ಮುಂಡಗೋಡಿನಲ್ಲಿ ತಡರಾತ್ರಿ ತಾಲೂಕಿನ ಮಟ್ಟಿಗೆ ಇತಿಹಾಸದಲ್ಲಿ ಎಂದೂ ಕೇಳರಿಯದ ಪೊಲೀಸ್ ದಾಳಿ ನಡೆದಿದೆ. ಮೀಟರ್ ಬಡ್ಡಿ ಕುಳಗಳನ್ನೇ ಟಾರ್ಗೆಟ್ ಮಾಡಿ ಪೊಲೀಸ್ರು ರೇಡ್ ಮಾಡಿದ್ದಾರೆ ಎನ್ನಲಾಗ್ತಿದೆ. ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲೂ ಹಲವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಪೊಲೀಸ್ರು, ಪರಿಣಾಮ, ಹಲವರು ಪೊಲೀಸರ ವಶಕ್ಕೆ ತಗಲಾಕ್ಕೊಂಡಿದ್ದರೆ, ಇನ್ನೂ ಹಲವರು ಪರಾರಿಯಾಗಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಆದ್ರೆ, ಹಾಗೆ ದಾಳಿ ಮಾಡಿದ್ದವರು ನಮ್ಮ ಮುಂಡಗೋಡಿನ ಪೊಲೀಸರು ಅಲ್ಲವೇ ಅಲ್ಲ. ಬದಲಾಗಿ ಕಾರವಾರದ ಖಡಕ್ ಎಸ್ಪಿ ಎಂ. ನಾರಾಯಣ್ ಸಾಹೇಬ್ರು ರಚಿಸಿರೋ ಬಲಿಷ್ಟ ಟೀಂ..!
50 ಕ್ಕೂ ಹೆಚ್ಚು ವಾಹನ, ಅದ್ರಲ್ಲಿ ಅಧಿಕಾರಿಗಳು..!
ಅಸಲು, ಮೀಟರ್ ಬಡ್ಡಿ ದಂಧೆಕೋರರನ್ನೇ ಟಾರ್ಗೆಟ್ ಮಾಡಿ ಕಾರವಾರ ಸೇರಿದಂತೆ, ಜಿಲ್ಲೆಯ ಹಲವು ಠಾಣೆಗಳ ಸಿಪಿಐ, ಪಿಎಸ್ಐ, ಎಎಸ್ಐಗಳು, ಪೇದೆಗಳು ಸೇರಿ ಸುಮಾರು ನೂರಕ್ಕೂ ಅಧಿಕ ಅಧಿಕಾರಿ ಪಡೆ ಏಕಕಾಲದಲ್ಲಿ ದಾಳಿ ಮಾಡಿದೆ. ಆದ್ರೆ, ಈ ವೇಳೆ ಹಲವರನ್ನು ವಶಕ್ಕೆ ಪಡೆಯಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದ್ದು, ಬಹುತೇಕರು ದಾಳಿ ವೇಳೆ ಪರಾರಿಯಾಗಿದ್ದಾರೆ ಅನ್ನೋ ಬಾತ್ಮಿ ಬಂದಿದೆ. ಸೋಮವಾರ ರಾತ್ರಿ 11 ಗಂಟೆಯಿಂದ ಶುರುವಾಗಿದ್ದ ದಾಳಿ, ಇಡೀ ಮುಂಡಗೋಡಿಗರಿಗೆ ಒಂದು ರೀತಿಯ ಅಚ್ಚರಿ ನೀಡಿತ್ತು.
ಮೊದಲೇ ಮಾಹಿತಿ ಇತ್ತಾ..?
