್ದ ಗ್ಯಾಂಗ್ ಅವತ್ತೂ ಕೂಡ ಡೆಡ್ಲಿ ಅಟ್ಯಾಕ್ ಗೆ ರೆಡಿಯಾಗಿ ಕುಳಿತಿತ್ತು.. ಆದ್ರೆ ಅವತ್ತು ಅಂತ್ಯ ಸಂಸ್ಕಾರ್ ನಡೆಯೋ ಧೂಳಖೆಡ್ ಗ್ರಾಮಕ್ಕೆ ಮಾರ್ಗ ಬದಲಿಸಿಕೊಂಡು ಬಂದಿದ್ದ ಸಾಹುಕಾರ.. ಹೀಗಾಗಿ ಅವತ್ತು ಜಸ್ಟ್ ಮಿಸ್ ಆಗಿತ್ತು ಡೆಡ್ಲಿ ಪ್ಲ್ಯಾನ್.. ಆ ನಂತ್ರ ವಿಜಯಪುರದ ಕಾತ್ರಾಳ ಕ್ರಾಸ್ ಬಳಿ ಸಿದ್ದೇಶ್ವರ ಆಶ್ರಮದಲ್ಲಿನ ಸತ್ಸಂಗ ಕಾರ್ಯಕ್ರಮಕ್ಕೆ ಬರ್ತಿದಾನೆ ಅನ್ನೋ ಖಚಿತ ಮಾಹಿತಿಯ ಮೇಲೆ ಹಂತಕರ ಪಡೆ ಅವತ್ತು ನವೆಂಬರ್ 2 ರ ಬೆಳಿಗ್ಗೆ ದಾಳಿಗೆ ಸ್ಕೆಚ್ ಹಾಕಿ ಕುಳಿತುಕೊಂಡಿತ್ತು.. ಆದ್ರೆ ಆ ಸತ್ಸಂಗ ಕ್ಯಾನ್ಸಲ್ ಆಗಿ ಪ್ಲಾನ್ ಚೇಂಜ್ ಆಗಿರೋ ಕಾರಣಕ್ಕೆ ಸಾಹುಕಾರ್ ಅಲ್ಲಿ ಬರಲೇ ಇಲ್ಲ.. ಆದ್ರೆ ಅದೇ ದಿನ ಮದ್ಯಾಹ್ನ ಸೋಲ್ಲಾಪುರ ರಸ್ತೆ ಮಾರ್ಗವಾಗಿ ಮಹದೇವ ಸಾಹುಕಾರ್ ಇಂತಿಷ್ಟು ಗಂಟೆಗೆ ವಾಪಸ್ ಊರಿಗೆ ಹೋಗ್ತಿದಾನೆ ಅಂತಾ ಪಕ್ಕಾ ಮಾಹಿತಿ ಪಡೆದ ಗ್ಯಾಂಗ್ ಮದ್ಯಾಹ್ನ ಮೂರೂವರೆಗೆ ವಿಜಯಪುರ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ತೊಗರಿ ಗದ್ದೆಯಲ್ಲಿ ದಾಳಿಗೆ ಕಾದು ಕುಳಿತಿದ್ರು.. ಆ ನಂತರ ನಡೆದಿದ್ದು ಸಿನೀಮಯ ರೀತಿಯ ಡೆಡ್ಲಿ ಅಟ್ಯಾಕ್.. ಆ ಘಟನೆಯಲ್ಲಿ ಮಹದೇವ ಸಾಹುಕಾರ್ ಗೆ ಎರಡು ಗುಂಡುಗಳು ಹೊಕ್ಕಿದ್ದವು.. ಇನ್ನೊಬ್ಬ ಸಹಚರ ಬಾಬುರಾಯ್ ಸ್ಥಳದಲ್ಲೇ ಮೃತಪಟ್ಟಿದ್ದ, ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದ..
ಸಧ್ಯ ಈ ಕೇಸ್ ಗೆ ಸಂಬಂಧಿಸಿದಂತೆ ಒಟ್ಟೂ 30 ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದಾರೆ.. ಕೇಸ್ ನಲ್ಲಿ ಧರ್ಮರಾಜ ಚಡಚಣನ ತಾಯಿ ಹಾಗೂ ಭೂಗತನಾಗಿರೋ ಧರ್ಮರಾಜ ಚಡಚಣನ ತಂದೆ ಮಲ್ಲಿಕಾರ್ಜುನ ಚಡಚಣನ ಮೇಲೂ ಎಫ್ ಐಆರ್ ದಾಖಲಾಗಿದೆ.. ಸಧ್ಯ ಧರ್ಮರಾಜನ ತಾಯಿ ವಿಮಲಾಬಾಯಿ ಕೂಡ ನಾಪತ್ತೆಯಾಗಿದ್ದಾಳೆ..
ಒಟ್ನಲ್ಲಿ ಭೀಮಾತೀರದ ಮಹದೇವ ಸಾಹುಕಾರನ ಮೇಲೆ ಗುಂಡಿನ ದಾಳಿ ಮಾಡಿದ್ದ ಬಹುತೇಕ ಹಂತಕ ಆರೋಪಿಗಳು ಅಂದರ್ ಆಗಿದ್ದಾರೆ.. ಅದ್ರಲ್ಲೂ ಕೇಸ್ ನ ಕಿಂಗ್ ಪಿನ್ ಮಡುಸ್ವಾಮಿ ಅಂದರ್ ಆಗಿದ್ದು ಪೊಲೀಸ್ರು ನಿಟ್ಟುಸಿರು ಬಿಡುವಂತಾಗಿದೆ‌..

error: Content is protected !!