ಮೀಟರ್ ಬಡ್ಡಿ ದಂಧೆಯ ಆರೋಪ ಹಿನ್ನೆಲೆಯಲ್ಲಿ ಬರೋಬ್ಬರಿ ನಾಲ್ಕು ಕೇಸು ಹೊತ್ತು, ಮುಂಡಗೋಡ ಕೋರ್ಟ್ ಗೆ ಸರೆಂಡರ್ ಆಗಿರೋ NMD ಜಮೀರ್ ಅಹ್ಮದ್ ದರ್ಗಾವಾಲೆಗೆ, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಹೀಗಾಗಿ ,ಸದ್ಯ ಪೊಲೀಸರ ಅತಿಥಿಯಾಗಿರೋ ಜಮೀರ್ ಎರಡು ದಿನ ಖಾಕಿಗಳ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.
ಅಂದಹಾಗೆ..!
ಸೋಮವಾರ ತಡರಾತ್ರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ, ಮೀಟರ್ ಬಡ್ಡಿ ಕುಳಗಳಿಗೆ ಹಾಗೂ ಅಕ್ರಮಿಗಳಿಗೆ ಗಾಳ ಹಾಕಿದ್ದರು. ಇದ್ರಲ್ಲಿ, ಹಲವರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದರು ಪೊಲೀಸ್ರು. ಇದೇ ವೇಳೆ NMD ಜಮೀರ್ ಅಹ್ಮದ್ ದರ್ಗಾವಾಲೆಗೆ ಸೇರಿದ್ದವರು ಎನ್ನಲಾದ ಹುಡುಗ್ರು ಪೊಲೀಸ್ರ ಬಲೆಗೆ ಬಿದ್ದಿದ್ದರು.
ಪೊಲೀಸ್ರು ನಡೆಸಿದ್ದ ದಾಳಿ ವೇಳೆ, ಪೊಲೀಸರ ಕೈಗೆ ಸಿಗದೆ ಈತ ತಪ್ಪಿಸಿಕೊಂಡಿದ್ದ ಅಂತ ಹೇಳಲಾಗಿತ್ತು. ಹೀಗಾಗಿ, NMD ಜಮೀರ್ ಗಾಗಿ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸ್ರು, ಹೇಗಾದ್ರೂ ಸರಿ ಆತನನ್ನು ಬಂಧಿಸುವ ಪಣ ತೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಇದನ್ನರಿತ ಜಮೀರ್ ಅಹ್ಮದ್ ದರ್ಗಾವಾಲೆ ಮುಂಡಗೋಡ ಕೋರ್ಟಿಗೆ ಶರಣಾಗಿದ್ದ.
ಈತನ ಮೇಲೆ 4 ಕೇಸು..?
ಅಂದಹಾಗೆ, ಇತ್ತಿಚೆಗಷ್ಟೇ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ,ಕಿಡ್ನಾಪ್ ಕೇಸಲ್ಲಿ ಕಿಡ್ನಾಪ್ ಆಗಿದ್ದವನೇ ಈ ಜಮೀರ್ ಅಹ್ಮದ್ ದರ್ಗಾವಾಲೆ, ಪೊಲೀಸ್ ಮೂಲಗಳು ನೀಡಿದ ಮಾಹಿತಿಯಂತೆ, ಈತನ ಮೇಲೆ ಈಗಾಗಲೇ ನಾಲ್ಕು ಪ್ರಕರಣಗಳು ದಾಖಲಾಗಿವೆಯಂತೆ. ಹೀಗಾಗಿ, ಈತನನ್ನು ಅರೆಸ್ಟ್ ಮಾಡಲು ಇಡೀ ಪೊಲೀಸ್ ಟೀಂ ಕಾದು ಕುಳಿತಿತ್ತು ಎನ್ನಲಾಗಿದ್ದು, ಅದನ್ನರಿತ NMD ಜಮೀರ್ ಅಹ್ಮದ್ ದರ್ಗಾವಾಲೆ ಡೈರೆಕ್ಟಾಗಿ ಕೋರ್ಟಿಗೆ ಶರಣಾಗಿದ್ದ ಅಂತಾ ತಿಳಿದು ಬಂದಿದೆ.
ಅಸಲು, ಸದ್ಯ ಮುಂಡಗೋಡಿನ ಮೀಟರ್ ಬಡ್ಡಿ ದಂಧೆಯಲ್ಲಿದ್ದ ಹಲವರು ತಲೆಮರಿಸಿಕೊಂಡಿದ್ದು, ಅವರಿಗಾಗಿಯೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.