ಮುಂಡಗೋಡ ಪೊಲೀಸರು ಅಲರ್ಟ್ ಆಗಿದ್ದಾರೆ. ಹೀಗಾಗಿನೆ, ಪಟ್ಟಣದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಬೇಧಿಸಿದ್ದಾರೆ. ಜನೆವರಿ 27 ರಂದು ನಡೆದಿದ್ದ ಮನೆಗಳ್ಳತನ ಕೇಸಲ್ಲಿ ಇಬ್ಬರು ಲೋಕಲ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಅಂದಹಾಗೆ, ಮೊನ್ನೆ ಜನೆವರಿ 27 ರಂದು ಹಾಡಹಗಲೇ ಪಟ್ಟಣದ ವಡ್ಡರ ಓಣಿಯಲ್ಲಿನ ತಿಪ್ಪವ್ವ ತಿಪ್ಪಣ್ಣ ವಡ್ಡರ್ ಎಂಬುವವರ ಮನೆಗೆ ಹಿಂಬಾಗಿಲಿನಿಂದ ನುಗ್ಗಿ, ಟ್ರಿಜರಿಯಲ್ಲಿ ಇಟ್ಟಿದ್ದ , 05 ಗ್ರಾಂ ಬಂಗಾರದ 32 ಗುಂಡುಗಳು ಇರುವ ಬೋರ್ ಮಾಳ ಸರ್-01. ಅಂದಾಜು ಮೊತ್ತ 30.000/-ರೂ. 03 ಗ್ರಾಂ ಬಂಗಾರದ ಜಾಲರಿ 01 ಜೊತೆ ಅಂದಾಜು ಮೊತ್ತ 15.000/- ರೂ. 01 ಜೋತೆ ಬೆಂಡೋಲಿ ಅಂದಾಜು ಮೊತ್ತ 15.000/-ರೂ ಹಾಗೂ ನಗದು ಹಣ 2000/- ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಹೀಗಾಗಿ, ಮನೆಯ ಯಜಮಾನಿ ಮುಂಡಗೋಡ ಪೊಲೀಸರಿಗೆ ದೂರು ನೀಡಿದ್ದಳು.
ಮುಂಡಗೋಡ ಸುಭಾಸ ನಗರದ ಪ್ರವೀಣ ಬಸವರಾಜ ಭೋವಿ(23), ಕ್ಯಾಸನಕೇರಿಯ ರಾಕೇಶ ತಂದೆ ಹನುಮಂತ ಹೆಬ್ಬಳ್ಳಿ (21) ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿತರಿಂದ ದರೋಡೆ ಮಾಡಿದ 10 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತು ಪಡಿಸಿಕೊಂಡಿದ್ದಾರೆ.
ಈ ಕೇಸಲ್ಲಿ ಎಸ್ಪಿ ಎಮ್. ನಾರಾಯಣ ಎಎಸ್ಪಿ ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ ಪಿಎಸ್ಐ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ಮಂಜಪ್ಪ ಚಿಂಚಿಲಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.