ಮುಂಡಗೋಡ: ಪಟ್ಟಣದ ವಲಯ ಅರಣ್ಯಾಧಿಕಾರಿ ಪರಮೇಶ್ವರ ದಾಸಪ್ಪ ಎಂಬುವವರಿಗೆ BSNL ಸಿಮ್ ಬ್ಲಾಕ್ ಆಗತ್ತೆ ಅಂತಾ ಸಂದೇಶ ಕಳುಹಿಸಿ, ಆನ್ಲೈನ್ ಖದೀಮರು ಬರೋಬ್ಬರಿ 72 ಸಾವಿರ ರೂಪಾಯಿ ವಂಚಿಸಿರೋ ಘಟನೆ ನಡೆದಿದೆ.
ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಕುರಿತು ವಲಯ ಅರಣ್ಯಾಧಿಕಾರಿ, ಪರಮೇಶ್ವರ ದಾಸಪ್ಪ ದೂರು ದಾಖಲಿಸಿದ್ದಾರೆ..
ಹಿಂದಿ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದ ವ್ಯಕ್ತಿ ಸದ್ಯದಲ್ಲಿಯೇ ನಿಮ್ಮ ಸಿಮ್ ಬ್ಲಾಕ್ ಆಗತ್ತೆ ಹೀಗಾಗಿ ಅಪಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ನಂತ್ರ ಕ್ವಿಕ್ ಆ್ಯಪ್ ಡೌನ್ ಲೋಡ್ ಮಾಡಿಸಿ ಓಟಿಪಿ ಪಡೆದಿದ್ದಾರೆ.. ಆ ಮೂಲಕ ಅವ್ರ ಅಕೌಂಟಿನಿಂದ ಬರೊಬ್ಬರಿ 72 ಸಾವಿರ ರೂಪಾಯಿ ಎಗರಿಸಿದ್ದಾರೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಆನಲೈನ್ ವಂಚಕರ ಹಾವಳಿ ಜೋರಾಗಿದ್ದು ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪಿಎಸ್ಐ ಬಸವರಾಜ್ ಮಬನೂರು ಎಚ್ಚರಿಸಿದ್ದಾರೆ..