ಅಸಲು, ಮುಂಡಗೋಡಿನಲ್ಲಿ ಸೋಮವಾರ ರಾತ್ರಿ ನಡೆದ ಪೊಲೀಸ್ ದಾಳಿ ಬಹುತೇಕ ವಿಫಲ ಅಂತಲೇ ವಿಶ್ಲೇಷಿಸಲಾಗ್ತಿದೆ. ಇದು ಸರ್ಪೈಸ್ ದಾಳಿಯಾಗಿರಲಿಲ್ಲವೋ ಏನೋ ಅನ್ನೋ ಅನುಮಾನ ಶುರುವಾಗಿದೆ. ಈ ದಾಳಿಯ ಬಗ್ಗೆ ಮುಂಡಗೋಡಿನಲ್ಲಿ ಬಹುತೇಕ ಸಣ್ಣದೊಂದು ಮಾತು ರವಿವಾರದಿಂದಲೂ ಇದ್ದೇ ಇತ್ತು, ಹೀಗಾಗಿನೇ ಮುಂಡಗೋಡಿನಲ್ಲಿ ನಿತ್ಯವೂ ನಿರಾತಂಕವಾಗಿ ನಡೆಯುತ್ತಿದ್ದ ಕೆಲ ಅಕ್ರಮ ದಂಧೆಗಳು ಸೋಮವಾರ ಬಾಗಿಲಿಗೆ ಬೀಗ ಜಡೆದುಕೊಂಡಿದ್ದವು. ವಿಚಿತ್ರ ಅಂದ್ರೆ ನಿನ್ನೆ ಸೋಮವಾರ ಸಂತೆಯ ದಿನ ಭರ್ಜರೀ ಕಮಾಯಿ ಮಾಡುತ್ತಿದ್ದ ಕೆಲ ದಂಧೆಗಳು ಅದ್ಯಾಕೆ ಬಂದ್ ಆಗಿವೆ..? ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಇದ್ದೇ ಇತ್ತು. ಅದು ರಾತ್ರಿ ಪೊಲೀಸರ ದಾಳಿಯ ಸಲುವಾಗಿನೇ ಮುಂಜಾಗ್ರತಾ ಕ್ರಮವಾ..? ಅನ್ನೊ ಅನುಮಾನ ಈಗ ಶುರುವಾಗಿದೆ. ಹಾಗಿದ್ರೆ, ಮಾನ್ಯ ಎಸ್ಪಿಯವರ ಖಡಕ್ ದಾಳಿಯ ಬಗ್ಗೆ ಇಲ್ಲಿ ಮೊದಲೇ ಅಲರ್ಟ್ ಮಾಡಲಾಗಿತ್ತಾ..? ಹಾಗಿದ್ರೆ, ಹಾಗೆ ಅಕ್ರಮಿಗಳನ್ನು ಅಲರ್ಟ್ ಮಾಡಿದವ್ರು ಯಾರು..? ಇದೇಲ್ಲ ಬಹುಶಃ ಯಕ್ಷ ಪ್ರಶ್ನೆ ಎಂಬಂತಾಗಿದೆ.
ಎಲ್ಲೇಲ್ಲೂ ಪೊಲೀಸ್ ಜೀಪ್..!
ಅಂದಹಾಗೆ, ಸೋಮವಾರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಬಂದಿಳಿದಿದ್ದ ಪೊಲೀಸರ ಟೀಂ ತಂಡ, ತಂಡವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲೂ ದಾಳಿಗೆ ಇಳಿದಿದ್ದರು. ಇದ್ರಲ್ಲಿ ಕೆಲವ್ರು ಖಾಲಿ ಕೈಯಿಂದ ವಾಪಸ್ ಬಂದ್ರೆ, ಕೆಲವು ಟೀಂ ಭರ್ಜರಿಯಾಗಿ ಕೆಲವ್ರನ್ನು ವಶಕ್ಕೆ ಪಡೆದುಕೊಂಡೆ ಬಂದಿದೆ. ಹೀಗಾಗಿ, ತಡರಾತ್ರಿಯವರೆಗೂ ಖಾಕಿಗಳ ಸರ್ಚಿಂಗ್ ನಡೆದೇ ಇತ್ತು. ಆದ್ರೆ, ದಾಳಿ ವೇಳೆ ಏನೇಲ್ಲ ಸಿಕ್ಕಿದೆ..? ಎಷ್ಟು ಜನರನ್ನು ವಶಕ್ಕೆ ಪಡೆಯಲಾಗಿದೆ..? ಅನ್ನೊ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ.
ಇದೇಲ್ಲದರ ನಡುವೆ..!
ಅದೇನೇ ಆಗಲಿ, ಇದೇಲ್ಲದರ ನಡುವೆ ಪ್ರಮಾಣಿಕ, ಕರ್ತವ್ಯನಿಷ್ಟ ಪೊಲೀಸರ ಟೀಂ ಗಳು ತಮಗೊಪ್ಪಿಸಿದ ಕಾರ್ಯ ಭರ್ಜರಿಯಾಗೇ ಮಾಡಿಹೋಗಿವೆ ಎನ್ನಲಾಗಿದೆ. ಆದ್ರೆ ಕೆಲವೊಂದಿಷ್ಟು ಯಶಸ್ಸಿನೊಂದಿಗೆ ಸೋಮವಾರದ ದಾಳಿ ಬಹುತೇಕ ವಿಫಲ ಅಂತಲೇ ಹೇಳಲಾಗ್ತಿದೆ. ಹಾಗಿದ್ರೆ, ಈ ರಣರೋಚಕ ದಾಳಿಯ ಬಗ್ಗೆ ಮುಂಡಗೋಡಿನಲ್ಲಿ ಮೊದಲೇ ಅಲರ್ಟ್ ಮಾಡಿದವರು ಯಾರು..? ಈ ಬಗ್ಗೆ ಮಾನ್ಯ ಎಸ್ಪಿಯವರು ಯೋಚಿಸಬೇಕಿದೆ. ಒಂದಂತೂ ಸತ್ಯ, ಇಂತಹದ್ದೊಂದು ಭಾರೀ ದಾಳಿ, ಮುಂಡಗೋಡಿಗರಿಗೆ ದೈರ್ಯ ತುಂಬಿದೆ. ಜೊತೆಗೆ ಅಕ್ರಮಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದೆ.